IIT Dharwad: ಮೋದಿ ಉದ್ಘಾಟನೆ ಮಾಡುವ ಧಾರವಾಡ ಐಐಟಿ ಕಟ್ಟಡದ ವಿಶೇಷತೆಗಳು
ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಧಾರವಾಡದ ನೂತನ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 12ರ ಭಾನುವಾರ ಉದ್ಘಾಟನೆ ಮಾಡಲಿದ್ದಾರೆ.
ಧಾರವಾಡ, ಮಾರ್ಚ್ 09; ಭಾರತದ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 12ರಂದು ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಮಂಡ್ಯ ಮತ್ತು ಧಾರವಾಡ ಜಿಲ್ಲೆಗೆ ಮೋದಿ ಭೇಟಿ ನೀಡುತ್ತಿದ್ದು, ವಿವಿಧ ಕಾಮಗಾರಿ ಉದ್ಘಾಟಿಸಲಿದ್ದಾರೆ. ಧಾರವಾಡದಲ್ಲಿ ಭಾನುವಾರ ಮಧ್ಯಾಹ್ನ ನಡೆಯುವ ಕಾರ್ಯಕ್ರಮದಲ್ಲಿ ಮೋದಿ ಐಐಟಿ ಉದ್ಘಾಟನೆ ಮಾಡಲಿದ್ದಾರೆ. ಈಗಾಗಲೇ ಮೋದಿ ಕಾರ್ಯಕ್ರಮಕ್ಕೆ ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ.
ಗುರುವಾರ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಧಾರವಾಡ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ದೇಸಾಯಿ ಹಾಗೂ ವಿವಿಧ ಪ್ರಾಧ್ಯಾಪಕರು ಪತ್ರಿಕಾಗೋಷ್ಠಿಯನ್ನು ನಡೆಸಿದರು. ಭಾನುವಾರ ನಡೆಯುವ ಐಐಟಿ ನೂತನ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದ ಕುರಿತು ಮಾಹಿತಿಯನ್ನು ನೀಡಿದರು.

ಐಐಟಿ ಧಾರವಾಡ ಕ್ಯಾಂಪಸ್‌ನ ನೂತನ ಕಟ್ಟಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಫೆಬ್ರವರಿ 10, 2019ರಂದು ಶಂಕುಸ್ಥಾಪನೆ ಮಾಡಿದ್ದರು. 2023ರ ಮಾರ್ಚ್‌ನಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. 470 ಎಕರೆ ವಿಶಾಲವಾದ ಜಾಗದಲ್ಲಿ ಅಂದಾಜು 851.88 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಕಟ್ಟಡ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಹೊಂದಿದೆ.
ಐಐಟಿಯ ವಿಶೇಷತೆಗಳು; ಭಾನುವಾರ ಮಧ್ಯಾಹ್ನ 3 ಗಂಟೆಗೆ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಧಾರವಾಡ ಸಾಯಿ ಪರಿಸರದ ಉದ್ಘಾ ಟನೆಯನ್ನು ನರೇಂದ್ರ ಮೋದಿ ಮಾಡಲಿದ್ದಾರೆ. ಈ ಕಟ್ಟಡ ಧಾರವಾಡದ ಚಿಕ್ಕಮಲ್ಲಿಗವಾಡದಲ್ಲಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯ ಪಾಲ ಥಾವರಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರೀಯ ಶಿಕ್ಷಣ, ಕೌಶಲ್ಯ, ಅಭಿವೃದ್ಧಿ, ಮತ್ತು ಉದ್ಯಮಶೀಲತಾ ಸಚಿವ ಧರ್ಮೇಂದ್ರ ಪ್ರಧಾನ್, ಕೇಂದ್ರ ಸಂಸದೀಯ, ಕಲ್ಲಿದ್ದಲು, ಗಣಿ ಖಾತೆ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಮುಂತಾದವರು ಉಪಸ್ಥಿತರಿರುವರು.
ಐಐಟಿ ಧಾರವಾಡ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ದೇಸಾಯಿ ಮಾತನಾಡಿ, ಐಐಟಿ ಧಾರವಾಡ ರಾಷ್ಟ್ರೀಯ ಮಹತ್ವದ ಉಚ್ಛ ತಾಂತ್ರಿಕ ವಿದ್ಯಾ ಸಂಸ್ಥೆ ಆಗಿದ್ದು, 2016 ರಲ್ಲಿ ಭಾರತ ಸರ್ಕಾರದ ಶಿಕ್ಷಣ ಇಲಾಖೆ ಯ ಆಶ್ರಯದಲ್ಲಿ ಮುಂಬೈ ಐಐಟಿಯ ಪೋಷಕತ್ವದಲ್ಲಿ ಸ್ಥಾಪನೆಯಾಯಿತು.
