ಮಣ್ಣಲ್ಲಿ ಮಣ್ಣಾದ ವೀರಯೋಧ ಹನುಮಂತಪ್ಪ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಧಾರವಾಡ, ಫೆಬ್ರವರಿ 12 : 'ಹನುಮಂತಪ್ಪ ಅಮರ್ ರಹೇ', 'ಹನುಮಂತಪ್ಪ ಜಿಂದಾಬಾದ್' ಎಂಬ ಘೋಷಣೆಗಳ ನಡುವೆ ವೀರಯೋಧ ಹನುಮಂತಪ್ಪ ಕೊಪ್ಪದ ಅವರು ಮಣ್ಣಲ್ಲಿ ಮಣ್ಣಾಗಿದ್ದಾರೆ. ಹನುಮಂತಪ್ಪ ಅವರ ಹುಟ್ಟೂರು ಬೆಟದೂರಿನಲ್ಲಿ ಶುಕ್ರವಾರ ಮಧ್ಯಾಹ್ನ ಅಂತ್ಯ ಸಂಸ್ಕಾರ ನಡೆಯಿತು. [ಚಿತ್ರಗಳು : ವೀರಯೋಧನಿಗೆ ಅಂತಿಮ ನಮನದ ಚಿತ್ರಗಳು]

ಹುಬ್ಬಳ್ಳಿಯ ನೆಹರೂ ಮೈದಾನದಿಂದ ಧಾರವಾಡದ ಬೆಟದೂರಿಗೆ ಹುನುಮಂತಪ್ಪ ಅವರ ಪಾರ್ಥಿವ ಶರೀರವನ್ನು ಆಂಬ್ಯುಲೆನ್ಸ್ ಮೂಲಕ ತೆಗೆದುಕೊಂಡು ಬರಲಾಯಿತು. ದಾರಿಯುದ್ದಕ್ಕೂ ಸಾವಿರಾರು ಸಂಖ್ಯೆಯ ಜನರು ಭಾರತದ ಧ್ವಜ ಹಿಡಿದು ಘೋಷಣೆ ಕೂಗುತ್ತ ವೀರಯೋಧನಿಗೆ ಅಂತಿಮ ನಮನ ಸಲ್ಲಿಸಿದರು. [ಹುಬ್ಬಳ್ಳಿಯಿಂದ ಬೆಟದೂರಿಗೆ ಬಂದ ಪಾರ್ಥಿವ ಶರೀರ]

betadoor village

ಹನುಮಂತಪ್ಪ ಅವರ ಮನೆಯಲ್ಲಿ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಿದ ನಂತರ, ನಡೂರಮಠ ಹೈಸ್ಕೂಲ್‌ನಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಅಲ್ಲಿಂದ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆ ನಡೆಯುವ ಸ್ಥಳಕ್ಕೆ ತಗೆದುಕೊಂಡು ಹೋಗಲಾಯಿತು. ಸಾವಿರಾರು ಜನರು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡರು. [ಹನುಮಂತಪ್ಪ ಕುಟುಂಬಕ್ಕೆ 25 ಲಕ್ಷ ಪರಿಹಾರ]

ಸಮಯ 3 ಗಂಟೆ : ಹನುಮಂತಪ್ಪ ಅವರ ಅಂತ್ಯಸಂಸ್ಕಾರ ಕಾರ್ಯಕ್ರಮದಲ್ಲಿ ಸುಮಾರು 30 ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಸಾವಿರಾರು ದ್ವಿಚಕ್ರ ವಾಹನ ಮತ್ತು ಕಾರುಗಳು ಗ್ರಾಮಕ್ಕೆ ಆಗಮಿಸಿದ್ದವು. ಎಲ್ಲಿ ನೋಡಿದಲ್ಲಿ ಜನವೋ ಜನ.['ಅಮರ' ಯೋಧ ಹನುಮಂತಪ್ಪನ ಅಂತಿಮ ಯಾತ್ರೆಯ ಚಿತ್ರಗಳು]

ಸಮಯ 2.40 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹನುಮಂತಪ್ಪ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಹನುಮಂತಪ್ಪ ಅವರ ಸೋದರಿ ದುಡಿಯುವವನು ಇಲ್ಲವಾದ್ದರಿಂದ ಖರ್ಚಿಗೂ ಹಣದ ಅಡಚಣೆ ಇದೆ ಎಂದಾಗ ಕೂಡಲೇ 25 ಲಕ್ಷ ರೂ.ಗಳ ಚೆಕ್ ಅನ್ನು ಮುಖ್ಯಮಂತ್ರಿ ನೀಡಿದರು.

ಸಮಯ 2 ಗಂಟೆ : ಹನುಮಂತಪ್ಪ ಕೊಪ್ಪದ ಹುತಾತ್ಮರಾದ ಹಿನ್ನೆಲೆಯಲ್ಲಿ ಕುಂದಗೋಳ ತಾಲೂಕಿನ ಬೆಟದೂರಿನಲ್ಲಿನ ಫೆ.13ರ ಶನಿವಾರ ನಡೆಯಬೇಕಿದ್ದ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯ ಮತದಾನವನ್ನು ಮುಂದೂಡಲಾಗಿದೆ. ಫೆ.17ರಂದು ಮತದಾನ ನಡೆಸುವುದಾಗಿ ಧಾರವಾಡ ಜಿಲ್ಲಾಧಿಕಾರಿ ರಾಜೇಂದ್ರ ಚೋಳನ್ ಆದೇಶ ಹೊರಡಿಸಿದ್ದಾರೆ. ಬೆಟದೂರು ಗ್ರಾಮ ಎಲಿವಾಳ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ.

