ಹುಬ್ಬಳ್ಳಿಯಲ್ಲಿ ಆಟೋ ಚಾಲಕರು ಹೇಳಿದ್ದೇ ಮೀಟರ್ ರೇಟ್!

ಹುಬ್ಬಳ್ಳಿ, ನವೆಂಬರ್ 28 : ಬೇರೆ ಊರಿನಿಂದ ಹುಬ್ಬಳ್ಳಿಗೆ ಬಂದಾಗ ನಿಮಗೆ ಈ ಅನುಭವ ಆಗಿರಬೇಕು. ಹೌದು, ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಸಂಚರಿಸುವ ಸಾವಿರಾರು ಆಟೋಗಳಲ್ಲಿ ಒಂದಕ್ಕೂ ಮೀಟರ್ ಇಲ್ಲ.

ನಿತ್ಯ ಪ್ರಯಾಣಿಕರು ಮತ್ತು ಆಟೋ ಚಾಲಕರು ಚೌಕಾಸಿ ಮಾಡುವ ದೃಶ್ಯಗಳು ಅವಳಿನಗರದಲ್ಲಿ ಸಾಮಾನ್ಯವಾಗಿವೆ. ಆಟೋಗಳಿಗೆ ಮೀಟರ್ ಕಡ್ಡಾಯ ಮಾಡಿದ್ದರೂ, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ಅದು ಜಾರಿಗೆ ಬಂದಿಲ್ಲ.

ಜಿಲ್ಲಾ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಹಾಗೂ ಪ್ರಾಧಿಕಾರದ ಕಾರ್ಯದರ್ಶಿಯಾಗಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಲವು ಬಾರಿ ಸೂಚನೆಗಳನ್ನು ಕೊಟ್ಟರೂ ಆಟೋ ಚಾಲಕರು ಮಾತ್ರ ಮೀಟರ್ ಅಳವಡಿಸಿಕೊಂಡಿಲ್ಲ. ಮೀಟರ್‌ನಷ್ಟು ಹಣವನ್ನು ಪಡೆಯುವುದಿಲ್ಲ.

No auto driver is ready to go by the meter in Hubballi

ಪ್ರಯಾಣಿಕರು ಆಟೋ ಚಾಲಕರನ್ನು ಮೀಟರ್ ಏಕೆ ಹಾಕಿಲ್ಲ? ಎಂದು ಪ್ರಶ್ನಿಸಿದರೆ ಸಾಕು, ಆಟೋ ಚಾಲಕರು ಮೀಟರ್ ದುರಸ್ತಿಯಾಗಿಲ್ಲ. ತೂಕ ಮತ್ತು ಮಾಪನ ಇಲಾಖೆಯಿಂದ ಪ್ರಮಾಣಪತ್ರ ದೊರೆತಿಲ್ಲ ಎಂದು ಸಬೂಬು ಹೇಳುತ್ತಾರೆ.

ಸಾರಿಗೆ ಆಯುಕ್ತರು ಅಟೋ ಚಾಲಕರ ಜೊತೆಯಲ್ಲಿ ಹಲವಾರು ಸಭೆಗಳನ್ನು ಮಾಡಿದ್ದು, ಮೀಟರ್ ದರದಷ್ಟೆ ಹಣ ಪಡೆಯಬೇಕು ಎಂದು ಆಟೋ ಚಾಲಕರಿಗೆ ಸೂಚನೆ ನೀಡಿದ್ದಾರೆ. ಆದರೆ, ಚಾಲಕರು ಮೀಟರ್ ದರದಷ್ಟೇ ಹಣ ಪಡೆಯಲು ಹಿಂದೆ ಮುಂದೆ ನೋಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+