Dharwad: ಜಿಲ್ಲಾಸ್ಪತ್ರೆ ಸುಧಾರಣೆ, ನೇಮಕಾತಿ, ಅನುದಾನ ಬಗ್ಗೆ ಸಿಹಿಸುದ್ದಿ ಕೊಟ್ಟ ಆರೋಗ್ಯ ಸಚಿವ

ಧಾರವಾಡ, ಜನವರಿ 07: ಧಾರವಾಡ ಜಿಲ್ಲಾ ಆಸ್ಪತ್ರೆ ಗುಣಮಟ್ಟ ಕಾಯ್ದುಕೊಂಡಿದ್ದು, ಉತ್ತಮವಾಗಿ ಕೆಲಸ ನಿರ್ವಹಿಸಗುತ್ತಿದೆ. ಧಾರವಾಡ ಜಿಲ್ಲಾ ಆಸ್ಪತ್ರೆಯ ಮೂಲಭೂತ ಸೌಕರ್ಯ ಹಾಗೂ ಆರೋಗ್ಯ ಪರಿಕರಗಳ ಸೌಲಭ್ಯ ಒದಗಿಸಲು ಅನುದಾನ ಬಿಡುಗಡೆ ಅನುಮೋದನೆ ನೀಡಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಾಹಿತಿ ನೀಡಿದರು.

ಭಾನುವಾರ ವಿದ್ಯಾಕಾಶಿಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಪರಿಶೀಲನೆ ಮಾಡಿದ ಬಳಿಕ ಮಾತನಾಡಿದ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಆರೋಗ್ಯ ಸೇವೆಗಳ ಉನ್ನತಿಕರಣಗೊಳಿಸಲು ಮತ್ತು ಎಲ್ಲ ಆಸ್ಪತ್ರೆಗಳನ್ನು ವಿವಿಧ ಹಂತಗಳಲ್ಲಿ ಮೇಲ್ದರ್ಜೆಗೆ ಎರಿಸಲು ಆಧ್ಯತೆ ನೀಡಲಾಗುತ್ತೆದೆ.

Karnataka Govt has Approved Grant Rs 9.9 Crore Release to Dharwad District Hospital Improvement

ಧಾರವಾಡ ಜಿಲ್ಲಾಸ್ಪತ್ರೆಯ ಮೂಲ ಸೌಲಭ್ಯಕ್ಕಾಗಿ ಸರ್ಕಾರ ಸುಮಾರು 9.9 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲು ಅನುಮೊದನೆ ನೀಡಿದೆ ಎಂದು ತಿಳಿಸಿದರು.

ಖಾಲಿ ವೈದ್ಯ ಹುದ್ದೆಗಳ ನೇಮಕಾತಿ: ಸಚಿವ

ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ವೈದ್ಯರ ಮತ್ತು ವೈದ್ಯಕೀಯ ಸಿಬ್ಬಂದಿಗಳ ಕೊರತೆ ಇದೆ, ಈಗ ಒಂದು ತಿಂಗಳೊಳಗಾಗಿ ಸುಮಾರು 800 ಜನ ಆರೋಗ್ಯ ಸಿಬ್ಬಂದಿಗಳಿಗೆ ನೇಮಕಾತಿ ಆದೇಶ ನೀಡಲಿದ್ದೇವೆ. 1500 ವೈದ್ಯ ಮತ್ತು 1500 ತಜ್ಞ ವೈದ್ಯರ ಹುದ್ದೆಗಳು ಖಾಲಿ ಇವೆ. MBBS, MD ಆಗಿರುವ ಪದವಿಧರರ ನೇಮಕಾತಿಗಾಗಿ ಕೌನ್ಸಿಲಿಂಗ್ ಆರಂಭಿಸಲಾಗಿದೆ. ಸದ್ಯದಲ್ಲಿ ಅವರನ್ನು ಗ್ರಾಮೀಣ ಭಾಗದ ಎಲ್ಲ ಆಸ್ಪತ್ರೆಗಳಿಗೆ ನೇಮಕ ಮಾಡಲಾಗುವುದು.