ಶೈಕ್ಷಣಿಕ ಚಟುವಟಿಕೆಗಳು ಜುಲೈ 2016ರಲ್ಲಿ ಧಾರವಾಡದ ಹೈಕೋರ್ಟ್ ಪೀಠದ ಪಕ್ಕದಲ್ಲಿರುವ ಜಲ ಮತ್ತು ನಲ ನಿರ್ವಹಣೆ (ವಾಲಿ) ಸಂಸ್ಥೆಯಲ್ಲಿ ಆರಂಭಗೊಂಡವು, ಆಗ ಸಂಗಣಕ ವಿಜ್ಞಾನ ಅಥವ ಅಭಿಯಾಂತ್ರಿಕ, ವಿದ್ಯುತ್ ಅಭಿಯಾಂತ್ರಿಕ, ಯಾಂತ್ರಿಕ ಅಭಿಯಾಂತ್ರಿಕ ಕೋರ್ಸ್‌ಗಳು ಮಾತ್ರ ಆರಂಭಗೊಂಡವು.

ಸದ್ಯ ಇನ್ನೂ ನಾಲ್ಕು, ವಿಭಾಗಗಳಾದ ಅಭಿಯಾಂತ್ರಿಕ ಭೌತ ಶಾಸ್ತ್ರ, ನಾಗರಿಕ (ಸಿವಿಲ್) ಅಭಿಯಾಂತ್ರಿಕ, ಜೈವ ರಾಸಾಯನಿಕ (ಬಯೊಕೆಮಿಕಲ್) ಅಭಿಯಾಂತ್ರಿಕ, ಗಣಿತ ಅಥವ ಸಂಗಣಕ ಶಾಸ್ತ್ರದಲ್ಲಿ ಕೂಡಾ ನಾಲ್ಕು ವರ್ಷದ ಬಿ.ಟೆಕ್ ಕೋರ್ಸ್‌ಗಳು ಆರಂಭವಾದವು. ಹಾಗೆಯೇ ಬಿಎಸ್‌ಎಂಎಸ್, ಎಂ. ಟೆಕ್ (ಯಾಂತ್ರಿಕ ಅಭಿಯಾಂತ್ರಿಕ), ಎಂಎಸ್ ಮತ್ತು ಪಿಎಚ್‌ಡಿ ಕಾರ್ಯಕ್ರಮಗಳು ಆರಂಭಗೊಂಡಿವೆ.
ಧಾರವಾಡ ಐಐಟಿ ನಿರಂತರ ಪ್ರಗತಿ ಹೊಂದುತ್ತ ಬಂದಿದ್ದು, ಸದ್ಯ 856 ವಿದ್ಯಾರ್ಥಿಗಳನ್ನು, 73 ಪ್ರಾಧ್ಯಾಪಕರನ್ನು ಹೊಂದಿದ್ದು 400ಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳನ್ನು ಪ್ರಕಟಿಸಿದ್ದು, 30ಕೋಟಿಗಿಂತ ಹೆಚ್ಚು ರೂಪಾಯಿಗಳ ಅನುದಾನಿತ ಸಂಶೋಧನೆ ಯೋಜನೆಗಳಲ್ಲಿ ತೊಡಗಿಕೊಂಡಿದ್ದು, 30ಕ್ಕೂ ಹೆಚ್ಚು ಸಂಶೋಧನೆ, ಸಹಕಾರಗಳ ಒಡಂಬಡಿಕೆಗಳನ್ನು ವಿವಿಧ ಕಂಪನಿ/ ಕಾರ್ಖಾನೆ/ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಜೊತೆ ಮಾಡಿಕೊಂಡಿದೆ.
