ಬಿಜೆಪಿಯಿಂದ ಮೂರುಸಾವಿರಮಠದ ಸ್ವಾಮೀಜಿಗೆ ದೋಖಾ?

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಜೂನ್, 11 : ಗುರುವಾರ ಜರುಗಿದ ಪಶ್ಚಿಮ ಪದವೀಧರ ವಿಧಾನ ಪರಿಷತ್ ಚುನಾವಣೆಗಾಗಿ ತಮ್ಮ ಹೆಸರು ಮತ್ತು ವಿಡಿಯೋ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ತೀವ್ರವಾಗಿ ನೊಂದುಕೊಂಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಶ್ರೀಗಳು, ಬಿಜೆಪಿಯ ಅಭ್ಯರ್ಥಿ ಮಾ. ನಾಗರಾಜ ಅವರಿಗೆ ನಾನು ಕೇವಲ ಶುಭಾಶೀರ್ವಾದ ಮಾಡಿದ್ದೆ. ಆದರೆ ನಾವು ಮಾಡಿದ ಶುಭಾಶೀರ್ವಾದವನ್ನು ಮಾ. ನಾಗರಾಜ ಅವರು ತಮಗೆ ಬೇಕಾದಂತೆ ಚುನಾವಣೆಯಲ್ಲಿ ಬಳಸಿದ್ದಾರೆ ಎಂದು ಶನಿವಾರ ಆಕ್ರೋಶ ವ್ಯಕ್ತಪಡಿಸಿದರು. [ಬಸವರಾಜ ಹೊರಟ್ಟಿ ಸೋಲು ಖಚಿತ: ಶೆಟ್ಟರ್ ಭವಿಷ್ಯ]

Moorusavir Math alleges misuse of his video for election

ತಾವು ಶುಭಾಶೀರ್ವಾದ ಮಾಡಿದ್ದನ್ನು ವಿಡಿಯೋ ಏಕೆ ಮಾಡಿಕೊಳ್ಳುತ್ತಿದ್ದೀರಿ ಎಂದು ಕೇಳಿದಾಗ, ತಮ್ಮ ಕುರಿತು ಸಾಕ್ಷ್ಯಚಿತ್ರ ನಿರ್ಮಾಣ ಮಾಡುತ್ತಿದ್ದೇವೆ ಅದಕ್ಕಾಗಿ ಬೇಕಾಗಿತ್ತು ಎಂದು ಚಿತ್ರೀಕರಣ ಮಾಡಿಕೊಂಡಿದ್ದರು. ಹೀಗಾಗಿ ನಿಮಗೆ ಶುಭವಾಗಲಿ ಎಂದು ಹಾರೈಸಿದ್ದೆ. ಇದನ್ನೇ ನಾಗರಾಜ ಅವರು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿರುವುದು ತೀವ್ರ ನೋವು ನೀಡಿದೆ ಎಂದು ಶ್ರೀಗಳು ವಿಷಾದ ವ್ಯಕ್ತಪಡಿಸಿದರು.

ಈ ಬಗ್ಗೆ ಜೆಡಿಎಸ್ ಅಭ್ಯರ್ಥಿ ಬಸವರಾಜ ಹೊರಟ್ಟಿಯವರು ಆಕ್ಷೇಪ ವ್ಯಕ್ತಪಡಿಸಿದ್ದುದರಲ್ಲಿ ತಮ್ಮ ಪಾತ್ರವಿಲ್ಲ. ತಾವು ಯಾವುದೇ ರೀತಿಯಿಂದಲೂ ರಾಜಕೀಯ ಕ್ಷೇತ್ರದಲ್ಲಿ ಭಾಗವಹಿಸುವುದಿಲ್ಲ. ನಮಗೆ ರಾಜಕೀಯ ಮಾಡುವುದಕ್ಕೂ ಬರುವುದಿಲ್ಲ. ಎಲ್ಲಾ ಪಕ್ಷದ ಮುಖಂಡರು ನಮಗೆ ಒಂದೇ ಎಂದಿರುವ ಸ್ವಾಮೀಜಿ, ಬಿಜೆಪಿಯವರು ಮೋಸದಿಂದ ತಮ್ಮ ಹೆಸರು ಬಳಸಿಕೊಂಡಿದ್ದಾರೆ ಎಂದು ನೊಂದು ನುಡಿದರು.[ಹುಬ್ಬಳ್ಳಿ: ಮತದಾನಕ್ಕೆ ಚಕ್ಕರ್ ಹೊಡೆದ ಶಿಕ್ಷಕರು]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Moorusavir Math swamiji Sri Gurusidda Rajayogindra Mahaswami has alleged that his video wishing BJP candidate Nagaraj has been misused during election to graduate constituency.
Please Wait while comments are loading...