• search
 • Live TV
ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಾಜಿ ಸಚಿವ ಶಿವಳ್ಳಿ ನೆನೆದು ಬಹಿರಂಗಸಭೆಯಲ್ಲಿ ಕಣ್ಣೀರಿಟ್ಟ ಡಿ.ಕೆ. ಶಿವಕುಮಾರ್

|
   ಕಣ್ಣೀರು ಹಾಕುವ ಮೂಲಕ ಶ್ರೀರಾಮುಲು ಅಣ್ಣನಿಗೆ ವಾರ್ನಿಂಗ್ ಕೊಟ್ಟಿ ಡಿಕೆಶಿ..! | Oneindia Kannada

   ಕುಂದಗೋಳ, ಮೇ 9: ಕುಂದಗೋಳ ಕ್ಷೇತ್ರದ ಉಪಚುನಾವಣೆಯ ಉಸ್ತುವಾರಿ ಹೊತ್ತುಕೊಂಡಿರುವ ಸಚಿವ ಡಿ.ಕೆ. ಶಿವಕುಮಾರ್, ಮಾಜಿ ಸಚಿವ ದಿವಂಗತ ಸಿ.ಎಸ್. ಶಿವಳ್ಳಿ ಅವರನ್ನು ನೆನಪಿಸಿಕೊಂಡು ಕಣ್ಣೀರಿಟ್ಟರು.

   ಕುಂದಗೋಳ ಕ್ಷೇತ್ರದ ಇಂಗಳಗಿಯಲ್ಲಿ ಗುರುವಾರ ಬಹಿರಂಗ ಸಮಾರಂಭದಲ್ಲಿ ಮಾತನಾಡುವ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಬಿಕ್ಕಿ ಬಿಕ್ಕಿ ಅತ್ತರು.

   ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

   ಸಿ.ಎಸ್. ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ ಅವರ ಪರ ಪ್ರಚಾರ ನಡೆಸಿದ ಅವರು, ಶಿವಳ್ಳಿ ಅವರು ಇಂದು ನಮ್ಮ ಜೊತೆ ಇಲ್ಲ. ಅವರ ಆತ್ಮ ನಮ್ಮೊಂದಿಗೆ ಇದೆ. ನಿಮ್ಮ ಪಾದಗಳಿಗೆ ನಮಸ್ಕಾರ ಮಾಡಲು ಬಂದಿದ್ದೇನೆ ಎಂದು ಹೇಳಿದರು.

   ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರವೇ ಕಾರಣ: ಪೇಚಿಗೆ ಸಿಲುಕಿಸಿದ ಶ್ರೀರಾಮುಲು ಹೇಳಿಕೆ

   ಕ್ಷೇತ್ರದಲ್ಲಿ ಬಿಜೆಪಿ ಮತದಾರರು ಮತ್ತು ಕಾಂಗ್ರೆಸ್ ಮತದಾರರು ಎಂದು ಪಟ್ಟಿ ಮಾಡಿಲ್ಲ. ಎಲ್ಲ ಮತದಾರರ ಬಳಿಯೂ ಮತಯಾಚನೆ ಮಾಡುತ್ತೇವೆ ಎಂದರು.

   ತಮ್ಮ ಹೇಳಿಕೆಯ ಬಗ್ಗೆ ಶ್ರೀರಾಮುಲು ಅವರು ಏನೇ ಸ್ಪಷ್ಟೀಕರಣ ನೀಡಿದರೂ ಅದನ್ನು ಪೊಲೀಸರ ಮುಂದೆ ನೀಡಲಿ, ಮಾಧ್ಯಮದವರ ಮುಂದೆ ಅಲ್ಲ. ಅವರು ಈ ಹಿಂದೆ ಮುಖ್ಯಮಂತ್ರಿ ಅವರ ಮೇಲೆ ಕೊಲೆ ಸಂಚಿನ ಆರೋಪ ಮಾಡಿದ್ದರು. ಎಚ್‌ಡಿಕೆ ಸುಮ್ಮನೆ ಇರಬಹುದು. ಆದರೆ, ನಾವು ಸುಮ್ಮನೆ ಇರಲು ಆಗುವುದಿಲ್ಲ. ಕ್ಷೇತ್ರದ ಸ್ವಾಭಿಮಾನದ ಪ್ರಶ್ನೆ ಇದು ಎಂದರು.