2019ರ 10ಫೆಬ್ರವರಿಯಂದು ಮಾನ್ಯ ಪ್ರಧಾನಿಮಂತ್ರಿ ನರೇಂದ್ರ ಮೋದಿಯವರು ಧಾರವಾಡದ ಐಐಟಿಯ ಸ್ಥಾಯಿ ಪರಿಸರದ ಶಂಕು ಸ್ಥಾಪನೆ ನೆರವೇರಿಸಿದರು. ಇದು 470 ಎಕರೆ ಭೂಮಿಯನ್ನು ಹೊಂದಿದ್ದು, ಈ ಭೂಮಿಯನ್ನು ಕರ್ನಾಟಕ ಸರ್ಕಾರ ನೀಡಿದೆ. ಇದರ ಜೊತೆಗೆ 65 ಎಕರೆ ಮೀಸಲು ಅರಣ್ಯ ಸಹ ಅಂತರ್ಗತವಾಗಿದೆ. ಪಥಮ 'ಎ' ಹಂತದ ಎಲ್ಲ ಕಟ್ಟಡಗಳ ಅಂದಾಜು ವೆಚ್ಚ 852 ಕೋಟಿ ರೂಪಾಯಿಗಳು.
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಧಾರವಾಡ ಐಐಟಿ ಯು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಮುಖಕವಚಗಳನ್ನು ಮತ್ತು ವೈಯಕ್ತಿಕ ರಕ್ಷಣಾ ಕವಚಗಳನ್ನು ತಯಾರಿಸಿ ಕೊಡುವದರಲ್ಲಿ ಮಹತ್ವದ ಪಾತ್ರವಹಿಸಿದ ಹಾಗೆಯೇ ಕೋವಿಡ್ ಲಸಿಕೆ ಚುಚ್ಚು ಮದ್ದು ನೀಡುವದರಲ್ಲಿ ಮತ್ತು ಅದೇ ಸಂಸ್ಥೆಗೆ ಡಿಜಿಟಲ್ ಸಂಪರ್ಕ ಮತ್ತು ವಿತರಣೆ ಮಾಡುವಲ್ಲಿ McAfee ಸಂಸ್ಥೆಯ ಪ್ರಾಯೋಜಕತ್ವ ಕೊಡಿಸುವಲ್ಲಿ ಯಶಸ್ವಿಯಾಗಿದೆ.
ಐಐಟಿ ಧಾರವಾಡ ಹನಿವೆಲ್, ಹೋಮ್ ಟೌನ್ ಸೊಲ್ಯೂಷನ್, ಇಂಡಿಯಾ ಪ್ರತಿಷ್ಠಾನ, ಲೊವ್ ಇಂಡಿಯಾ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ಐಐಟಿ ಸಮೀಪ ಇರುವ ಗರಗ ಗ್ರಾಮದಲ್ಲಿ ಆದರ್ಶ ಶುದ್ಧ ಶಕ್ತಿ ಗ್ರಾಮವನ್ನು ವಿಕಾಸಗೊಳಿಸುತ್ತಿದೆ. ತನ್ನ ಗ್ಲೋಬಲ್ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಅಫರ್ಡೇಬಲ್ & ಕ್ಲೀನ್ ಎನರ್ಜಿ ಆಶ್ರಯದಲ್ಲಿ ಉತ್ತರ ಕರ್ನಾಟಕದ ಯುವ ಜನರಲ್ಲಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಮಾಡುತ್ತಿದ್ದು ಸೆಲ್ಕೋ ಫೌಂಡೇಶನ್ ಮತ್ತು ಮುಖ್ಯ ವಿಜ್ಞಾನ ಸಲಹೆಗಾರ ಭಾರತ ಸರ್ಕಾರ ಅವರ ಜತೆ ಸಹಯೋಗದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಲಿದೆ. ಧಾರವಾಡ ಐ ಐ ಟಿ ಯು ತನ್ನದೇ ಆದ ಧಾರವಾಡ ಸಂಶೋಧನೆ, ತಂತ್ರಜ್ಞಾನ ಪೋಷಕ ಕೇಂದ್ರ ಪ್ರತಿಷ್ಠಾನವನ್ನು 2013ರಲ್ಲಿ ಸೆಕ್ಷನ್ 8 ಅಡಿಯಲ್ಲಿ ಆರಂಭ ಮಾಡಿದೆ. ಐಐಟಿ ಧಾರವಾಡದ ಮತ್ತಿತರ ವಿಶೇಷ ಸೌಲಭ್ಯಗಳೆಂದರೆ ಅನಂತ ಗಣಕ (ಅಧಿಕ ಸಾಮರ್ಥ್ಯಶಾಲಿ ಗಣಕಯಂತ್ರ), ಅಂತರಿಕ್ಷ ಸಂಖ್ಯಾ ವಿಜ್ಞಾನ ಪ್ರಯೋಗಶಾಲಾ, ಅತ್ಯಾಧುನಿಕ ಕೇಂದ್ರೀಯ ಉಪಕರಣ ಸೌಲಭ್ಯಗಳನ್ನು ಹೊಂದಿದೆ.
