• search
  • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟ್ರಕ್ ಮುಷ್ಕರ: ಹುಬ್ಬಳ್ಳಿ-ಧಾರವಾಡದಲ್ಲಿ ಪರದಾಟ

By ಶಂಭು
|

ಹುಬ್ಬಳ್ಳಿ, ಅಕ್ಟೋಬರ್, 04: ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಸಂಗ್ರಹಿಸುತ್ತಿರುವ ಟೋಲ್, ಹಳೆ ವಾಹನಗಳಿಗೆ ವೇಗ ನಿಯಂತ್ರಣ ಅಳವಡಿಸುವುದನ್ನು ಖಂಡಿಸಿ ದೇಶಾದ್ಯಂತ ನಡೆಯುತ್ತಿರುವ ಲಾರಿ ಮುಷ್ಕರದ ಬಿಸಿ ಹುಬ್ಬಳ್ಳಿ ಧಾರವಾಡಕ್ಕೆ ಬಲವಾಗಿ ತಟ್ಟಿದೆ.

ಲಾರಿ ಮುಷ್ಕರ 4ನೇ ದಿನಕ್ಕೆ ಕಾಲಿಟ್ಟಿದ್ದು, ಹುಬ್ಬಳ್ಳಿ ನಗರದಲ್ಲಿ ಲಾರಿ ಮುಷ್ಕರದ ಬಿಸಿ ಸಾರ್ವಜನಿಕರಿಗೆ ತಟ್ಟಲಾರಂಭಿಸಿದೆ. ಕಟ್ಟಡ ಕಾಮಗಾರಿ ಕೈಗೊಂಡಿರುವ ಅನೇಕ ಮನೆಗಳ ಮಾಲೀಕರು ಮತ್ತು ಅಪಾರ್ಟ್ಮೆಂಟ್ ಕಟ್ಟುತ್ತಿರುವ ಬಿಲ್ಡರ್ ಗಳು ಕಬ್ಬಿಣ, ಸಿಮೆಂಟ್, ಮರಳು, ಜಲ್ಲಿಕಲ್ಲು ಮತ್ತು ಇತರ ಕಟ್ಟಡ ಸಾಮಗ್ರಿಗಳಿಲ್ಲದೇ ಪರದಾಡುತ್ತಿದ್ದಾರೆ. ಟ್ರಾಕ್ಟರ್ ಗಳಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. [ವಾರ್ಷಿಕ ಟೋಲ್ ಸಂಗ್ರಹ ವ್ಯವಸ್ಥೆಗೆ ಆಗ್ರಹ]

ಆದರೆ, ಪೆಟ್ರೋಲಿಯಂ ಕಂಪನಿಗಳ ಮಾಲೀಕರು ಮುಷ್ಕರಕ್ಕೆ ಬೆಂಬಲ ಸೂಚಿಸದೇ ಇರುವುದರಿಂದ ಎಲ್ಲೆಡೆ ಪೆಟ್ರೋಲ್ ಮತ್ತು ಡಿಸೇಲ್ ಕೊರತೆ ಉಂಟಾಗಿಲ್ಲ. [ಅ.14ಕ್ಕೆ ರಾಷ್ಟ್ರವ್ಯಾಪ್ತಿ ಮೆಡಿಕಲ್ ಶಾಪ್ ಗಳ ಬಂದ್]

ನಗರದ ಹೊರವಲಯದಲ್ಲಿ ಸಾಲುಗಟ್ಟಿ ನಿಂತಿರುವ ಲಾರಿಗಳೊಂದಿಗೆ ಹೊರ ರಾಜ್ಯದ ಚಾಲಕ ಮತ್ತು ಕ್ಲೀನರ್ ಗಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ತಾವೇ ಅಲ್ಲಿಯೇ ಅಡುಗೆ ಮಾಡಿಕೊಂಡು ಊಟ ಮಾಡುತ್ತ ಮುಷ್ಕರ ಯಾವಾಗ ಮುಗಿಯುತ್ತೋ ಎಂದು ಕಾಯುತ್ತಿದ್ದಾರೆ. (ಚಿತ್ರ: ಕಿರಣ ಬಾಕಳೆ, ಹುಬ್ಬಳ್ಳಿ)

