18ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಜಗದೀಶ್ ಶೆಟ್ಟರ್ ವಿಶ್ವಾಸ

By: ಶಂಭು
Subscribe to Oneindia Kannada

ಹುಬ್ಬಳ್ಳಿ, ಡಿ.27: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆಯುತ್ತಿರುವ ಚುನಾವಣೆಯ ಮತದಾನ ದಿನವಾದ ರವಿವಾರ ಡಿ.27 ರಂದು ಗದಗ, ಹಾವೇರಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಶಾಂತಿಯುತ ಮತದಾನ ಜರುಗಿದೆ.

ನವಲಗುಂದ ತಾಲೂಕಿನ ಅರೇಕುರಹಟ್ಟಿ ಗ್ರಾಮದಲ್ಲಿ ಕಳಸಾ-ಬಂಡೂರಿ ಹೋರಾಟಗಾರರು ಮತದಾನ ಬಹಿಷ್ಕರಿಸಿದ್ದನ್ನು ಬಿಟ್ಟರೆ ಉಳಿದೆಲ್ಲೆಡೆ ಶಾಂತಿಯುತವಾಗಿ ಮತದಾನವಾಗಿದೆ. ಬೆಳಗಿನಿಂದ ನಿಧಾನವಾಗಿ ಆರಂಭವಾದ ಮತದಾನ ಮಧ್ಯಾಹ್ನದ ಹೊತ್ತಿಗೆ ಚುರುಕಾಯಿತು ಎಂದು ಜಿಲ್ಲಾಧಿಕಾರಿ ರಾಜೇಂದ್ರ ಚೋಳಿನ್ ತಿಳಿಸಿದ್ದಾರೆ.[ಎಂಎಲ್ಸಿ ಚುನಾವಣೆ : ಶೇ 95 ಮತದಾನದ ಅಂದಾಜು]

ಸ್ಥಳೀಯ ಸಂಸ್ಥೆಗಳಿಂದ 25 ವಿಧಾನಪರಿಷತ್ ಸದಸ್ಯರ ಆಯ್ಕೆಯ ಚುನಾವಣೆಯ ಮತದಾನ ಭಾನುವಾರ ಬೆಳಗ್ಗೆ 8 ಗಂಟೆಗೆ ಆರಂಭಗೊಂಡು ಸಂಜೆ 4 ಗಂಟೆ ವೇಳೆಗೆ ಅಂತ್ಯಕಂಡಿದೆ. ರಾಜ್ಯದೆಲ್ಲೆಡೆ ಒಟ್ಟಾರೆ ಅಂದಾಜು ಶೇ 95ರಷ್ಟು ಮತದಾನವಾಗಿರುವ ಮಾಹಿತಿ ಲಭ್ಯವಾಗಿದೆ.

25 ವಿಧಾನಪರಿಷತ್ ಸದಸ್ಯ ಸ್ಥಾನಕ್ಕಾಗಿ ಕಾಂಗ್ರೆಸ್‌ನ 12, ಬಿಜೆಪಿಯ 7, ಜೆಡಿಎಸ್‌ 5, ಒಬ್ಬ ಪಕ್ಷೇತರ ಸದಸ್ಯರು ಸೇರಿ 2016ರ ಜನವರಿ 5ರಂದು ನಿವೃತ್ತರಾಗಲಿದ್ದು, ಇವರಿಂದ ತೆರವಾಗುವ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಒಟ್ಟು 125 ಅಭ್ಯರ್ಥಿಗಳ ಭವಿಷ್ಯ ಡಿಸೆಂಬರ್ 30ರಂದು ತಿಳಿಯಲಿದೆ.

ಸಹೋದರನಿಗೆ ಟಿಕೆಟ್ ನನ್ನ ಪಾತ್ರವಿಲ್ಲ

ಸಹೋದರನಿಗೆ ಟಿಕೆಟ್ ನನ್ನ ಪಾತ್ರವಿಲ್ಲ

ಸಹೋದರ ಪ್ರದೀಪ ಶೆಟ್ಟರ್ ಗೆ ಚುನಾವಣೆಯಲ್ಲಿ ಟಿಕೆಟ್ ನೀಡಿದ್ದು ಪಕ್ಷಕ್ಕೆ ಸಂಬಂಧಪಟ್ಟದ್ದು ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
* ನಗರದ ಮಹಾನಗರ ಪಾಲಿಕೆಯಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಗೆ ಮತ ಚಲಾಯಿಸಿ ಮಾತನಾಡುತ್ತ, ನನ್ನ ಸಹೋದರನಿಗೆ ಟಿಕೆಟ್ ನೀಡಿರುವುದಲ್ಲಿ ನನ್ನ ಕೈವಾಡವಿಲ್ಲ.
* ರಾಜ್ಯಾದ್ಯಂತ ನಾವು 18 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವುದು ಶತಸಿದ್ಧ, ಧಾರವಾಡ ಕ್ಷೇತ್ರದ ಪ್ರದೀಶ ಶೆಟ್ಟರ ಗೆಲ್ಲುವುದರಲ್ಲಿ ಸಂಶಯವೇ ಇಲ್ಲವೆಂದರು.

