ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಲ್ಯಾಸ್ ವೈಯಕ್ತಿಕವಾಗಿ ಪರಿಚಯ ಇಲ್ಲ, ಕೊಲೆ ತನಿಖೆ ಆಗಲಿ:ಖಾದರ್

By Manjunatha
|
Google Oneindia Kannada News

ಧಾರವಾಡ, ಜನವರಿ 13: ದೀಪಕ್ ಕೊಲೆ ಪ್ರಕರಣದಲ್ಲಿ ಆರೋಪಿಯೆಂದು ಹೇಳಲಾಗಿದ್ದ ಟಾರ್ಗೆಟ್ ಗ್ರೂಪ್ ಸದಸ್ಯ ಇಲ್ಯಾಸ್‌ನನ್ನು ಶನಿವಾರ ಹತ್ಯೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಆಹಾರ ಮತ್ತು ನಾಗರೀಕ ಸಚಿವ ಯುಟಿ ಖಾದರ್ ಅವರು 'ಟಾರ್ಗೆಟ್ ಗ್ರೂಪ್ ಬಗ್ಗೆ ಸೂಕ್ತ ತನಿಖೆ ಆಗಬೇಕು' ಎಂದಿದ್ದಾರೆ.

ಕೊಲೆ ಆದ ಇಲ್ಯಾಸ್, ಆಹಾರ ಸಚಿವ ಯುಟಿ ಖಾದರ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ, ಊಟ ಮಾಡುತ್ತಿದ್ದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ವಿವಾದ ಎಬ್ಬಸಿದ್ದವು. ಈ ಚಿತ್ರಗಳನ್ನು ಆಧಾರವಾಗಿಟ್ಟುಕೊಂಡು ದೀಪಕ್ ಹತ್ಯೆ ಆರೋಪಿಗಳಿಗೆ ಕಾಂಗ್ರೆಸ್ ಬೆಂಬಲವಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡಿದ್ದವು.

ಮಂಗಳೂರಿನಲ್ಲಿ ಗ್ಯಾಂಗ್ ವಾರ್, ಕುಖ್ಯಾತ ರೌಡಿ ಇಲ್ಯಾಸ್ ಹತ್ಯೆಮಂಗಳೂರಿನಲ್ಲಿ ಗ್ಯಾಂಗ್ ವಾರ್, ಕುಖ್ಯಾತ ರೌಡಿ ಇಲ್ಯಾಸ್ ಹತ್ಯೆ

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಖಾದರ್ 'ಎಲ್ಲರೂ ನಮ್ಮ ಸಹಚರರೇ ಆದರೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರನ್ನು ಕ್ಷಮಿಸಲು ಆಗದು, ಅಪರಾಧಿಗೆ ಶಿಕ್ಷೆ ಆಗಬೇಕು, ಕೊಲೆ ಅಲ್ಲ, ಇಲ್ಯಾಸ್ ಹತ್ಯೆ ಮಾಡಿದವರನ್ನು ಶೀಘ್ರವಾಗಿ ಬಂಧಿಸುವ ಕಾರ್ಯ ಆಗಬೇಕು ಎಂದರು.

