ಸಂತೋಷ್ ಲಾಡ್ ಸಭೆಗೆ ಬಂದ APMC ಅಧಿಕಾರಿಗಳಿಗೆ ಪಜೀತಿ, ಅರ್ಧಕ್ಕೆ ನಿಂತ ಲಿಫ್ಟ್!
ಧಾರವಾಡ, ಜೂನ್ 25: ರಾಜ್ಯ ಸರ್ಕಾರ ಅನುದಾನ ದುರ್ಬಳಕೆ ಆಗಬಾರದು ಸದ್ಳಳಕೆ ಆಗಬೇಕು. ಹೈಟೆಕ್ ನರ್ಸರಿ ಎಂದರೆ ಅದು ಸಿಂಗಾಪೂರ್‌ನಾ? ಎಂದು ಪ್ರಶ್ನಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಅರಣ್ಯ ಇಲಾಖೆಯ ಅಧಿಕಾರಿಗೆ ಖಡಕ್ ವಾರ್ನಿಂಗ್ ಕೊಟ್ಟರು.
ಮಂಗಳವಾರ ಧಾರವಾಡದಲ್ಲಿ ನಡೆದ ನಾಲ್ಕನೇಯ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವರು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪುಲ್ ಕ್ಲಾಸ್ ತೆಗೆದುಕ್ಕೊಂಡ ಘಟನೆ ನಡೆಯಿತು. 94 ಲಕ್ಷ ಅನುದಾನದಲ್ಲಿ ಹೈಟೆಕ್ ನರ್ಸರಿ ನಿರ್ಮಾಣ ಮಾಡಲು ಸರ್ಕಾರದಿಂದ ಅನುದಾನ ಬಿಡುಗಡೆಯಾಗಿತ್ತು.

ಅನುದಾನವನ್ನು ಬಳಕೆ ಮಾಡದೆ ಇರುವುದಕ್ಕೆ ಸಚಿವ ಲಾಡ್ ಗರಂ ಆದರು. ಅರಣ್ಯ ಇಲಾಖೆಯ ಅನುದಾನವನ್ನು ಸರಿಯಾಗಿ ಬಳಕೆ ಮಾಡಿಕ್ಕೊಳ್ಳದಿರುವುದು ಗೊತ್ತಾಗಿದೆ. ಅಲ್ಲದೇ ಹೈಟೆಕ್ ನರ್ಸರಿ ಹೈಟೆಕ್ ನರ್ಸರಿ ಎಂದು ಹೇಳುತ್ತಿದ್ದ ಜಿಲ್ಲಾ ಅರಣ್ಯ ಅಧಿಕಾರ ವಿವೇಕ್ ಕವರಿ ಅವರಿಗೆ ಸಂತೋಷ್ ಲಾಡ್ ಖಡಕ್ ವಾರ್ನಿಂಗ್ ಕೊಟ್ಟರು. ಹೈಟೆಕ್ ನರ್ಸರಿ ಎಂದರೆ ಸಿಂಗಾಪೂರನಾ? ಎಂದು ಪ್ರಶ್ನಿಸಿದ ಸಚಿವರಿಗೆ ಅಧಿಕಾರಿಗಳು ಉತ್ತರಿಸುವಾಗ ತಡವರಿಸಿದರು.
ನರ್ಸರಿ ನಿರ್ಮಾಣದ ಕಾಮಗಾರಿ ಪ್ರಗತಿ ಬಗ್ಗೆ ಪ್ರಶ್ನಿಸಿದರೆ ಅಧಿಕಾರಿಗಳಿಂದ ಯಾವುದಕ್ಕೂ ಉತ್ತರ ಬರಲಿಲ್ಲ ಆಗ ಸಂತೋಷ್ ಲಾಡ್ ಮತ್ತಷ್ಟು ಗರಂ ಆದರು. ಇದೇ ವೇಳೆ ಹಲವು ವಿಷಯಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಸೂಚನೆ ಕೊಟ್ಟರು.

ಲಿಫ್ಟ್‌ನಲ್ಲಿ ಸಿಲುಕಿಕೊಂಡ ಅಧಿಕಾರಿಗಳು
ಧಾರವಾಡ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಮಾಸಿಕ ಕೆಡಿಪಿ ಸಭೆಗೆ ಹಾಜರಾಗಲು ಬಂದಿದ್ದ ಎಪಿಎಂಸಿ ಅಧಿಕಾರಿಗಳು ಲಿಫ್ಟ್‌ನಲ್ಲಿ ಸಿಲುಕಿಕೊಂಡ ಘಟನೆ ನಡೆದಿದೆ.
ಜಿಲ್ಲಾ ಪಂಚಾಯಿತಿ ಎರಡನೇ ಮಹಡಿಯಲ್ಲಿ ಕೆಡಿಪಿ ಸಭೆ ನಡೆದಿತ್ತು. ಈ ಸಭೆಗೆ ಲಿಫ್ಟ್ ಮೂಲಕ ಬರುತ್ತಿದ್ದ ಎಪಿಎಂಸಿಯ ಇಬ್ಬರು ಮಹಿಳಾ ಅಧಿಕಾರಿಗಳು ಹಾಗೂ ಮೂವರು ಪುರುಷರು ಲಿಫ್ಟ್‌ನಲ್ಲೇ ಲಾಕ್ ಆಗಿ ಪರದಾಡಿದ್ದಾರೆ. 15 ನಿಮಿಷಗಳ ಕಾಲ ಲಿಫ್ಟ್‌ನಲ್ಲೇ ಅಧಿಕಾರಿಗಳು ಪರದಾಡಿದ್ದಾರೆ.
ಆನಂತರ ಸ್ಥಳಕ್ಕೆ ಲಿಫ್ಟ್ ಮೆಕ್ಯಾನಿಕ್‌ನ್ನು ಕರೆಯಿಸಿ ಲಿಫ್ಟ್ ಕೆಳಗೆ ಇಳಿಸಲಾಗಿದೆ. ಆ ಮೂಲಕ ಚೇರ್ ಇಟ್ಟು ಮೂವರನ್ನು ಕೆಳಗಡೆ ಇಳಿಸಲಾಗಿದೆ. ಅಗತ್ಯಕ್ಕಿಂತ ಹೆಚ್ಚಿನ ಭಾರ ಆಗಿದ್ದರಿಂದ ಲಿಫ್ಟ್ ಲಾಕ್ ಆಗಿತ್ತು. 15 ನಿಮಿಷಗಳ ನಂತರ ಅಧಿಕಾರಿಗಳು ಸಭೆಗೆ ಹಾಜರಾಗಬೇಕಾಯಿತು. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಯಾವುದೇ ಹಾನಿ ಆಗಿಲ್ಲ ಎಂದು ತಿಳಿದು ಬಂದಿದೆ.












Click it and Unblock the Notifications