ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧಾರವಾಡ; ಯುವಜನೋತ್ಸವ ಕಿಟ್‌ನ ವಿಶೇಷತೆಗಳು

|
Google Oneindia Kannada News

ಧಾರವಾಡ, ಜನವರಿ 09; ವಿದ್ಯಾಕಾಶಿ ಎಂದೇ ಖ್ಯಾತಿಗಳಿಸಿರುವ ಧಾರವಾಡ 26 ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಸಿದ್ಧವಾಗುತ್ತಿದೆ. ಜನವರಿ 12ರಂದು ಪ್ರಧಾನಿ ನರೇಂದ್ರ ಮೋದಿ ಉತ್ಸವ ಉದ್ಘಾಟನೆ ಮಾಡಲಿದ್ದು, ಜನವರಿ 16 ರ ವರೆಗೆ ಯುವಜನೋತ್ಸವ ನಡೆಯಲಿದೆ.

ಧಾರವಾಡ ನಗರ ಯುವಜನೋತ್ಸವಕ್ಕೆ ಸಿದ್ಧವಾಗುತ್ತಿದೆ. ದೇಶದ ಸುಮಾರು 8 ಕೇಂದ್ರಾಡಳಿತ ಪ್ರದೇಶ ಹಾಗೂ 28 ರಾಜ್ಯಗಳಿಂದ ಯುವ ಪ್ರತಿಭೆಗಳು, ಪ್ರತಿಭಾವಂತ ಕಲಾವಿದರು ಮತ್ತು ರಾಷ್ಟ್ರೀಯ, ಅಂತರರಾಷ್ಟ್ರೀಯ ಖ್ಯಾತಿಯ ಹಿರಿಯ ಕಲಾಜೀವಿಗಳು ಭಾಗವಹಿಸುತ್ತಿದ್ದಾರೆ.

ಧಾರವಾಡ: ಯುವಜನೋತ್ಸವಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ, ಅಕ್ಷಯ್‌ ಕುಮಾರ್‌ಗೆ ಆಹ್ವಾನ ಕೊಟ್ಟ ಜೋಶಿಧಾರವಾಡ: ಯುವಜನೋತ್ಸವಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ, ಅಕ್ಷಯ್‌ ಕುಮಾರ್‌ಗೆ ಆಹ್ವಾನ ಕೊಟ್ಟ ಜೋಶಿ

ಯುವಜನೋತ್ಸವದಲ್ಲಿ ಪಾಲ್ಗೊಳ್ಳುವವರಿಗೆ ವಿಶೇಷ ನೋಂದಣಿ ಕಿಟ್ ನೀಡಲು ತಯಾರಿ ನಡೆದಿದೆ. ಆಗಮಿಸುವ ಅತಿಥಿಗಳಿಗೆ ಕರ್ನಾಟಕದ ಭವ್ಯ ಪರಂಪರೆಯನ್ನು ಮತ್ತು ಉತ್ತರ ಕರ್ನಾಟಕದ ವಿಶೇಷತೆಗಳನ್ನು ಪರಿಚಯಿಸಲು ಧಾರವಾಡ ಜಿಲ್ಲಾಡಳಿತವು ಸಿದ್ಧತೆ ಮಾಡಿಕೊಂಡಿದೆ.

Yuva Budget 2023 : ಯುವ ನೀತಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ: ಕೌಶಲ್ಯ ತರಬೇತಿಗೆ ಒತ್ತು Yuva Budget 2023 : ಯುವ ನೀತಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ: ಕೌಶಲ್ಯ ತರಬೇತಿಗೆ ಒತ್ತು

ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾರ್ಗದರ್ಶನದಲ್ಲಿ ಹುಡಾ ಆಯುಕ್ತ ಡಾ. ಸಂತೋಷ ಕುಮಾರ ಬಿರಾದಾರ ನೇತೃತ್ವದ ಹುಡಾ ಮತ್ತು ಶಿಕ್ಷಣ ಇಲಾಖೆಯ ಸಿಬ್ಬಂದಿಗಳಿರುವ ಸ್ವಾಗತ ಸಮಿತಿಯು ಒಂದು ವಾರದಿಂದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಧಾರವಾಡ; ಜಿಲ್ಲಾ ಸಂಯೋಜಕರ ನೇಮಕಾತಿ, ಅರ್ಜಿ ಹಾಕಿ ಧಾರವಾಡ; ಜಿಲ್ಲಾ ಸಂಯೋಜಕರ ನೇಮಕಾತಿ, ಅರ್ಜಿ ಹಾಕಿ