ವೈದ್ಯಕೀಯ ಕಾಲೇಜು ಮಂಜೂರು ಪ್ರಸ್ತಾಪ

ಜಿಲ್ಲೆಗೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾ ಆಸ್ಪತ್ರೆ ಜತೆತೆಗೆ ವೈದ್ಯಕೀಯ ಕಾಲೇಜು ಮಂಜೂರು ಮಾಡಿದರೆ ಅಗತ್ಯ ಸೌಲಭ್ಯವಿರುವ ವಿಸ್ತಾರವಾದ ಜಾಗ ಬೇಕಾಗುತ್ತದೆ ಅದಕ್ಕಾಗಿ ಹೆಚ್ಚಿನ ಭೂಮಿ ಇರುವ ಪ್ರದೇಶವನ್ನು ಗುರುತಿಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಈ ಆಸ್ಪತ್ರೆಯ ಸುಧಾರಣೆಗೆ ಅಗತ್ಯವಿರುವ ಅನುದಾನವನ್ನು ಪೂರೈಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಜಿಲ್ಲಾಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ಉಪಕರಣಗಳ ಸುಸ್ಥಿತಿ, ಚಿಕಿತ್ಸೆ ಬಗ್ಗೆ ರೋಗಿಗಳಿಂದ, ಅವರ ಕುಟುಂಬಸ್ಥರಿಂದ ಅಭಿಪ್ರಾಯ ಪಡೆದರು. ಆಕ್ಸಿಜನ್ ಪ್ಲಾಂಟ್ ಕುರಿತು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

Karnataka Govt has Approved Grant Rs 9.9 Crore Release to Dharwad District Hospital Improvement

ಸರ್ಕಾರದ ಯೋಜನೆ ಕಟ್ಟುನಿಟ್ಟಿನ ಜಾರಿಗೆ ಸೂಚನೆ

ಒಂದು ಸಲ ಅಥವಾ ಅಗತ್ಯವಿದ್ದಾಗ ಪ್ಲಾಂಟ್ ಆಕ್ಸಿಜನ್ ಬಳಸಬೇಕೆಂದು ತಿಳಿಸಿದರು. ನಂತರ ಅವರು ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಔಷಧಿ ವಿತರಣಾ ವಿಭಾಗ, ಹೆರಿಗೆ ಕೊಠಡಿ, ಪ್ರಸವ ಪೂರ್ವ ಗರ್ಭೀನಿಯರ ಕೊಠಡಿ ಶಸ್ತ್ರ ಚಿಕಿತ್ಸಾ ಸಂಕೀರ್ಣ ಭೇಟಿ ನೀಡಿ, ಫಲಾನುಭವಿಗಳ ಮತ್ತು ಕರ್ತವ್ಯ ನಿರತ ವೈದ್ಯಕೀಯ ಸಿಬ್ಬಂದಿಯಿಂದ ಮಾಹಿತಿ ಪಡೆದರು.

ನಂತರ ವಿವಿಧ ಯೋಜನೆಗಳನ್ನು ಪರಿಶೀಲಿಸಿದ ಸಚಿವರು, ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ರೋಗಗಳ ಕುರಿತು ಹಾಗೂ ಕ್ಷಯರೋಗದ ಕುರಿತು ಸರಿಯಾದ ಕ್ರಮದಲ್ಲಿ ಸ್ಕ್ಯಾನಿಂಗ್ ಮಾಡಬೇಕು ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ವಹಿಸಬೇಕೆಂದರು.

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕ ಪ್ರಸಾದ ಅಬ್ಬಯ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ರಣದೀಪ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಶಿ ಪಾಟೀಲ್ ಇನ್ನಿತರರು ಪಾಲ್ಗೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+