Santosh Lad: ರೈತನ ಹುಲ್ಲಿನ ಬಂಡಿ ತಳ್ಳಿ ಸರಳತೆ ಮೆರೆದ ಸಚಿವ ಸಂತೋಷ್ ಲಾಡ್: ಗ್ರಾಮಸ್ಥರು ಫುಲ್ ಖುಷ್
ಹುಬ್ಬಳ್ಳಿ, ಜುಲೈ 11: ಕಾರ್ಮಿಕ ಸಚಿವ ಸಂತೋಷ್ ಲಾಡ್ ಸರಳತೆಯ ಬಗ್ಗೆ ಅಲ್ಲಿನ ಸ್ಥಳೀಯರು ಆಗಾಗಾ ಶ್ಲಾಘಿಸುತ್ತಾರೆ. ಇದೀಗ ಅವರ ಸರಳತೆ ಬಗ್ಗೆ ವಿಡಿಯೋ ಒಂದು ವೈರಲ್ ಆಗಿದ್ದು, ಸಚಿವರ ನಡೆತೆ ನೋಡಿ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಲಘಟಗಿ ತಾಲೂಕಿನ ಮಡಕಿಹೊನ್ನಳ್ಳಿ ಗ್ರಾಮದಲ್ಲಿ ರೈತ ದಂಪತಿ ಬೆಳ್ಳಂಬೆಳಗ್ಗೆ ಹೊಲದಿಂದ ಹುಲ್ಲು ತೆಗೆದುಕೊಂಡು ಹೋಗುತ್ತಿದ್ದರು.ಈ ವೇಳೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅದೇ ಮಾರ್ಗದಲ್ಲಿ ವಾಕಿಂಗ್ ಮಾಡುತ್ತಿದರು. ಈ ವೇಳೆ ರೈತ ದಂಪತಿಗೆ ಸಹಾಯ ಮಾಡಿದ ಸಂತೋಷ್ ಲಾಡ್ ತಾವೇ ಹುಲ್ಲಿನ ಬಂಡಿಯನ್ನು ತಳ್ಳಿಕೊಂಡು ಮನೆಗೆ ತಲುಪಿಸಿದ್ದಾರೆ. ರೈತನಿಗೆ ಸಹಾಯ ಮಾಡಿದ ಸಂತೋಷ್ ಲಾಡ್ ಅವರ ಉತ್ಸಾಹ ಕಂಡು ಗ್ರಾಮಸ್ಥರು ಫುಲ್ ಖುಷಿಯಾಗಿದ್ದಾರೆ.

ಅನಾರೋಗ್ಯಕ್ಕೀಡಾದ ಯುವತಿಗೆ ಸಂತೋಷ್ ಲಾಡ್ ನೆರವು
ಇನ್ನು ಈ ಹಿಂದೆ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅನಾರೋಗ್ಯಕ್ಕೀಡಾಗಿ ಸಂತೋಷ್ ಲಾಡ್ ಅವರಿಂದ ಸಹಾಯ ಹಸ್ತ ಪಡೆದು ಚೇತರಿಸಿಕೊಳ್ಳುತ್ತಿರುವ ದುಮ್ಮವಾಡದ ಯುವತಿ ಮಂಜುಳಾ ಬಸರಿಕೊಪ್ಪ ಅವರು ಸಂತೋಷ್ ಲಾಡ್ ಅವರ ಸಹಾಯ ನೆನೆದು ಭಾವುಕರಾಗಿದ್ದರು.
ಮಂಜುಳಾ ಅವರು ಮಾತಾಡುತ್ತ ಸಂತೋಷ್ ಲಾಡ್ ಅವರ ಸಹಾಯಹಸ್ತ ನೆನೆಯುತ್ತಿದ್ದಂತೆ ಸಂಕೋಚಕ್ಕೀಡಾದ ಲಾಡ್ ಅವರು ಸಹಾಯ ಮಾಡಿದ್ದೆಲ್ಲ ಈ ಹೊತ್ತಲ್ಲಿ ಹೇಳುವುದು ಬೇಡ ಅಂದರೂ ಸಹ ಅಲ್ಲಿ ನೆರೆದಿದ್ದ ಗ್ರಾಮಸ್ಥರು ಒತ್ತಾಯ ಮಾಡಿ ಯುವತಿಯ ಮಾತುಗಳನ್ನು ಕೇಳಿದ್ದರು.

ಸಂತೋಷ್ ಲಾಡ್ ಅವರು ಹೀಗೆ ಸಂಕಷ್ಟದಲ್ಲಿದ್ದ ಸಾವಿರಾರು ಜನರಿಗೆ ಸಹಾಯಹಸ್ತ ಚಾಚುತ್ತಲೇ ಬಂದಿದ್ದಾರೆ. ತಮ್ಮದೇ ಸಂತೋಷ್ ಲಾಡ್ ಫೌಂಡೇಶನ್‌ನ ಆಶ್ರಯದಲ್ಲಿ ಬಡ ರೋಗಿಗಳಿಗೆ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಅಸಹಾಯಕ ಬಡವರಿಗೆ ಸಹಾಯ ಮಾಡುತ್ತಲೇ ಬಂದಿದ್ದಾರೆ. ಸಂತೋಷ್ ಲಾಡ್ ಅವರು ಇಷ್ಟೆಲ್ಲ ಸಹಾಯಹಸ್ತ ಮಾಡುತ್ತಿದ್ದರೂ ಯಾವುದೇ ಪ್ರಚಾರ ಬಯಸದೇ ಜನಸೇವೆಯನ್ನು ಕಾಯಕದಂತೆ ಮಾಡುತ್ತ ಬರುತ್ತಿರುವುದು ವಿಶೇಷ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.












Click it and Unblock the Notifications