ಧಾರವಾಡ: ತಳ್ಳು ಗಾಡಿಯಲ್ಲಿ ಮರಿ ಮಂಗನ ಶವ, ಮುಗಿಲು ಮುಟ್ಟಿದ ತಾಯಿಯ ಮೂಕರೋಧನೆ
ಧಾರವಾಡ, ಮೇ 31: ಉಪ್ಪಿಗಿಂತ ರುಚಿ ಇಲ್ಲ ತಾಯಿಗಿಂದ ಬಂಧುವಿಲ್ಲ ಎನ್ನುವಂತೆ ತಾಯಿ ಎನ್ನುವ ಸಂಬಂಧ ಮಹತ್ವ ಪೂರ್ಣವಾದದು. ಮಗು ಜನಿಸಿದಾಗ ಪುನರ್ಜನ್ಮ ಪಡೆಯುವ ಅವಳು. ಮಗುವಿನಲ್ಲೇ ತನ್ನ ಖುಷಿಯ ಪ್ರಪಂಚ ಕಾಣುತ್ತಾಳೆ. ತನ್ನ ಮಗುವಿಗೆ ಸಣ್ಣ ನೋವಾದರೂ ಕೊರಗುವ ತಾಯಿ, ಕಣ್ಣೇದುರೆ ಮಗುವಿನ ಸಾವನನ್ನು ಹೇಗೆ ಸಹಿಸಿಯಾಳು?
ಕೆಲವೊಮ್ಮೆ ನಾವು ಮಂಗನಾಟ ಎಂದು ಛೇಡಿಸುವುದುಂಟು, ಆದರೆ ಅವುಗಳು ನಮ್ಮಂತೆ ಭಾವನಾತ್ಮಕ ಜೀವಿಗಳು ಎನ್ನುವುದಕ್ಕೆ ಹುಬ್ಬಳ್ಳಿಯಲ್ಲಿ ನಡೆದ ಘಟನೆ ನಿದರ್ಶನವಾಗಿದ್ದು, ಕಣ್ಣೇದುರೇ ಮಗುವಿನ ಸಾವನನ್ನು ಕಂಡು ರೋಧಿಸುತ್ತಿರುವ ತಾಯಿ ಮಂಗನ ಸ್ಥಿತಿ ಎಂತವರ ಕರಳು ಹಿಂಡಿವಂತಿತ್ತು.

ಒಬ್ಬ ತಾಯಿ ತನ್ನ ಮಗುವನ್ನು ಕಳೆದುಕೊಂಡಾಗ ಅದೆಷ್ಟೋ ಸಂಕಟ ಪಡುತ್ತಾಳೆ. ಅದೇ ರೀತಿ ಇಲ್ಲೊಂದು ಮಂಗ ತನ್ನ ಮಗುವನ್ನು ಕಳೆದುಕೊಂಡು ಅಷ್ಟೇ ರೋಧನೆ ಮಾಡುತ್ತಿದೆ. ವಿದ್ಯುತ್ ಸ್ಪರ್ಶದಿಂದ ಮರಿ ಮಂಗ ಸಾವನ್ನಪ್ಪಿದನ್ನು ಕಂಡು ತಾಯಿ ಮಂಗನ ರೋಧನೆ ಮುಗಿಲು ಮುಟ್ಟಿದ್ದು ಒಂದೆಡೆಯಾದರೆ, ಇದನ್ನು ಕಣ್ಣಾರೆ ಕಂಡ ಗ್ರಾಮಸ್ಥರು ಕಣ್ಣೀರು ಹಾಕಿರುವ ಘಟನೆ ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ನಡೆದಿದೆ.
ಮಿಶ್ರಿಕೋಟಿ ಗ್ರಾಮದಲ್ಲಿ ದಿನಂಪ್ರತಿ ಗ್ರಾಮದಲ್ಲಿ ಮಂಗಗಳ ಹಿಂಡು ಪರಸ್ಪರ ಚಿನ್ನಾಟ ಆಡುತ್ತಾ, ಗೋಡೆ ಗೋಡೆಯಿಂದ ಜಿಗಿಯುತ್ತಿದ್ದವು. ಈ ವೇಳೆ ಮರಿ ಮಂಗ ಗೋಡೆಯಿಂದ ಗೋಡೆಗೆ ಜಿಗಿಯಲು ಹೋಗಿ ವಿದ್ಯುತ್ ಕಂಬದ ತಂತಿಗೆ ಸ್ಪರ್ಶಿಸಿದೆ. ಇದರಿಂದ ಕ್ಷಣಾರ್ಧದಲ್ಲೇ ನೆಲಕ್ಕೆ ಬಿದ್ದು ಪ್ರಾಣ ಕಳೆದುಕೊಂಡಿತು. ಇದನ್ನು ನೋಡಿ ಗ್ರಾಮಸ್ಥರೆಲ್ಲರೂ ಮರುಗಿದ್ದಾರೆ.

ಇನ್ನು ಸತ್ತು ಮಂಗವನ್ನು ವಿಧಿ ಪ್ರಕಾರ ಶವಸಂಸ್ಕಾರ ಮಾಡಿದರಾಯಿತು ಎಂದುಕೊಂಡು ಗ್ರಾಮದ ಯುವಕರ ತಂಡ ಅದನ್ನು ತಳ್ಳುಗಾಡಿಯಲ್ಲಿ ಹಾಕಿದ್ದರು. ಆದರೆ ಮಂಗ ತಾಯಿ ತನ್ನ ಮಗು ಸತ್ತು ಬಿದ್ದಿದ್ದನ್ನು ನೋಡಿ, ಮಗು ಶವದ ಬಳಿಯಿದ್ದ ಯುವಕರನ್ನು ಹೆದರಿಸಿ, ಮಗುವಿನ ಶರೀರ ಅಲ್ಲಾಡಿಸಿ ಮೇಲೇಳಿಸಲು ಪ್ರಯತ್ನಿಸಿದೆ. ಮಗು ಸತ್ತಿರುವುದನ್ನು ಅರಿತ ತಾಯಿ ಮಂಗ ಶವದ ಬಳಿ ರೋಧಿಸಲು ಪ್ರಾರಂಭಿಸಿತು. ಕೊನೆಯಲ್ಲಿ ಗ್ರಾಮಸ್ಥರು ಮಂಗನನ್ನು ಸಾಂಪ್ರದಾಯಿಕವಾಗಿ ಅಂತ್ಯಸಂಸ್ಕಾರ ಮಾಡಿದರು. ಈ ವೇಳೆ ತಾಯಿ ಮಂಗನ ದುಃಖ ನೋಡಿ ಗ್ರಾಮಸ್ಥರು ಕಣ್ಣೀರು ಹಾಕಿದ್ದಾರೆ.












Click it and Unblock the Notifications