ಯುವಜನೋತ್ಸವದಲ್ಲಿ ಭಾಗವಹಿಸುವವರು ಮಾತ್ರವಲ್ಲ. ಅತಿಥಿಗಳಿಗೆ ನೀಡುವ ನೆನಪಿನ ಕಾಣಿಕೆಯು 4x6 ಅಳತೆಯ ರಾಷ್ಟ್ರಧ್ವಜದೊಂದಿಗೆ 6x9 ಅಳತೆ ಹೊಂದಿದೆ. ರಾಷ್ಟ್ರದಲ್ಲಿಯೇ ರಾಷ್ಟ್ರಧ್ವಜಗಳನ್ನು ಅಧಿಕೃತವಾಗಿ ರೂಪಿಸಿ ಪೂರೈಸಲು ಅನುಮತಿ ಹೊಂದಿರುವ ಗರಗ ಮತ್ತು ಬೆಂಗೇರಿ ಖಾದಿ ಕೇಂದ್ರಗಳು ಧಾರವಾಡದ ಹೆಮ್ಮೆ ಹೆಚ್ಚಿಸಿವೆ.

ಅತಿಥಿಗಳಿಗೆ ನೀಡುವ ನೋಂದಣಿ ಕಿಟ್

ಅತಿಥಿಗಳಿಗೆ ನೀಡುವ ನೋಂದಣಿ ಕಿಟ್

26ನೇ ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಳ್ಳುವ ಸುಮಾರು 7,500 ಸ್ಪರ್ಧಾಳುಗಳು ಮತ್ತು ಅತಿಥಿಗಳಿಗೆ ನೀಡಲು ವಿಶೇಷವಾದ ನೋಂದಣಿ ಕಿಟ್‍ಗಳನ್ನು ರೂಪಿಸಲಾಗಿದೆ. ವಿಶೇಷವಾಗಿ ಈ ಯುವ ಜನೋತ್ಸವವನ್ನು ಹಸಿರು ಯುವಜನೋತ್ಸವವಾಗಿ ಆಚರಿಸಲು ಧಾರವಾಡ ಜಿಲ್ಲಾಡಳಿತ ನಿರ್ಧರಿಸಿದ್ದು, ನೋಂದಣಿ ಕಿಟ್‍ದಲ್ಲಿನ ವಸ್ತುಗಳು ಮರುಬಳಕೆಯ ವಸ್ತುಗಳಾಗಿವೆ.

ಖಾದಿ ಧ್ವಜನ ನೆನಪಿನ ಕಾಣಿಕೆ

ಖಾದಿ ಧ್ವಜನ ನೆನಪಿನ ಕಾಣಿಕೆ

ರಾಷ್ಟ್ರೀಯ ಯುವಜನೋತ್ಸವ ನೋಂದಣಿ ಕಿಟ್‍ದಲ್ಲಿ ಐಡಿ ಕಾರ್ಡ್, ಮರುಬಳಕೆಯ ಸ್ಟೀಲ್ ವಾಟರ್ ಬಾಟಲ್, ಉತ್ತಮ ಗುಣಮಟ್ಟದ ಬ್ಯಾಗ್, ಸುಮಾರು 8ಕ್ಕೂ ಹೆಚ್ಚು ದಿನಬಳಕೆಯ ವಸ್ತುಗಳಿರುವ ಸಣ್ಣ ಕಿಟ್ ಇರಲಿದೆ.

ಯೋಗಾ ಮ್ಯಾಟ್, ಟ್ರ್ಯಾಕ್ ಸೂಟ್, ಯುವಜನೋತ್ಸವ ಮಾಹಿತಿ ಇರುವ ಇವೆಂಟ್ ಮೆನ್ಯೂ, ಕರ್ನಾಟಕ ಹಾಗೂ ಧಾರವಾಡ ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ ಪುಸ್ತಕ ಮತ್ತು ಅರವಿಂದೊ ಟ್ರಸ್ಟ್ ನೀಡಿರುವ ಯೂಥ್ ಆಫ್ ಇಂಡಿಯಾ ಪುಸ್ತಕ ಹಾಗೂ ಮುಖ್ಯವಾಗಿ ಧಾರವಾಡ ನೆನಪಿಸುವ, ಗುರುತಿಸುವ ಧಾರವಾಡ ಪೇಡಾ ಬಾಕ್ಸ್ ಹಾಗೂ ಖಾದಿ ಧ್ವಜದ ನೆನಪಿನ ಕಾಣಿಕೆ ಇರುತ್ತದೆ.

