ಧಾರವಾಡದಲ್ಲಿ ವಿಶಿಷ್ಟವಾಗಿ ಮೊಹರಂ ಹಬ್ಬ ಆಚರಿಸಿದ ಮುಸ್ಲಿಮರು

ಧಾರವಾಡ, ಜುಲೈ, 29: ಮೊಹರಂ ಕೊನೆ ದಿನ ಹಿನ್ನೆಲೆ ದೇಶದ ಹಲವೆಡೆ ಮುಸ್ಲಿಮರು ಮೆರವಣಿಗೆ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಅದೇ ರೀತಿ ಧಾರವಾಡ ಜಿಲ್ಲೆಯಲ್ಲಿ ಮುಸ್ಲಿಮರು ಮೊಹರಂ ಹಬ್ಬವನ್ನು ವಿಶಿಷ್ಟವಾಗಿ ಆಚರಣೆ ಮಾಡಿದ್ದಾರೆ.

ಧಾರವಾಡ ಹೊಸಯಲ್ಲಾಪುರದಲ್ಲಿ ಮೊಹರಂ ಹಬ್ಬವನ್ನು ಇರಾಣಿ ಮುಸ್ಲಿಮರು ವಿಶಿಷ್ಟವಾಗಿ ಆಯುಧಗಳಿಂದ ಹೊಡೆದುಕೊಂಡು ಯಾ ಹುಸೇನ್.. ಯಾ ಹುಸೇನ್... ಎನ್ನುತ್ತಾ ದೇಹ ದಂಡಿಸಿ ಆಚರಣೆ ಮಾಡಿದರು. ಜನ್ನತ್ ನಗರದ ಮಸಜ್ಜಿದ್‌ದಿಂದ ಆರಂಭವಾದ ಇರಾಣಿ ಮುಸ್ಲಿಮರ ಪಂಜಾಗಳ ಮೆರವಣಿಗೆ ಧಾರವಾಡ ಟೋಲ್ ನಾಕಾ ಮಾರ್ಗವಾಗಿ ಹೊಸ ಯಲ್ಲಾಪುರದ ನುಚ್ಚಂಬ್ಲಿ ಬಾವಿಯವರೆಗೆ ಸಾಗಿತು.

muharram-festival-celebration

ಇರಾನಿ ಮುಸ್ಲಿಮರು ಈ ಬಾರಿಯ ಮೊಹರಂನಲ್ಲಿ ಭಯ ಭಕ್ತಿಯಿಂದ ಭಾಗವಹಿಸಿ ದೇಹ ದಂಡಿಸುವ ಮೂಲಕ ಆಯುಧಗಳಿದ ಬಡಿದುಕೊಂಡು ರಕ್ತ ಸುರಿಸಿ ವಿಶಿಷ್ಟವಾಗಿ ಆಚರಣೆ ಮಾಡಿದರು. ಅಷ್ಟೇ ಅಲ್ಲದೇ ಯಾ ಹುಸೇನ್.. ಯಾ ಹುಸೇನ್.. ಎಂದು ದೇವರ ಪ್ರಾರ್ಥನೆ ಮಾಡಿದ ದೃಶ್ಯಗಳು ನೋಡುಗರ ಗಮನ ಸೆಳೆದವು.

ಇರಾಣಿ ಮುಸ್ಲಿಮರ ಮೊಹರಂ ಹಬ್ಬವನ್ನು ನೋಡಲು ಜನರು ದಂಡೇ ಕಲೆತಿತ್ತು. ಇನ್ನು ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+