ಹುಬ್ಬಳ್ಳಿ- ಧಾರವಾಡ ನೂತನ ಮೇಯರ್ ಆಗಿ ಈರೇಶ ಅಂಚಟಗೇರಿ ಅಧಿಕಾರ ಸ್ವೀಕಾರ

ಹುಬ್ಬಳ್ಳಿ, ಮೇ 28: ನನ್ನ ಮೇಲೆ ಪಕ್ಷ ಹಾಗೂ ನಾಯಕರು ಭರವಸೆ ಇಟ್ಟು ಜವಾಬ್ದಾರಿ ನೀಡಿದ್ದಾರೆ . ಅವರ ಭರವಸೆಗೆ ತಕ್ಕಂತೆ ಕಾರ್ಯವನ್ನು ನಿರ್ವಹಿಸುವ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ನೂತನ ಮೇಯರ್ ಈರೇಶ್ ಅಂಚಟಗೇರಿ ಹೇಳಿದರು.

ಮೇಯರ್ ಆಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು , ನನ್ನ ಮೇಲೆ ಪಕ್ಷ ಹಾಗೂ ನಾಯಕರು , ಭರವಸೆ ಇಟ್ಟು ಜವಾಬ್ದಾರಿ ನೀಡಿದ್ದಾರೆ . ಕೇಂದ್ರ ಸಚಿವ ಪ್ರಲ್ಲಾದ್ ಜೋಶಿ , ಜಗದೀಶ್ ಶೆಟ್ಟರ್ , ಅರವಿಂದ್ ಬೆಲ್ಲದ ಅವರಿಗೆ ನಾನು ಅಭಿನಂದನೆಗಳು ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.

ಪ್ರಲ್ಲಾದ್ ಜೋಶಿ

ಕಳೆದ ಮೂರುವರೆ ವರ್ಷದಿಂದ ಆಡಳಿತಾಧಿಕಾರಿಗಳು ತಮ್ಮ ಅಧಿಕಾರ ಚಲಾಯಿಸುತ್ತಿದ್ದರು. ಆದರೇ ಈಗ ನಾವು ಪಾಲಿಕೆ ಆಡಳಿತವನ್ನು ಜನರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗುತ್ತೇವೆ . ಸಾರ್ವಜನಿಕ ಕುಂದು - ಕೊರತೆಗಳನ್ನು ಶೀಘ್ರದಲ್ಲೇ ಇತ್ಯರ್ಥ ಮಾಡುತ್ತೇನೆ. ಜನರ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಜನಪರ ಕಾರ್ಯವನ್ನು ಮಾಡುತ್ತೇನೆ . ಪಕ್ಷನಿಷ್ಠವಾಗಿ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಅವರು ಭರವಸೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+