ಸ್ವಯಂಪ್ರೇರಣೆಯಿಂದ ಮುಷ್ಕರ

ಸ್ವಯಂಪ್ರೇರಣೆಯಿಂದ ಮುಷ್ಕರ

ಅಪ್ಲಿಕೇಷನ್ ಆಧರಿಸಿ ಟ್ಯಾಕ್ಸಿ ಸೇವೆ ನೀಡುತ್ತಿರುವ ಕಂಪನಿಗಳ ವಿರುದ್ಧವೂ ಕೂಡ ಮುಷ್ಕರ ನಡೆಸುತ್ತಿರುವ ಲಾರಿ ಮಾಲೀಕರು, ಒತ್ತಾಯಪೂರ್ವಕವಾಗಿ ಯಾರನ್ನೂ ಮುಷ್ಕರ ಬೆಂಬಲಿಸಿ ಎಂದು ನಾವು ಕೇಳಿಲ್ಲ. ಸ್ವಯಂಪ್ರೇರಣೆಯಿಂದ ಲಾರಿಗಳು ಮುಷ್ಕರದಿಂದ ನಿಂತಿವೆ ಎನ್ನುತ್ತಾರೆ.

ಟ್ರಕ್ ಮಾಲೀಕರಿಗೆ ನಷ್ಟ

ಟ್ರಕ್ ಮಾಲೀಕರಿಗೆ ನಷ್ಟ

ಪ್ರತಿ ದಿನಕ್ಕೆ 400 ಕಿ.ಮೀ ದೂರ ಕ್ರಮಿಸುತ್ತಿದ್ದ ಟ್ರಕ್ ಗಳು ಈಗ 250 ಕಿ.ಮೀ ದಾಟುವುದು ಕಷ್ಟವಾಗುತ್ತಿದೆ. ಇಂಧನ ಬಳಕೆ ಕೂಡಾ ಇಲ್ಲಿ ಗಮಿಸಬೇಕಾಗುತ್ತದೆ. ನಿಧಾನಗತಿ ಸಾಗಾಟ, ಇಂಧನ ಬಳಕೆ ವ್ಯಯ ಲೆಕ್ಕ ಹಾಕಿದರೆ 87,000 ಕೋಟಿ ರು ನಷ್ಟವಾಗುತ್ತಿದೆ

ಮುಷ್ಕರ ಮುಂದುವರೆಯುವ ಸೂಚನೆ

ಮುಷ್ಕರ ಮುಂದುವರೆಯುವ ಸೂಚನೆ

ಇನ್ನೆರಡು ದಿನಗಳಲ್ಲಿ ಲಾರಿ ಮುಷ್ಕರದ ಬಿಸಿ ಸಾರ್ವಜನಿಕರಿಗೆ ತಟ್ಟಲಾರಂಭಿಸುವುದರಲ್ಲಿ ಸಂಶಯವೇ ಇಲ್ಲ.ಪೆಟ್ರೋಲಿಯಂ ಕಂಪನಿಗಳ ಮಾಲೀಕರು ಮುಷ್ಕರಕ್ಕೆ ಬೆಂಬಲ ಸೂಚಿಸದೇ ಇರುವುದರಿಂದ ಎಲ್ಲೆಡೆ ಪೆಟ್ರೋಲ್ ಮತ್ತು ಡಿಸೇಲ್ ಕೊರತೆ ಉಂಟಾಗಿಲ್ಲ.

ಕಟ್ಟಡ ಕಾಮಗಾರಿ ಸ್ಥಗಿತ

ಕಟ್ಟಡ ಕಾಮಗಾರಿ ಸ್ಥಗಿತ

ಅನೇಕ ಮನೆಗಳ ಮಾಲೀಕರು ಮತ್ತು ಅಪಾರ್ಟ್ಮೆಂಟ್ ಕಟ್ಟುತ್ತಿರುವ ಬಿಲ್ಡರ್ ಗಳು ಕಬ್ಬಿಣ, ಸಿಮೆಂಟ್, ಮರಳು, ಜಲ್ಲಿಕಲ್ಲು ಮತ್ತು ಇತರ ಕಟ್ಟಡ ಸಾಮಗ್ರಿಗಳಿಲ್ಲದೇ ಪರದಾಡುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Services at the Hubli-Dharwad are disrupted due to on going truck strike seeking fulfilment of their demands.Truck operators are observing nation-wide strike protesting against the collection of toll fee on Highways.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more