ರಾಜ್ಯ ಸರಕಾರಕ್ಕೆ ತಕ್ಕ ಪಾಠ

ರಾಜ್ಯ ಸರಕಾರಕ್ಕೆ ತಕ್ಕ ಪಾಠ

ಹುಬ್ಬಳ್ಳಿಯ ಮತಕೇಂದ್ರದಲ್ಲಿ ಮತ ಚಲಾಯಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ, ಈ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಸದಸ್ಯರು ಕಾಂಗ್ರೆಸ್ ಸರಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ. ನಾವು ಸುಮಾರು 15 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದರು.

ನಮಗೆ ಕಾಯಂ ಮತದಾರರಿದ್ದಾರೆ ಹೀಗಾಗಿ ನಮಗೇನೂ ಸೋಲಿನ ಭಯವಿಲ್ಲ ಎಂದ ಜೋಶಿ, ಬಿಜೆಪಿ ಅಭ್ಯರ್ಥಿ ಪ್ರದೀಶ ಶೆಟ್ಟರ್ ಗೆಲ್ಲುವುದು ಬಹುತೇಕ ಖಚಿತ ಎಂದರು.

20 ಸ್ಥಾನ ಗೆಲ್ಲುತ್ತೇವೆ : ಎಚ್.ಕೆ.ಪಾಟೀಲ

20 ಸ್ಥಾನ ಗೆಲ್ಲುತ್ತೇವೆ : ಎಚ್.ಕೆ.ಪಾಟೀಲ

ಈ ಚುನಾವಣೆಯಲ್ಲಿ ತಮ್ಮ ಪಕ್ಷ ಕನಿಷ್ಠ 20 ಸ್ಥಾನಗಳನ್ನು ಗೆಲ್ಲುತ್ತದೆ ಎಂದರು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ ಹೇಳಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿ ಹಾಗೂ ತಮಗೆ ಆಪ್ತರಾಗಿರುವ ಶ್ರೀನಿವಾಸ ಮಾನೆ ಗೆಲ್ಲುವುದು ನಿಶ್ಚಿತ ಎಂದು ಅವರು ಹೇಳಿದ್ದಾರೆ.

ಬಿಜೆಪಿಯನ್ನು ಬೇರುಮಟ್ಟದಿಂದ ಕಿತ್ತೊಗೆಯುವೆವು

ಬಿಜೆಪಿಯನ್ನು ಬೇರುಮಟ್ಟದಿಂದ ಕಿತ್ತೊಗೆಯುವೆವು

ಸಿದ್ಧರಾಮಯ್ಯ ಸರಕಾರದ ಶ್ರೀರಕ್ಷೆಯಿಂದ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ ಹೇಳಿದ್ದಾರೆ. ಅವರು ನಗರದಲ್ಲಿ ಮತದಾನ ಮಾಡಿದ ನಂತರ ಮಾತನಾಡಿ, ಬಿಜೆಪಿಯನ್ನು ರಾಜ್ಯದಲ್ಲಿ ಬೇರು ಸಮೇತ ಕಿತ್ತೊಸೆಯುವೆವು ಎಂದು ಹೇಳಿದರು.

ಹಿಂದೆ ಸರಿದಿದ್ದಕ್ಕೆ ಬೇಸರ

ಹಿಂದೆ ಸರಿದಿದ್ದಕ್ಕೆ ಬೇಸರ

ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿದ ನಂತರ ಪಕ್ಷದ ಹಿರಿಯರ ಮಾತಿಗೆ ಬೆಲೆ ಕೊಟ್ಟು ಕಣದಿಂದ ಹಿಂದೆ ಸರಿಯಬೇಕಾಯಿತು ಎಂದು ನಾಗರಾಜ ಛಬ್ಬಿ ಬೇಸರ ವ್ಯಕ್ತಪಡಿಸಿದ್ದಾರೆ. ಪಕ್ಷದ ವರಿಷ್ಠರು ಶೀಘ್ರ ಸೂಕ್ತ ಸ್ಥಾನಮಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿದೆ

ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿದೆ

ನಾವೇನೂ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದ್ದಾರೆ. ಅವರು ನಗರದಲ್ಲಿ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸಿ ಮಾತನಾಡಿ, ನಮ್ಮ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಮೊದಲ ಪ್ರಾಶಸ್ತ್ಯದ ಮತಗಳೊಂದಿಗೆ ಆಯ್ಕೆಯಾಗಲಿದ್ದಾರೆ ಎಂದು ಹೇಳಿದರು. ಈ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿಯೇ ಇಲ್ಲದ್ದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಒಂದೊಂದು ಗೆಲುವು ಸಾಧಿಸಲಿದೆ ಎಂದರು.

