ಪ್ರತ್ಯೇಕ ರಾಜ್ಯದ ಕೂಗಿಗೆ ಮತ್ತೆ ಹುಮ್ಮಸ್ಸು ತುಂಬಿದ ಪಾಟೀಲ್ ಪುಟ್ಟಪ್ಪ

ಧಾರವಾಡ, ಜುಲೈ 14 : ಕರ್ನಾಟಕದಲ್ಲಿ ಮತ್ತೆ ಪ್ರತ್ಯೇಕ ರಾಜ್ಯದ ಕೂಗು ಕೇಳಿಬಂದಿದೆ. ಹಿರಿಯ ಪತ್ರಕರ್ತ ಪಾಟೀಲ್ ಪುಟ್ಟಪ್ಪ ಉತ್ತರ ಕರ್ನಾಟಕದ ಪ್ರತ್ಯೇಕ ರಾಜ್ಯದ ಕೂಗಿಗೆ ಬೆಂಬಲ ನೀಡಬೇಕಾಗುತ್ತದೆ ಎಂದು ಹೇಳಿದರು.

ಧಾರವಾಡದಲ್ಲಿ ಶನಿವಾರ ನಾಡೋಜ ಪಾಟೀಲ್ ಪುಟ್ಟಪ್ಪ ಅವರು ಪತ್ರಿಕಾಗೋಷ್ಠಿ ನಡೆಸಿದರು. 'ಉತ್ತರ ಕರ್ನಾಟಕಕ್ಕೆ ಇದೇ ರೀತಿ ತಾರತಮ್ಯ ಮುಂದುವರೆದರೆ ಪ್ರತ್ಯೇಕ ರಾಜ್ಯದ ಧ್ವನಿಗೆ ಬೆಂಬಲ ನೀಡಬೇಕಾಗುತ್ತದೆ' ಎಂದರು.

'ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿರುವ ಮೈತ್ರಿ ಸರ್ಕಾರ ಮೈಸೂರು ಭಾಗದವರಿಗೆ ನಿರ್ಮಾಣವಾದಂತಿದೆ. ಇದೇ ರೀತಿ ಧೋರಣೆ ಮುಂದುವರೆದರೆ ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯುತ್ತದೆ' ಎಂದು ತಿಳಿಸಿದರು.

Now Patil Puttappa raises voice for North Karnataka separate state

'ಪ್ರತ್ಯೇಕ ರಾಜ್ಯದ ಧ್ವನಿಗೆ ಬೆಂಬಲ ನೀಡಬೇಕಾಗುತ್ತದೆ. ಬಳ್ಳಾರಿ, ದಾವಣಗೆರೆ, ಕಲಬುರಗಿಯಲ್ಲಿ ಸಭೆ ಮಾಡಬೇಕಿದೆ. ಪ್ರತ್ಯೇಕ ಕರ್ನಾಟಕದ ಬಗ್ಗೆ ಗಂಭೀರ ಚಿಂತನೆ ನಡೆಸುತ್ತೇವೆ' ಎಂದು ಪಾಟೀಲ್ ಪುಟ್ಟಪ್ಪ ಹೇಳಿದರು.

'ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಕುರಿತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ವಿವರಣೆ ನೀಡುತ್ತೇವೆ. ದೇವೇಗೌಡರು ಭಾನುವಾರ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ' ಎಂದರು.

'ರಾಜ್ಯದಲ್ಲಿ 1ನೇ ತರಗತಿಯಿದ ಇಂಗ್ಲೀಷ್ ಕಲಿಕೆ ಬೇಡ. ಆರಂಭದಿಂದಲೇ ಇಂಗ್ಲೀಷ್ ಬೇಕು ಎಂಬುವುದನ್ನು ನಾವು ಒಪ್ಪುವುದಿಲ್ಲ. ಅಸ್ಸಾಂ, ಪಂಜಾಬ್, ಕೇರಳ ಹೀಗೆ ಹಲವು ರಾಜ್ಯಗಳಲ್ಲಿ ಇಂಗ್ಲೀಷ್ ವ್ಯಾಮೋಹ ಅಂಟಿಕೊಂಡಿದೆ' ಎಂದು ದೂರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+