ಮನೆಗಳಿಗೆ ಬೀಗ ಹಾಕಿ ಊರು ತೊರೆದ ಕಲಘಟಗಿ ಜನ: ಏನಿದು 'ಹೊರವಾರ ಪದ್ಧತಿ'..?

ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ಮೂರು ವರ್ಷಕ್ಕೊಮ್ಮೆ ಆಚರಿಸುವ ಗ್ರಾಮದೇವಿಯ ಜಾತ್ರೆಗಾಗಿ ಇಡೀ ಊರಿಗೆ ಊರೇ ಖಾಲಿಯಾಗುತ್ತೆ. ಮನೆ ಬಾಗಿಲಿಗೆ ಬೀಗ ಹಾಕುವ ಜನರು ಊರು ತೊರೆಯುತ್ತಾರೆ.

ಧಾರವಾಡ, ಫೆಬ್ರವರಿ 7: ಉತ್ತರ ಕರ್ನಾಟಕ ಭಾಗದಲ್ಲಿ ಭಿನ್ನ ರೀತಿಯಲ್ಲಿ ಹಾಗೂ ವಿಶೇಷವಾದ ಆಚರಣೆಗಳನ್ನು ಒಳಗೊಂಡಿರುವ ಜಾತ್ರೆಗಳು ನಡೆಯುತ್ತವೆ. ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ಮೂರು ವರ್ಷಕ್ಕೊಮ್ಮೆ ಆಚರಿಸುವ ಗ್ರಾಮದೇವಿಯ ಜಾತ್ರೆಗೂ ತನ್ನದೇ ಆದ ಮಹತ್ವವಿದೆ. ಈ ಜಾತ್ರೆಗೋಸ್ಕರ ಇಡೀ ಊರಿಗೆ ಊರೇ ಖಾಲಿಯಾಗುತ್ತೆ. ಮನೆ ಬಾಗಿಲಿಗೆ ಬೀಗ ಹಾಕುವ ಜನರು ಊರು ತೊರೆಯುತ್ತಾರೆ.

ಜನರು ಮನೆಗೆ ಬೀಗ ಹಾಕಿ ಹೋಗಿರುವುದು ಜಾತ್ರೆಯ ಆಚರಣೆಯ ಭಾಗವಾಗಿ. ಕಲಘಟಗಿಯ ಗ್ರಾಮದೇವಿ ಜಾತ್ರೆ ಈ ಭಾಗದ ಅತಿದೊಡ್ಡ ಜಾತ್ರೆಗಳಲ್ಲಿ ಒಂದು. ರಾಜ್ಯ ಮತ್ತು ಹೊರರಾಜ್ಯಗಳಿಂದ ಲಕ್ಷಾಂತರ ಜನರು ಇಲ್ಲಿಗೆ ಭೇಟಿ ನೀಡಿ, ಜಾತ್ರೆಯ ವೈಭವಕ್ಕೆ ಸಾಕ್ಷಿಯಾಗುತ್ತಾರೆ. ಮೂರು ವರ್ಷಗಳಿಗೊಮ್ಮೆ ಈ ಜಾತ್ರೆಯು ಮಾರ್ಚ್ 1ರಿಂದ 9ರವರೆಗೆ ನಡೆಯಲಿದೆ.

ಜಾತ್ರೆಗಾಗಿ ಕಲಘಟಗಿ ಸೇರಿದಂತೆ ಸುತ್ತಲಿನ ಐದು ಹಳ್ಳಿಗಳ ಜನರು ವಿಶೇಷ ಪದ್ಧತಿಯನ್ನು ಆಚರಿಸುತ್ತಾರೆ. ಸಾವಿರಾರು ಜನರು ಕುಟುಂಬ ಸಮೇತ ತಮ್ಮ ಮನೆಗಳಿಗೆ ಬೀಗ ಹಾಕಿ ಪಟ್ಟಣದಿಂದ ಹೊರ ಹೋಗುತ್ತಾರೆ. ಕಲಘಟಗಿ, ದಾಸ್ತಿಕೊಪ್ಪ ಕಲಕುಂಡಿ, ಬೆಂಡಿಗೇರಿ, ಮಾಚಾಪುರ ಗ್ರಾಮಗಳಲ್ಲಿ'ಹೊರವಾರ ಪದ್ಧತಿ'ಯನ್ನು ಆಚರಿಸುತ್ತಾರೆ.

