ಹು-ಧಾ ಪಾಲಿಕೆಯಲ್ಲಿ ಮಹಿಳೆಯರೇ ಮೇಯರ್, ಉಪಮೇಯರ್

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಮಾರ್ಚ್ 08 : ಮಹಿಳಾ ದಿನಾಚರಣೆಯ ದಿನದಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಡಳಿತ ಮಹಿಳೆಯರ ಕೈಗೆ ಸಿಕ್ಕಿದೆ. ಮೇಯರ್ ಮತ್ತು ಉಪ ಮೇಯರ್ ಪಟ್ಟಕ್ಕೆ ಅವಿರೋಧವಾಗಿ ಮಹಿಳೆಯರಿಬ್ಬರು ಆಯ್ಕೆಯಾಗಿದ್ದಾರೆ.

ಮಂಗಳವಾರ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ನಡೆಯಿತು. 37ನೇ ಮೇಯರ್ ಆಗಿ ಬಿಜೆಪಿಯ ಮಂಜುಳಾ ಅಕ್ಕೂರ ಆಯ್ಕೆಯಾದರೆ, 34 ನೇ ವಾರ್ಡ್ ಪ್ರತಿನಿಧಿಸಿರುವ ಲಕ್ಷ್ಮೀ ಉಪ್ಪಾರ ಅವರು ಉಪ ಮೇಯರ್ ಆಗಿ ಆಯ್ಕೆಯಾದರು. [ಮಹಿಳಾ ದಿನ: ನಮ್ಮ ವೃಕ್ಷ ಮಹಿಳೆ, ನಮ್ಮ ಹೆಮ್ಮೆ]

hubballi-dharwad

ಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು. ಆದ್ದರಿಂದ ಮಂಜುಳಾ ಅಕ್ಕೂರ ಆಯ್ಕೆ ಬಹುತೇಕ ಖಚಿತವಾಗಿತ್ತು. ಉಪಮೇಯರ್ ಸ್ಥಾನ ಹಿಂದುಳಿದ ವರ್ಗ (ಓಬಿಸಿ) ಮಹಿಳೆಗೆ ಮೀಸಲಾಗಿತ್ತು. ಉಪಮೇಯರ್ ಹುದ್ದೆಗೇರಲು ಮೂವರು ಮಹಿಳಾ ಸದಸ್ಯರು ತುದಿಗಾಲಲ್ಲಿ ನಿಂತಿದ್ದರು. ಅಂತಿಮವಾಗಿ ಲಕ್ಷ್ಮೀ ಉಪ್ಪಾರ ಆಯ್ಕೆಯಾಗಿದ್ದಾರೆ.

ಎರಡೂ ಹುದ್ದೆ ಮಹಿಳೆಯರಿಗೆ ಹೇಗೆ? : ಆಡಳಿತ ಪಕ್ಷ ಬಿಜೆಪಿ ಆಗಿರುವುದರಿಂದ ತಮ್ಮ ಪಕ್ಷದವರನ್ನು ಅವಿರೋಧವಾಗಿ ಆಯ್ಕೆ
ಮಾಡಲಾಗಿದೆ. ಮೇಯರ್ ಹುದ್ದೆ ಪರಿಶಿಷ್ಟ ಪಂಗಡ ಮಹಿಳೆಗೆ ಮತ್ತು ಉಪಮೇಯರ್ ಹುದ್ದೆ ಓಬಿಸಿ ಮಹಿಳೆಗೆ ಮೀಸಲಾಗಿತ್ತು. ಜೆಡಿಎಸ್ ಅಭ್ಯರ್ಥಿಯೊಬ್ಬರು ನಾಮಪತ್ರ ಸಲ್ಲಿಸಿದ್ದರು. ಆದರೆ, ಕೊನೆ ಕ್ಷಣದಲ್ಲಿ ನಾಮಪತ್ರ ವಾಪಸ್ ಪಡೆದಿದ್ದರಿಂದ ಅವಿರೋಧವಾಗಿ ಆಯ್ಕೆ ನಡೆದಿದೆ.

ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಮಂತಾದ ನಾಯಕರು ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. 67 ಸದಸ್ಯ ಬಲದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ 35, ಕಾಂಗ್ರೆಸ್ 22, ಜೆಡಿಎಸ್ 9 ಮತ್ತು ಇಬ್ಬರು ಪಕ್ಷೇತರ ಅಭ್ಯರ್ಥಿಗಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Manjula Akkur elected as Mayor and Lakshmi Uppar elected as Deputy Mayor in Hubballi-Dharwad corporation.
Please Wait while comments are loading...