ಸಮಯ 1.30 : ಮಣ್ಣಲ್ಲಿ ಮಣ್ಣಾದ ವೀರಯೋಧ ಹನುಮಂತಪ್ಪ ಕೊಪ್ಪದ

ಸಮಯ 1 ಗಂಟೆ : ಮಗಿಲು ಮುಟ್ಟಿದ್ದ ಕುಟುಂಬಸ್ಥರ ಆಕ್ರಂದನ, ಅತ್ತು-ಅತ್ತು ಸುಸ್ತಾದ ಹನುಮಂತಪ್ಪ ಪತ್ನಿ

ಸಮಯ 12.50 : ಅಂತ್ಯಕ್ರಿಯೆ ವಿಧಿವಿಧಾನವನ್ನು ಸಹೋದರ ಗೋವಿಂದಪ್ಪ ಕೊಪ್ಪನ್ ನೇರವೇರಿಸಲಿದ್ದು, ನೀಲಗುಂದ ಮಠದ ಚನ್ನಬಸವ ಶ್ರೀಗಳ ನೇತೃತ್ವದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

ಸಮಯ 12.38 : 'ಹನುಮಂತಪ್ಪ ಕೊಪ್ಪದ ಅವರ ಹೆಸರಿನಲ್ಲಿ ರಾಜ್ಯ ಸರ್ಕಾರ ಸ್ಮಾರಕ ನಿರ್ಮಾಣ ಮಾಡಬೇಕು' ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಒತ್ತಾಯಿಸಿದ್ದಾರೆ. ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ವಾಟಾಳ್ ನಾಗರಾಜ್ ಅವರು ವೀರಯೋಧನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಸಮಯ 12.30 : ಕೇಂದ್ರ ಸಚಿವ ಅನಂತ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಧಾರವಾಡ ಸಂಸದ ಪ್ರಹ್ಲಾದ್ ಜೋಶಿ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಹನುಮಂತಪ್ಪ ಅವರ ಅಂತ್ಯಕ್ರಿಯೆ ನಡೆಯವ ಸ್ಥಳಕ್ಕೆ ಆಗಮಿಸಿದರು.

ಸಮಯ 12.20 : ವೀರಶೈವ ವಿಧಿವಿಧಾನದಂತೆ ಬೆಟದೂರು ಕೆರೆಯ ಸಮೀಪ ಹನುಮಂತಪ್ಪ ಅವರ ಅಂತ್ಯಕ್ರಿಯೆ ನಡೆಯಲಿದೆ

ಸಮಯ 12 ಗಂಟೆ : ನಡೂರಮಠ ಹೈಸ್ಕೂಲ್‌ ಆವರಣದಿಂದ ಬೆಟದೂರು ಕೆರೆಯ ಸಮೀಪಕ್ಕೆ ಹನುಮಂತಪ್ಪ ಅವರ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಗುತ್ತಿದೆ.

ಸಮಯ 11.45 : ಪತಿಯ ಪಾರ್ಥಿವ ಶರೀರದ ಮೆರವಣಿಗೆ ವೇಳೆ ಕುಸಿದು ಬಿದ್ದ ಹನುಮಂತಪ್ಪ ಪತ್ನಿ

ಸಮಯ 11.20 : ಕಾರುಗಳ ಪಾರ್ಕಿಂಗ್ ವಿಚಾರದಲ್ಲಿ ಸೇನೆಯೊಂದಿಗೆ ಪೊಲೀಸರು ವಾಗ್ವಾದ ನಡೆಸಿದ್ದಾರೆ. ಹಿರಿಯರ ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಸಮಸ್ಯೆ ಪರಿಹಾರವಾಗಿದೆ. [ಹನುಮಂತಪ್ಪನಿಗೆ ಎದೆಯುಬ್ಬಿಸಿ ಸೆಲ್ಯೂಟ್ ಹೊಡೆಯಿರಿ]

ಸಮಯ 11.15 : ಶಿಸ್ತಿಗಾಗಿ ಹೆಸರಾಗಿರುವ ಭಾರತೀಯ ಸೇನೆಯವರು ಎಲ್ಲವೂ ನಿಗದಿತ ಸಮಯದಂತೆ ಆಗುವಂತೆ ನೋಡಿಕೊಳ್ಳುತ್ತಿದ್ದಾರೆ. ಪಾರ್ಥಿವ ಶರೀರವನ್ನು ತಮ್ಮ ಉಸ್ತುವಾರಿಯಲ್ಲಿಟ್ಟುಕೊಂಡಿದ್ದಾರೆ. ಬೆಳಗಾವಿಯಿಂದ ಮಿಲಿಟರಿ ವಾಹನಗಳು ಮತ್ತು ಸೈನಿಕರು ಬೆಟದೂರಿಗೆ ಆಗಮಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The cremation ceremony of Lance Naik Hanamanthappa Koppad was held in Betadoor village in Kundagol taluk, Dharwad district, North Karnataka on Friday with full military honors.
Please Wait while comments are loading...