   ಬಿಜೆಪಿಯವರ ಮತ ಕಾಂಗ್ರೆಸ್‌ಗೆ ಬರಬೇಕು

   ಬಿಜೆಪಿಯವರ ಮತ ಕಾಂಗ್ರೆಸ್‌ಗೆ ಬರಬೇಕು

   ದಿವಂಗತ ಶಿವಳ್ಳಿ ಅವರನ್ನು ಕೆಟ್ಟವರು ಎಂದು ಬಿಜೆಪಿಯವರು ಯಾರೂ ಹೇಳಿಲ್ಲ. ಆದರೆ, ಸರ್ಕಾರದ ಕಿರುಕುಳದಿಂದ ಅವರು ಸತ್ತಿದ್ದಾರೆ ಎಂದು ಶ್ರೀರಾಮುಲು ಹೇಳಿದ್ದಾರೆ. ಶ್ರೀರಾಮುಲು ಜನರನ್ನು ನಮ್ಮ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ನವರೆಲ್ಲರೂ ಬಿಜೆಪಿ ಕಾರ್ಯಕರ್ತರ ಮನೆಗಳಿಗೆ ಹೋಗಬೇಕು. ಅವರ ವೋಟುಗಳನ್ನು ಕಾಂಗ್ರೆಸ್‌ಗೆ ಹಾಕುವಂತೆ ಮಾಡಬೇಕು. ಕನಕಪುರದ ಜನರಿಗೆ ಮಾಡಿದ ಸೇವೆಯನ್ನು ನಿಮಗೂ ಮಾಡುತ್ತೇನೆ ಎಂದು ಭರವಸೆ ನೀಡಿದರು.

   ಶ್ರೀರಾಮುಲು ಅಣ್ಣ ಅವರ ಬಗ್ಗೆ ನಮಗೆ ಗೌರವವಿದೆ. ಆದರೆ ಅವರು ಆಧಾರ ರಹಿತ ಆರೋಪ ಮಾಡಬಾರದು ಎಂದು ಹೇಳಿದರು.

   ಶ್ರೀರಾಮುಲು ವಿರುದ್ಧ ಅಖಾಡಕ್ಕಿಳಿದ ಡಿಕೆಶಿ: ಬಿಸಿತುಪ್ಪವಾದ ಶಿವಳ್ಳಿ ಸಾವಿನ ಹೇಳಿಕೆ

   ಜನರಲ್ಲಿ ಗಾಬರಿ ಮೂಡಿದೆ

   ಜನರಲ್ಲಿ ಗಾಬರಿ ಮೂಡಿದೆ

   ಸಮ್ಮಿಶ್ರ ಸರ್ಕಾರದ ಒತ್ತಡದಿಂದಾಗಿ ಶಿವಳ್ಳಿ ಅವರ ಮೃತಪಟ್ಟರು ಎಂಬ ಶ್ರೀರಾಮುಲು ಹೇಳಿಕೆ ಕೇಳಿ ಗಾಬರಿಯಾಗಿದೆ. ಅವರ ಸಾವಿಗೆ ಮೈತ್ರಿ ಸರ್ಕಾರ ಕಾರಣ ಎನ್ನುವುದು ಸುಳ್ಳು ಆರೋಪ. ಶ್ರೀರಾಮುಲು ಅವರು ನಾವು ಅವರಿಗೆ ಕಿರುಕುಳ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ. ಇದು ಗೊಂದಲ ಸೃಷ್ಟಿಸಿದ್ದು, ನಮ್ಮ ಕಾರ್ಯಕರ್ತರು ತನಿಖೆಗೆ ಆಗ್ರಹಿಸುತ್ತಿದ್ದಾರೆ. ಅವರ ಆರೋಪದಿಂದ ಜನರಿಗೆ ನಮ್ಮ ಮೇಲೆ ಅನುಮಾನ ಮೂಡುವಂತಾಗಿದೆ ಎಂದು ಕಿಡಿಕಾರಿದರು.