7,500ಕ್ಕೂ ಹೆಚ್ಚು ನೆನಪಿನ ಕಾಣಿಕೆ

7,500ಕ್ಕೂ ಹೆಚ್ಚು ನೆನಪಿನ ಕಾಣಿಕೆ

ಧಾರವಾಡದಲ್ಲಿ ನಡೆಯುವ ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸುವ 28 ರಾಜ್ಯ ಹಾಗೂ 8 ಕೇಂದ್ರಾಡಳಿತ ಪ್ರದೇಶಗಳ ಅತಿಥಿಗಳು ಮತ್ತು ರಾಜ್ಯ ಸರ್ಕಾರದ, ಕೇಂದ್ರ ಸರ್ಕಾರದ ಸಚಿವರು, ಉನ್ನತ ಅಧಿಕಾರಿಗಳಿಗೆ ಕಾಣಿಕೆಯಾಗಿ ನೀಡಲು ಗರಗ ಮತ್ತು ಬೇಂಗೇರಿ ಖಾದಿ ಕೇಂದ್ರಗಳಲ್ಲಿ ಸುಮಾರು 7,500 ಕ್ಕೂ ಹೆಚ್ಚು ಖಾದಿ ಧ್ವಜ ಹೊಂದಿರುವ ನೆನಪಿನ ಕಾಣಿಕೆಗಳನ್ನು ತಯಾರಿಸಲಾಗುತ್ತಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಗೂ ಕಾಣಿಕೆಯಾಗಿ ನೀಡಲು ರಾಷ್ಟ್ರಧ್ವಜ ಇರುವ 12 ಇಂಚು ಉದ್ದ 18 ಇಂಚು ಅಳತೆಯ ಟಿಕ್‍ವುಡ್ ಫ್ರೇಮ್ ಹೊಂದಿರುವ ನೆನಪಿನ ಕಾಣಿಕೆಯನ್ನು ರೂಪಿಸಲಾಗಿದೆ. ಈ ಕಾಣಿಕೆಯನ್ನು ವಿಶೇಷವಾಗಿ ಯಲ್ಲಾಪುರದ ಕಲಾವಿದರು ರೂಪಿಸಿದ್ದಾರೆ.

ಯುವಜನೋತ್ಸವ ಸಹಾಯ ಕೇಂದ್ರ

ಯುವಜನೋತ್ಸವ ಸಹಾಯ ಕೇಂದ್ರ

ರಾಷ್ಟ್ರೀಯ ಯುವಜನೋತ್ಸವದಲ್ಲಿ ಪಾಲ್ಗೊಳ್ಳಲು ರಾಜ್ಯದ ಇತರ ಜಿಲ್ಲೆ ಹಾಗೂ ಅಂತರರಾಜ್ಯಗಳಿಂದ ಅತಿಥಿಗಳು ಆಗಮಿಸುವುದರಿಂದ ಅವರಿಗೆ ಸಾರಿಗೆ, ವಸತಿ, ನೋಂದಣಿ ಸ್ಥಳ ಹಾಗೂ ಇತರ ಅಗತ್ಯ ಮಾಹಿತಿಗಳನ್ನು ನೀಡಿ, ತಕ್ಷಣಕ್ಕೆ ಸಹಾಯ ಮಾಡಲು ಅನುಕೂಲವಾಗುವಂತೆ ಸ್ವಾಗತ ಸಮಿತಿಯು ಸಹಾಯ ಕೇಂದ್ರಗಳನ್ನು ತೆರೆದಿದೆ. ಮುಖ್ಯವಾಗಿ ಧಾರವಾಡ ಮತ್ತು ಹುಬ್ಬಳ್ಳಿ ರೈಲ್ವೆ ನಿಲ್ದಾಣ, ಬಸ್‍ ನಿಲ್ದಾಣ, ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ.

ಸಹಾಯ ಕೇಂದ್ರಕ್ಕೆ ಆಗಮಿಸುವ ಅತಿಥಿಗಳನ್ನು ನಿಲ್ದಾಣದಿಂದಲೇ ಸ್ವಾಗತಿಸಲು ಕಲಾ ತಂಡಗಳನ್ನು ಸಹ ನೇಮಿಸಲಾಗಿದೆ. ಸಹಾಯ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿಗಳನ್ನು ನೇಮಿಸಲಾಗಿದ್ದು, ದಿನದ 24 ಗಂಟೆಯೂ ಸಹಾಯ ಕೇಂದ್ರದಲ್ಲಿ ಸಿಬ್ಬಂದಿ ಇರಲಿದ್ದಾರೆ.

English summary
Dharwad district administration all set for 26th National Youth Festival from January 12th to 16, 2023. Here are the specialties of the registration kit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X