ಹೀರೋ ಮೋಟೊಕಾರ್ಪ್ ಗೆ ಕೈ ಕೊಟ್ಟ ಕರ್ನಾಟಕ
ಧಾರವಾಡ, ಸೆ. 18 : ಸುಮಾರು 20 ಸಾವಿರ ಉದ್ಯೋಗ ಸೃಷ್ಟಿಸುತ್ತಿದ್ದ ಹೀರೋ ಮೋಟೊಕಾರ್ಪ್ ಘಟಕ ಪಕ್ಕದ ಆಂಧ್ರಪ್ರದೇಶದ ಪಾಲಾಗುತ್ತಿದೆ. ಧಾರವಾಡದಲ್ಲಿ ಸ್ಥಾಪನೆಯಾಗಬೇಕಿದ್ದ ಘಟಕ ಚಿತ್ತೂರಿಗೆ ಹೋಗುತ್ತಿದೆ. ನೂತನ ಕೈಗಾರಿಕಾ ನೀತಿ ರಚಿಸುವ ಉತ್ಸಾಹದಲ್ಲಿರುವ ರಾಜ್ಯ ಸರ್ಕಾರ ರಾಜ್ಯದಲ್ಲಿ ಸ್ಥಾಪನೆಯಾಗಬೇಕಿದ್ದ ಘಟಕವನ್ನು ಕಳೆದುಕೊಂಡಿದೆ.
ಸುಮಾರು 2,200 ಕೋಟಿ ರೂ. ಬಂಡವಾಳ ಹೂಡಿಕೆಯ ಹೀರೋ ಮೋಟೊಕಾರ್ಪ್‌ನ 1.8 ಮಿಲಿಯನ್ ಸಾಮರ್ಥ್ಯದ ದ್ವಿಚಕ್ರ ವಾಹನ ತಯಾರಿಕಾ ಘಟಕ ಧಾರವಾಡ ಸಮೀಪದ ಮಮ್ಮಿಗಟ್ಟಿಯಲ್ಲಿ ನಿರ್ಮಾಣವಾಗಬೇಕಿತ್ತು. ಘಟಕ ಕರ್ನಾಟಕದ ಕೈ ತಪ್ಪುವುದಿಲ್ಲ ಎಂದು ಸ್ವತಃ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು. ಆದರೆ, ಅದು ಸದ್ಯ ಚಿತ್ತೂರಿಗೆ ಸ್ಥಳಾಂತರಗೊಂಡಿದೆ. [ಹೀರೋಗೆ ಕೈ ಕೊಟ್ಟ ಹೋಂಡಾ ಮೋಟರ್ಸ್]

ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಚಿತ್ತೂರಿನಲ್ಲಿ ಘಟಕ ಸ್ಥಾಪಿಸುವ ಬಗ್ಗೆ ಕಂಪನಿಯೊಂದಿಗೆ ಮಾತನಾಡಿ ಒಪ್ಪಂದಕ್ಕೆ ಸಹಿ ಹಾಕಿ ಬಂದಿದ್ದಾರೆ. ಆಂಧ್ರಪ್ರದೇಶಕ್ಕೆ ಕೇಂದ್ರ ನೀಡುವ ಅನುದಾನ, ರಾಜ್ಯ ನೀಡಿದ ತೆರಿಗೆ ವಿನಾಯಿತಿ ಮುಂತಾದವುಗಳನ್ನು ಲೆಕ್ಕಾಚಾರ ಹಾಕಿರುವ ಕಂಪನಿ ಘಟಕವನ್ನು ಅಲ್ಲಿಗೆ ಸ್ಥಳಾಂತರ ಮಾಡಲು ನಿರ್ಧರಿಸಿದೆ. [ಧಾರವಾಡದಲ್ಲಿ ಹೀರೋಹೊಂಡಾ ಘಟಕ]
ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಸದಾ ಬದ್ಧ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘಟಕ ನಿರ್ಮಾಣ ಕುರಿತು ಹೆಚ್ಚಿನ ಆಸಕ್ತಿ ವಹಿಸದ ಕಾರಣ ಮೋಟೊಕಾರ್ಪ್ ನೆರೆಯ ರಾಜ್ಯದ ಪಾಲಾಗಿದೆ ಎಂಬ ಆರೋಪವೂ ಇದೆ. ಇದನ್ನು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ವಿಧಾನಸಭೆಯಲ್ಲಿಯೂ ಹೇಳಿದ್ದರು. ಕರ್ನಾಟಕ ಸರ್ಕಾರ 300 ಎಕರೆ ಜಾಗವನ್ನು ಘಟಕಕ್ಕಾಗಿ ಮೀಸಲಾಗಿಟ್ಟಿತ್ತು. ನೋಂದಣಿ ಶುಲ್ಕ ಸೇರಿದಂತೆ ಹಲವು ರಿಯಾಯಿತಿ ಘೋಷಿಸಿತ್ತು.
ಆದರೆ, ಆಂಧ್ರಪ್ರದೇಶ ಹೆಚ್ಚುವರಿ ಸೌಲಭ್ಯಗಳನ್ನು ಘಟಕಕ್ಕೆ ನೀಡುವುದಾಗಿ ಹೇಳಿ ಅಲ್ಲಿ ಘಟಕ ಸ್ಥಾಪಿಸುವಂತೆ ಕಂಪನಿ ಮನವೊಲಿಸುವಲ್ಲಿ ಯಶಸ್ವಿಯಾಗಿದೆ. ಚಿತ್ತೂರು ಜಿಲ್ಲೆಯ ಶ್ರೀ ಸಿಟಿಯ ವಿಶೇಷ ಆರ್ಥಿಕ ವಲಯ ಪ್ರದೇಶದಲ್ಲಿ ಅನುಕೂಲಕರ ಜಾಗ ಆಯ್ಕೆ ಮಾಡಿಕೊಳ್ಳಲು ಕಂಪನಿ ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಘಟಕ ಉಳಿಸಿಕೊಳ್ಳು ಹೊಸ ಸೌಲಭ್ಯವನ್ನು ಘೋಷಿಸುತ್ತಾರೆಯೇ ಕಾದು ನೋಡಬೇಕು.
ಇದು ಕಾರಣವಿರಬಹುದೇ? : ಚಿತ್ತೂರು ಜಿಲ್ಲೆಯಲ್ಲಿ ಘಟಕ ಸ್ಥಾಪಿಸಿದರೆ ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸುಲಭವಾಗಿ ತಲುಪಬಹುದು. ಬೆಂಗಳೂರಿನಿಂದ ಚಿತ್ತೂರು ತಲುಪಲು ರಾಷ್ಟ್ರೀಯ ಹೆದ್ದಾರಿ 4 ಹಾಗೂ ಬೆಂಗಳೂರು-ತಿರುಪತಿ ಹೆದ್ದಾರಿಯನ್ನು ಬಳಸಿದರೆ ಕೇವಲ ಮೂರು ತಾಸುಗಳ ಹಾದಿ. ಆದ್ದರಿಂದ ಅಲ್ಲಿ ಘಟಕ ಸ್ಥಾಪನೆ ಮಾಡಲು ಕಂಪನಿ ಮುಂದಾಗಿಯೇ ಎಂಬ ಪ್ರಶ್ನೆಗಳು ಇವೆ.
-
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್












Click it and Unblock the Notifications