Kalghatgi City People Left Their Village Devi Jatre

ಈ ಐದು ಹಳ್ಳಿಗಳಲ್ಲಿ ಬರುವ ಯುಗಾದಿಯವರೆಗೆ ಮದುವೆ, ನಿಶ್ಚಿತಾರ್ಥ, ನಾಮಕರಣ ಸೇರಿದಂತೆ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಈ ವರ್ಷದ ಹೋಳಿ ಹುಣ್ಣಿಮೆಯಂದು ಬಣ್ಣದೋಕುಳಿಯನ್ನು ಸಹ ಆಚರಿಸುವುದಿಲ್ಲ. ಜನರು ಐದು ದಿನಗಳ ಕಾಲ ಮನೆಗಳನ್ನು ಖಾಲಿ ಮಾಡುತ್ತಾರೆ. ಜಾತಿ, ಮತ, ಧರ್ಮವನ್ನು ಲೆಕ್ಕಿಸದೆ ಎಲ್ಲರೂ ಈ ಸಂಪ್ರದಾಯ ಪಾಲಿಸುತ್ತಾರೆ.

ಕಲಘಟಗಿ ಪಟ್ಟಣದ ಗ್ರಾಮದೇವಿ ದೇವಾಲಯದಲ್ಲಿ ದ್ಯಾಮವ್ವ, ದುರ್ಗವ್ವ, ಮೂರು ಮುಖದವ್ವ ಎನ್ನುವ ಶಕ್ತಿ ದೇವತೆಗಳಿದ್ದಾರೆ. ಈ ಮೂವರು ಸಹೋದರಿಯರು ಅನಾದಿಕಾಲದಿಂದಲೂ ಊರಿನ ಜನರನ್ನು ರಕ್ಷಿಸುತ್ತಿದ್ದಾರೆ ಎಂಬ ನಂಬಿಕೆಯಿದೆ. ದ್ಯಾಮವ್ವ ದೇವಿಯನ್ನು ಕೆಂಪು ಬಣ್ಣದಿಂದ, ದುರ್ಗವ್ವ ದೇವಿಯನ್ನು ಹಸಿರು ಬಣ್ಣದಲ್ಲಿ ಮೂರು ಮುಖದವ್ವಳಿಗೆ ಕೆಂಪು, ಹಸಿರು ಮತ್ತು ಹಳದಿ ಬಣ್ಣದಲ್ಲಿ ಚಿತ್ರಿಸುವ ವಾಡಿಕೆಯಿದೆ.

ಹೊರಾವರ ಆಚರಣೆಯ ನಂತರ ದೇವತೆಗಳಿಗೆ ಹೊಸ ಬಣ್ಣದ ಲೇಪನವನ್ನು ಮಾಡಲಾಗುತ್ತೆ. ಮಾರ್ಚ್ 1ರಂದು ದ್ಯಾಮವ್ವ ಮತ್ತು ದುರ್ಗವ್ವ ದೇವಿಯ ಮೂರ್ತಿಗಳನ್ನು ಅಕ್ಕಿಓಣಿಯ ಚೌತಮನೆ ಕಟ್ಟೆಗೆ ತಂದು ಪ್ರತಿಷ್ಠಾಪಿಸಲಾಗುತ್ತೆ. ಒಂಭತ್ತು ದಿನಗಳ ಕಾಲ ಸಂಗೀತ, ಭಜನೆ, ಕೀರ್ತನೆಗಳು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತೆ. ರಾಣಿಗ ಸಮಾಜದವರು ದೇವತೆಗಳ ಮುಂದೆ ಅಕ್ಕಿಯ ರಾಶಿಯನ್ನು ಇರಿಸಿ ಹಗಲಿರುಳು ದೀಪ ಬೆಳಗಿಸತ್ತಾರೆ. ಒಂಭತ್ತನೇ ದಿನ, ದೇವತೆಗಳ ಮುಂದೆ ಹುಲ್ಲಿನ ಗುಡಿಸಲು ಮಾಡಿ ಅದರಲ್ಲಿ ಹಿಟ್ಟಿನಿಂದ ಮಾಡಿದ ಕೋಣವನ್ನು ಇಟ್ಟು ಸುಡಲಾಗುತ್ತೆ. ದುಷ್ಟತನವನ್ನು ನಿಗ್ರಹಿಸಿ ಸಜ್ಜನರನ್ನು ರಕ್ಷಿಸಲು ಭಕ್ತರು ದೇವತೆಗಳನ್ನು ಪ್ರಾರ್ಥಿಸುತ್ತಾರೆ. ಕೊನೆಯ ದಿನ ದೇವತೆಗಳ ವಿಗ್ರಹಗಳನ್ನು ತಂದು ಬೆಂಡಿಗೇರಿ ಸರಹದ್ದಿನ ಪಾದಗಟ್ಟಿಯ ಮೇಲೆ ಇರಿಸುತ್ತಾರೆ‌. ಮಧ್ಯರಾತ್ರಿಯವರೆಗೆ ದೇವತೆಗಳನ್ನು ಪೂಜಿಸಿ ನಂತರ ವಿಗ್ರಹಗಳನ್ನು ವಿಸರ್ಜಿಸುತ್ತಾರೆ.