-
Bengaluru: ಗೊರಗುಂಟೆಪಾಳ್ಯದ ಟ್ರಾಫಿಕ್ಗೆ ಸಿಗಲಿದ್ಯಾ ಮುಕ್ತಿ? ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು 'ಸುರಂಗ ರಸ್ತೆ' ಪ್ರಸ್ತಾಪ -
Middle East War: ಗಲ್ಫ್ ದೇಶಗಳಿಗೆ ರಫ್ತು ಸ್ಥಗಿತ; ರಾಜ್ಯದಲ್ಲೇ ಉಳಿದ ತರಕಾರಿ, ಮೊಟ್ಟೆ, ಹಾಲಿನ ಉತ್ಪನ್ನ- ರೈತರು ಕಂಗಾಲು -
ಮಾರ್ಚ್ 5ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru-Hyderabad ಬುಲೆಟ್ ಟ್ರೈನ್: ಕೇವಲ 2 ಗಂಟೆ ಪ್ರಯಾಣ, 626 ಕಿಮೀ ಉದ್ದದ ಹಾದಿಯಲ್ಲಿ 12 ನಿಲ್ದಾಣಗಳು -
Karnataka Weather: ರಾಜ್ಯದಲ್ಲಿ ಏರುತ್ತಿದೆ ಬಿಸಿಲಿನ ಝಳ; ಬೆಂಗಳೂರಿನ ತಾಪಮಾನ 34 ಡಿಗ್ರಿಗೆ ಏರಿಕೆ -
Dog Satish: ಇನ್ಸ್ಟಾಗ್ರಾಂ ಯಾರ ಅಪ್ಪಂದೂ ಅಲ್ಲ, ವಿಡಿಯೋ ಡಿಲೀಟ್ ಮಾಡಲ್ಲ, ನನಗೆ ಮೀಟರ್ ಇದೆ: ಡಾಗ್ ಸತೀಶ್ -
Toxic: ಅವಸರಕ್ಕಿಂತ ತಾಳ್ಮೆ ಮುಖ್ಯ: ಟಾಕ್ಸಿಕ್ ಬಿಡುಗಡೆ ಮುಂದೂಡಿದ ಬೆನ್ನಲ್ಲೇ ಯಶ್ ಬೆಂಬಲಕ್ಕೆ ನಿಂತ ಅಭಿಮಾನಿಗಳು -
Karna Serial: "ಕರ್ಣ" ಧಾರಾವಾಹಿಯಿಂದ ಹೊರಬಂದ ಟಿ.ಎಸ್.ನಾಗಾಭರಣ, ಹಿರಿಯ ನಟ ಅಭಿಜಿತ್ ಎಂಟ್ರಿ -
'ವಂತಾರ'ಕ್ಕೆ ಒಂದು ವರ್ಷ: ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ -
Bengaluru: ಗೊರಗುಂಟೆಪಾಳ್ಯದ ಟ್ರಾಫಿಕ್ಗೆ ಸಿಗಲಿದ್ಯಾ ಮುಕ್ತಿ? ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು 'ಸುರಂಗ ರಸ್ತೆ' ಪ್ರಸ್ತಾಪ -
Horoscope March 4: ಈ ರಾಶಿಯವರಿಗೆ ವೃತ್ತಿಯಲ್ಲಿ ಸುಧಾರಣೆ, ಆರೋಗ್ಯ ಕಾಳಜಿ ಮುಖ್ಯ, ದಿನ ಭವಿಷ್ಯ ಇಲ್ಲಿದೆ -
Bengaluru: ‘92 ಲಕ್ಷದ ಪ್ಯಾಕೇಜ್ ಇದ್ದರೂ ಉಳಿಯಲಿಲ್ಲ ಕೆಲಸ’; ಒಂದೇ ದಿನ ಶೇ. 40ರಷ್ಟು ಸಿಬ್ಬಂದಿ ವಜಾ ಮಾಡಿದ ಐಟಿ ಕಂಪನಿ












Click it and Unblock the Notifications