ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಸೈಬರ್ ಅಕ್ರಮಕ್ಕೆ ಯುವಜನಾಂಗದ ಅಜಾಗರೂಕತೆಯೇ ಕಾರಣ'

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ,ಮಾರ್ಚ್,09: ಇತ್ತೀಚೆಗೆ ನಾಡಿನಾದ್ಯಂತ ಹೆಚ್ಚಾಗುತ್ತಿರುವ ಸೈಬರ್ ಅಪರಾಧ ಪ್ರಕರಣಗಳಿಗೆ ಆಧುನಿಕ ಜೀವನಶೈಲಿಗೆ ಹೊಂದಿಕೊಳ್ಳುವ ಯುವಕ ಯುವತಿಯರ ಧಾವಂತವೇ ಕಾರಣ ಎಂದು ಧಾರವಾಡ ಜಿಲ್ಲಾ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ ಭೂಶೆಟ್ಟಿ ಅಭಿಪ್ರಾಯಪಟ್ಟರು.

ಮಂಗಳವಾರ ಕೆಎಲ್ಇ ಸಂಸ್ಥೆಯ ಪಿ.ಸಿ.ಜಾಬೀನ್ ವಿಜ್ಞಾನ ಮಹಾವಿದ್ಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸೈಬರ್ ಕ್ರೈಮ್ ಮತ್ತು ಯುವಕರು ವಿಷಯವಾಗಿ ಮಾತನಾಡಿದರು.[ಈಕೆ ಗೃಹಿಣಿಯಲ್ಲ, ಇಡೀ ಮನುಕುಲವನ್ನೇ ಹೊತ್ತ ಜಗಜ್ಜನನಿ]

KLE institution celebrates International womens day in Hubballi

ಅಂತರ್ಜಾಲದ ಬಳಕೆ ಇಡೀ ಜಗತ್ತನ್ನೇ ಬೆರಳ ತುದಿಗೆ ತಂದು ನಿಲ್ಲಿಸಿದೆ. ಮುಗ್ಧರನ್ನು ದೋಚುವ ಸಮಾಜಘಾತುಕ ಶಕ್ತಿಯೊಂದು ಜನ್ಮ ತಳೆದಿದ್ದು, ವೈಯಕ್ತಿಕ ಅಥವಾ ಸಂಸ್ಥೆಯೊಂದರ ಗೌಪ್ಯ ಮಾಹಿತಿಯನ್ನು ಹ್ಯಾಕಿಂಗ್ ಮಾಡುವ, ಆನ್ ಲೈನ್ ಖರೀದಿಯಲ್ಲಿ ಗೋಲ್-ಮಾಲ್, ಅಂತರ್ಜಾಲ ಆಧಾರಿತ ಸಾಫ್ಟವೇರ್ ಗಳಿಂದ ಮಾಹಿತಿ ಸೋರಿಕೆ ಇಂತಹ ಸೈಬರ್ ಅಕ್ರಮಗಳಿಗೆ ಯುವಕ-ಯುವತಿಯರ ಅಜಾಗರೂಕತೆಯೇ ಕಾರಣವಾಗಿದೆ ಎಂದರು.

ಇಂದು ವಾಣಿಜ್ಯ ಮತ್ತು ವ್ಯವಹಾರಗಳಲ್ಲಿ ಗಣಕ ಆಧಾರಿತ ವ್ಯವಸ್ಥೆ, ಇ-ಖರೀದಿ, ಕಾರ್ಡ್ ಮನಿ ಇವುಗಳಲ್ಲಿ ವೈಯಕ್ತಿಕ ಕಾಪಾಡಿಕೊಳ್ಳದಿರುವುದು ಖದೀಮರಿಗೆ ಅವಕಾಶ ಕೊಡುತ್ತದೆ. ಆದರೆ ದೊಡ್ಡದಾದ ಪಾಸ್-ವರ್ಡ್ ಗಳು, ಸ್ಪೈವೇರ್ ಬ್ಲಾಕಿಂಗ್, ವೈಯಕ್ತಿಕ ನಿರ್ವಹಣೆ, ಆಂಟೀ ಹ್ಯಾಕ್ ಸಾಫ್ಟವೇರ್ ಬಳಕೆ, ಆಟೋಮ್ಯಾಟಿಕ್ ಸಾಫ್ಟವೇರ್ ಅಪಡೇಟಿಂಗ್ ಜಾರಿ ಮಾಡುವುದರಿಂದ ಭದ್ರತೆ ಇರುತ್ತದೆ ಎಂದು ಸಲಹೆ ನೀಡಿದರು.[ಸಿಲಿಕಾನ್ ಸಿಟಿ ಬೆಂಗಳೂರು ಈಗ 'ಸೈಬರ್ ಕ್ರೈಂ' ರಾಜಧಾನಿ]

ಆಧುನಿಕತೆಯ ವೇಗದ ಭರದಲ್ಲಿ ತಂತ್ರಜ್ಞಾನದ ಸರಿಯಾದ ಅರಿವಿಲ್ಲದೇ ಮಾಡುವ ವ್ಯವಹಾರಗಳು ಬದುಕಿನಲ್ಲಿ ಬಿರುಗಾಳಿಯನ್ನೇ ಎಬ್ಬಿಸುತ್ತವೆ. ಭಾರತದ ಯುವಶಕ್ತಿ ಇಂತಹ ಸವಾಲುಗಳನ್ನು ಮೆಟ್ಟಿ ನಿಲ್ಲಲು ಆತ್ಮವಿಶ್ವಾಸ ಮತ್ತು ತಾಂತ್ರಿಕ ಕೌಶಲ ಹೊಂದಿರಬೇಕು. ಮೊಬೈಲ್ ನ್ನು ಜೀವನದ ಸದ್ಭಳಕೆಯ ಸಾಧನವಾಗಿ ಬಳಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಸತ್ರ ನ್ಯಾಯಾಧೀಶ ಎಸ್.ಎನ್.ಕಲ್ಕಣಿ ಮಾತನಾಡಿ, ಸೈಬರ್ ಬಳಕೆಯಿಂದ ಆಗುವ ತೊಂದರೆಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಎಲ್ಲವನ್ನು ಎದುರಿಸುವ ಮನೋಸ್ಥೈರ್ಯ ಬೆಳೆಸಿಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ಅಡ್ವೋಕೇಟ್ ಪದ್ಮಜಾರಾಣಿ ಹಾದಿಮನಿ, ಹುಬ್ಬಳ್ಳಿ ಶಹರ ಬಿಇಒ ಉಮೇಶ ಬಮ್ಮಕ್ಕನವರ, ಪ್ರಾಚಾರ್ಯ ಪ್ರೊ.ಎಮ್.ಟಿ.ಹೊಸಮನಿ, ಹುಬ್ಬಳ್ಳಿ ತಾಲೂಕು ಕಾನೂನು ಸೇವಾ ಸಮಿತಿಯ ಎ.ಸಿ.ನವಲೂರು, ವಿಶ್ವನಾಥ ಬಿಚಗತ್ತಿ, ಪ್ರೊ.ಎಸ್.ಬಿ.ಹಿರೇಮಠ,
ಡಾ.ಅರುಣಕುಮಾರ ಸೋನಪ್ಪನವರ ಉಪಸ್ಥಿತರಿದ್ದರು.

English summary
KLE institution have celebrated International womens day in Hubballi on Tuesday, March 8th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X