Kalghatgi City People Left Their Village Devi Jatre

ಜಾತ್ರೆಯ ನಂತರ ದ್ಯಾಮವ್ವ ಮತ್ತು ದುರ್ಗವ್ವ ದೇವತೆಗಳು ಭೂಮಿಯನ್ನು ತೊರೆಯುತ್ತಾರೆ. ನಂತರ ಮತ್ತೆ ಯುಗಾದಿಯಂದು ಜನಿಸುತ್ತಾರೆ ಎನ್ನುವ ಪ್ರತೀತಿಯಿದೆ. ಹೀಗಾಗಿ ಯುಗಾದಿಯವರೆಗಿನ ಅವಧಿಯನ್ನು ಕಲಘಟಗಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಸೂತಕ ಎಂದು ಆಚರಿಸಲಾಗುತ್ತದೆ. ಈ ಅವಧಿಯಲ್ಲಿ ಜನರು ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಯುಗಾದಿ ದಿನ ದೇವತೆಗಳನ್ನು ಪುನಃ ಪ್ರತಿಷ್ಠಾಪಿಸಿ ಉಡಿ ತುಂಬಲಾಗುತ್ತೆ. ನಂತರ ಎಲ್ಲಾ ಶುಭವಕಾರ್ಯಗಳಿಗೆ ಚಾಲನೆ ಸಿಗುತ್ತೆ. ಅನಾದಿ ಕಾಲದಿಂದ ನಡೆದುಕೊಂಡು ಬಂದಿರುವ ಕಲಘಟಗಿ ಗ್ರಾಮದೇವಿ ಜಾತ್ರೆ ತನ್ನ ವಿಶೇಷ ಆಚರಣೆಗಳಿಂದ ರಾಜ್ಯದ ಜನರ ಗಮನ ಸೆಳೆದಿದೆ.

ಸರ್ವ ಧರ್ಮೀಯರು ಮನೆ ತೊರೆದು ಗ್ರಾಮ ದೇವತೆ ಜಾತ್ರೆಯ ನಿಯಮ ಪಾಲಿಸುತ್ತಾರೆ. ಬೆಳಿಗ್ಗೆ 10ರಿಂದ ಸಂಜೆ 4:30 ರವರೆಗೆ ಮನೆಯಿಂದ ದೂರವಿರುತ್ತಾರೆ. ಜಾತ್ರೆಗೆ ಮೊದಲು ಐದು ವಾರಗಳ ಆಚರಣೆ ನಡೆಯುತ್ತೆ. ಮೂರು ಮಂಗಳವಾರ ಮತ್ತು ಶುಕ್ರವಾರಗಳನ್ನು ಹೊರವಾರವೆಂದು ಆಚರಿಸುವುದು ಸಂಪ್ರದಾಯವಾಗಿದೆ.

ಜನರು ಉದ್ಯಾನಗಳಲ್ಲಿ, ಗದ್ದೆಗಳಲ್ಲಿ ಮತ್ತು ಪಟ್ಟಣದ ಹೊರಗಿನ ಮರಗಳ ಕೆಳಗೆ ದಿನ ಕಳೆಯುತ್ತಾರೆ. ಆಹಾರದ ಬುತ್ತಿಗಳನ್ನು ಕಟ್ಟಿಕೊಂಡು ಹೋಗಿ ಒಟ್ಟಾಗಿ ಊಟ ಮಾಡುತ್ತಾರೆ. ಈ ಐದು ದಿನ ಅಂಗಡಿ- ಮುಂಗಟ್ಟು ಮುಚ್ಚಿರುತ್ತೆ. ವ್ಯಾಪಾರ ವಹಿವಾಟುಗಳು ಸ್ಥಗಿತವಾಗುತ್ತವೆ. ಈ ದಿನಗಳಲ್ಲಿ ಪಟ್ಟಣ ಸಂಪೂರ್ಣ ಖಾಲಿ ಖಾಲಿಯಾಗಿರುತ್ತೆ‌. ಗ್ರಾಮದೇವಿ ಈ ಸಂದರ್ಭದಲ್ಲಿ ಊರಲ್ಲಿ ಸಂಚರಿಸುತ್ತಾಳೆ ಎಂದು ನಂಬಲಾಗಿದೆ. ಅವಳು ದುಷ್ಟ ಶಕ್ತಿಗಳನ್ನು ಕೊಲ್ಲುತ್ತಾಳೆ ಎಂದು ಜನರು ನಂಬುತ್ತಾರೆ. ಹೀಗಾಗಿ ಮನೆಗಳನ್ನು ತೊರೆದು ಊರ ಹೊರಗೆ ಹೋಗುತ್ತಾರೆ. ಇದನ್ನೇ ಹೊರವಾರ ಎಂದು ಕರೆಯುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+