   ಕುಂದಗೋಳ : ಡಿ.ಕೆ.ಶಿವಕುಮಾರ್ ತಂತ್ರದಿಂದ ಬಿಜೆಪಿಗೆ ನಡುಕ

   ಕುಮಾರಸ್ವಾಮಿ ಸುಮ್ಮನಿರಬಹುದು, ನಾವು ಇರೊಲ್ಲ

   ಕುಮಾರಸ್ವಾಮಿ ಸುಮ್ಮನಿರಬಹುದು, ನಾವು ಇರೊಲ್ಲ

   ಶ್ರೀರಾಮುಲು ಅವರ ಹೇಳಿಕೆ ಬಗ್ಗೆ ವಿ.ಎಸ್. ಉಗ್ರಪ್ಪ ಅವರು ಚುನಾವಣಾ ಅಧಿಕಾರಿಗೆ ದೂರು ನೀಡಲಿದ್ದಾರೆ. ಸತ್ಯಾಂಶ ಏನು ಎಂಬುದು ತನಿಖೆಯಾಗಬೇಕು. ಶ್ರೀರಾಮುಲು ಅವರು ಸ್ಪಷ್ಟನೆ ನೀಡುವುದಾದರೆ ಪೊಲೀಸರಿಗೆ ನೀಡಲಿ. ಈ ಹಿಂದೆಯೂ ಮುಖ್ಯಮಂತ್ರಿ ಕೊಲೆ ಸಂಚು ಮಾಡಿದ್ದಾರೆ ಎಂದು ಆರೋಪಿಸಿದರು. ಈ ರೀತಿಯ ಆರೋಪಗಳನ್ನು ಕೇಳಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸುಮ್ಮನೆ ಇರಬಹುದು. ಆದರೆ ನಾವು ಸುಮ್ಮನೆ ಇರುವುದಿಲ್ಲ.

   ತನಿಖೆ ನಡೆಯುವುದು ಅಗತ್ಯ

   ತನಿಖೆ ನಡೆಯುವುದು ಅಗತ್ಯ

   ಕುಮಾರಸ್ವಾಮಿ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ಇಬ್ಬರೂ ಸೇರಿ ಶಿವಳ್ಳಿ ಅವರಿಗೆ ಕಿರುಕುಳ ನೀಡಿತ್ತು ಎಂದು ಶ್ರೀರಾಮುಲು ಹೇಳಿದ್ದಾರೆ. ಅವರ ಕೊಲೆ ಹಿಂದೆ ಯಾರಿದ್ದಾರೆ? ಕುಮಾರಸ್ವಾಮಿ ಕೊಲೆ ಮಾಡಿಸಿದ್ದಾರೆಯೇ? ಡಿ.ಕೆ. ಶಿವಕುಮಾರ್ ಕೊಲೆ ಮಾಡಿಸಿದ್ದಾರೆಯೇ? ಅಥವಾ ಜಿಲ್ಲಾ ಉಸ್ತುವಾರಿ ಸಚಿವ ದೇಶಪಾಂಡೆ ಮಾಡಿಸಿದ್ದಾರಾ? ಎಂಪಿ ಅಭ್ಯರ್ಥಿ ಏನಾದರೂ ಮಾಡಿದ್ದಾರಾ? ಅಥವಾ ಕಾರ್ಯಕರ್ತರು ಮಾಡಿದ್ದಾರಾ ಎಂದು ಎಲ್ಲರ ಮೇಲೆ ಅನುಮಾನ ಶುರುವಾಗಿದೆ. ಆ ಅನುಮಾನದಿಂದ ಆಚೆ ಬರಬೇಕು. ಹೀಗಾಗಿ ಪೊಲೀಸರಿಗೆ ದೂರು ನೀಡುತ್ತೇವೆ. ಅವರೊಬ್ಬ ಜವಾಬ್ದಾರಿಯುತ ಮನುಷ್ಯ, ಸಚಿವರಾಗಿದ್ದವರು. ಅವರು ಹೀಗೆ ಆರೋಪಿಸಿರುವಾಗ ಸೂಕ್ತ ತನಿಖೆ ನಡೆದು ಸತ್ಯ ಹೊರಗೆ ಬರುವುದು ಅಗತ್ಯ ಎಂದರು.

   English summary
   Congress leader cried remembering former minister CS Shivalli during his campaign in Kundgol by election for party candidate Kusuma Shivalli on Thursday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X