ಕೋಡಿ ಶ್ರೀಗಳ ಭವಿಷ್ಯ: ಶಾಸ್ತ್ರಿ ಅವರಂಥ ದೇಶ ನಾಯಕನ ಸಾವು
ಧಾರವಾಡ, ಸೆ. 29: ದೇಶದ ರಾಜಕೀಯ ನಾಯಕರಲ್ಲಿ ತಲ್ಲಣ ಉಂಟು ಮಾಡುವಂಥ ಭವಿಷ್ಯ ನುಡಿಯೊಂದನ್ನು ಕೋಡಿಮಠದ ಶ್ರೀಗಳು ಶುಕ್ರವಾರ ನುಡಿದಿದ್ದಾರೆ.
ದೇಶ ಕಂಡ ಮಹಾನ್ ನಾಯಕ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಾವಿನ ದುರ್ಘಟನೆಯನ್ನು ನೆನಪಿಸುವ ಸಾವೊಂದು ಸಂಭವಿಸಲಿದೆ. ರಾಷ್ಟ್ರಮಟ್ಟದ ನಾಯಕರೊಬ್ಬರ ಸಾವು ಸಂಭವಿಸುವ ಲಕ್ಷಣ ಇದೆ ಎಂದು ಕೋಡಿಹಳ್ಳಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಅವರು ಹೇಳಿದ್ದಾರೆ.

ನಾಯಕರೊಬ್ಬರ ಅಕಾಲಿಕ ಸಾವು, ಜನವರಿ ತಿಂಗಳಿನವರೆಗೆ ಅಕಾಲಿಕ ಮಳೆ ಮುಂದುವರೆಯಲಿದೆ ಎಂದಿದ್ದಾರೆ. ಲಾಲ್ ಬಹದ್ದೂರ ಶಾಸ್ತ್ರಿ ಅವರ ಕುರಿತಾದ ನೀಡಿದ್ದ ಭವಿಷ್ಯವಾಣಿ : 'ನಾನು ಆಗ ಚೋಟುಗೇಣಿನ ವೀರ. ಭಾರತದ ಕುವರ ತಕ್ಕಡಿಯ ಊರಿನಲ್ಲಿ ವಿಷ ಪಾನ' ಎಂದು ಹೇಳಿದ್ದನ್ನು ಸ್ಮರಿಸಿಕೊಂಡರು. ಈಗ ಇಂಥದ್ದೇ ಘಟನೆಗೆ ಸಾಕ್ಷಿಯಾಗಬೇಕಿದೆ ಎಂದರು.
ರಾಜ್ಯ ಸರ್ಕಾರವು ಜಾರಿಗೆ ತರಲು ಉದ್ದೇಶಿಸಿರುವ ಮೌಢ್ಯ ನಿಷೇಧ ಕಾಯ್ದೆ ಬಗ್ಗೆ ಮಾತನಾಡಿ, ಕೆಲವರು ಮೌಢ್ಯವನ್ನೇ ಬಂಡವಾಳ ಮಾಡಿಕೊಂಡು ಜನರ ಸುಲಿಗೆ ಮಾಡುತ್ತಿದ್ದಾರೆ ಹಾಗಾಗಿ ಮೌಢ್ಯ ನಿಷೇಧ ಕಾಯ್ದೆ ಜಾರಿ ಮಾಡ್ತಾ ಇರೋದು ಒಳ್ಳೆಯ ಕಾರ್ಯ ಎಂದರು.












Click it and Unblock the Notifications