ಅತೀ ಹೆಚ್ಚು ಅಂತರದಿಂದ ಗೆಲ್ಲುವೆ

ಅತೀ ಹೆಚ್ಚು ಅಂತರದಿಂದ ಗೆಲ್ಲುವೆ

ತಾವು ಐದು ಸಾವಿರಕ್ಕಿಂಗತ ಹೆಚ್ಚು ಮತಗಳಿಂದ ಗೆಲ್ಲುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರು ನಗರದಲ್ಲಿ ಮತ ಚಲಾಯಿಸಿ ಮಾತನಾಡಿ, ಸ್ಥಳೀಯ ಸಂಸ್ಥೆಗಳ ಮತದಾರರು ಕಾಂಗ್ರೆಸ್ ಸರಕಾರದ ಬಗ್ಗೆ ಉತ್ತಮ ವಿಶ್ವಾಸ ಹೊಂದಿದ್ದಾರೆ. ಹೀಗಾಗಿ ಮೂರು ಜಿಲ್ಲೆಗಳ ಮತದಾರರು ನನ್ನನ್ನು ಅತೀ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಲಿದ್ದಾರೆ ಎಂದರು.

ಮತದಾನದ ಮಾಡದ ಹೊರಟ್ಟಿ

ಮತದಾನದ ಮಾಡದ ಹೊರಟ್ಟಿ

ಬೆಂಗಳೂರಿನಲ್ಲಿರುವ ಜೆಡಿಎಸ್ ನ ಹಿರಿಯ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಇಂದಿನ ಚುನಾವಣೆಯಲ್ಲಿ ಮತದಾನ ಮಾಡಿಲ್ಲ. ಪಾಲಿಕೆಯ ಮತಗಟ್ಟಿ ಸಂಖ್ಯೆ 150 ರಲ್ಲಿ ತಮ್ಮ ಮತಹಕ್ಕು ಹೊಂದಿದ್ದ ಹೊರಟ್ಟಿ ಮತದಾನ ಮುಗಿಯುವ ವೇಳೆಗೆ ಬರಲಿಲ್ಲವಾದ್ದರಿಂದ ಮತ ಚಲಾವಣೆ ಮಾಡಿಲ್ಲದಿರುವುದು ಆಶ್ಚರ್ಯ ಮೂಡಿಸಿದೆ.

ಚಾಕಲಬ್ಬಿಯಲ್ಲಿ ಮತದಾನವಿಲ್ಲ

ಚಾಕಲಬ್ಬಿಯಲ್ಲಿ ಮತದಾನವಿಲ್ಲ

ಕುಂದಗೋಳ ತಾಲೂಕಿನ ಚಾಕಲಬ್ಬಿ ಗ್ರಾಮ ಪಂಚಾಯಿತಿಯಲ್ಲಿ ಮತಗಟ್ಟೆ ತೆರೆದಿದ್ದರೂ ಅಲ್ಲಿ ಯಾರೂ ಮತದಾನ ಮಾಡಿಲ್ಲ. ಸಮೀಪದ ಬರಧ್ವಾಡ ಗ್ರಾಮಸ್ಥರು ಚುನಾವಣೆಗೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರಿಂದ ಚುನಾವಣೆಗೆ ಯಾರೂ ಮತದಾರರಿಲ್ಲ ಎಂದು ನಮೂದಿಸಿದ್ದು ಮತದಾನವಾಗದಿರುವುದಕ್ಕೆ ಕಾರಣವಾಗಿದೆ.

ನರಗುಂದ ಬಂದ್

ನರಗುಂದ ಬಂದ್

ನರಗುಂದ ಬಂದ್ ಕರೆ ನೀಡಿದ್ದರೂ ಆ ಭಾಗದಲ್ಲಿ ಮತದಾನ ಶಾಂತಿಯುತ ಮತದಾನ ಜರುಗಿದೆ. ಕಳಸಾ-ಬಂಡೂರಿ ಹೋರಾಟ ಸಮಿತಿಯು ನರಗುಂದ್ ಬಂದ್ ಗೆ ಕರೆ ನೀಡಿತ್ತು. ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಮತದಾನಕ್ಕೆ ಯಾವುದೇ ತೊಂದರೆಯಾಗಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Voting for Karnataka state Legislative Council elections 2015 held on Sunday (Dec.27). Fate of 125 candidates including wight women will be sealed and outcome can be out by Dec.31. Voting in the Gadag, Dharwad, Haveri district was peaceful.
Please Wait while comments are loading...