ಇಲ್ಯಾಸ್ ವೈಯಕ್ತಿಕವಾಗಿ ಪರಿಚಯ ಇಲ್ಲ

ಇಲ್ಯಾಸ್ ವೈಯಕ್ತಿಕವಾಗಿ ಪರಿಚಯ ಇಲ್ಲ

ವೈಯಕ್ತಿಕವಾಗಿ ಇಲ್ಯಾಸ್ ನನಗೆ ಪರಿಚಯ ಇಲ್ಲ ಎಂಬುದನ್ನು ಈ ಮುಂಚೆಯೇ ಸ್ಪಷ್ಟಪಡಿಸಿದ್ದೇನೆ, ನಮಗೆ ಆಗದವರು ಆತನನ್ನು ಆನ್‌ಲೈನ್ ಮೂಲಕ ಕಾಂಗ್ರೆಸ್‌ಗೆ ಸೇರಿಸಿದ್ದರು, ಆದ ನಂತರ ಆತ ಚುನಾವಣೆಯಲ್ಲಿ ಪುತ್ತೂರು ಯೂತ್ ಕಾಂಗ್ರೆಸ್‌ ಚುನಾವಣೆಗೆ ಸ್ಪರ್ಧಿಸಿ ಚುನಾವಣೆಯಲ್ಲಿ ಸೋತು ಉಪಾಧ್ಯಕ್ಷನಾದ ಎಂದು ಅವರು ಹೇಳಿದರು.

ದೀಪಕ್ ಹತ್ಯೆ: ಟಾರ್ಗೆಟ್ ಗ್ರೂಪ್ ಸದಸ್ಯನ ಫೋಟೋ, ಖಾದರ್ ಹೇಳಿದ್ದೇನು?ದೀಪಕ್ ಹತ್ಯೆ: ಟಾರ್ಗೆಟ್ ಗ್ರೂಪ್ ಸದಸ್ಯನ ಫೋಟೋ, ಖಾದರ್ ಹೇಳಿದ್ದೇನು?

ಪಿಎಫ್‌ಐ ಬೇರೆ ರಾಜ್ಯಗಳಿಂದ ಕಾರ್ಯಾಚರಣೆ ಮಾಡುತ್ತದೆ

ಪಿಎಫ್‌ಐ ಬೇರೆ ರಾಜ್ಯಗಳಿಂದ ಕಾರ್ಯಾಚರಣೆ ಮಾಡುತ್ತದೆ

'ರಾಜ್ಯದಲ್ಲಿ ಪಿಎಫ್ಐ ಸಂಘಟನೆ ಬ್ಯಾನ್ ಮಾಡಿದರೆ ಉಪಯೊಗವಿಲ್ಲ. ಅದೊಂದು ರಾಷ್ಟ್ರೀಯ ಸಂಘಟನೆ. ಗೋವಾ. ಕೆರಳ. ಮಹಾರಾಷ್ಟ್ರ ದಲ್ಲಿದ್ದುಕೊಂಡು ಪಿಎಫ್ಐ ಕೆಲಸ ಮಾಡುತ್ತದೆ. ಅದನ್ನ ಕೇಂದ್ರ ಸರ್ಕಾರ ನಿಷೇಧ ಮಾಡಬೇಕು ಎಂದರು. ಬಶೀರ್ ಹತ್ಯೆಯ ಬಗ್ಗೆಯ ಮಾತನಾಡಿದ ಅವರು ಮಂಗಳೂರಿನಲ್ಲಿ ಬಷೀರ್ ಹತ್ಯೆ ಮಾಡಿದವರು ಕಾಸರಗೊಡಿನವರು. ಮಂಗಳೂರಿನವರು ಅಲ್ಲ ಎಂದು ಮಾಹಿತಿ ನೀಡಿದರು

ಮುಖ್ಯಮಂತ್ರಿ ಹೇಳಿಕೆಗೆ ಬೆಂಬಲ

ಮುಖ್ಯಮಂತ್ರಿ ಹೇಳಿಕೆಗೆ ಬೆಂಬಲ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಮಂದಿಯನ್ನು ಉಗ್ರಗಾಮಿಗಳು ಎಂದು ಕರೆದಿದ್ದನ್ನು ಯು.ಟಿ.ಖಾದರ್ ಅವರು ಬೆಂಬಲಿಸಿದ್ದಾರೆ. ಬಿಜೆಪಿ ಕೋಮುಗಳ ಮಧ್ಯೆ ಬೆಂಕಿ ಇಡುವ ಮೂಲಕ ಗಲಭೆಗಳನ್ನು ಮಾಡಿಸಿ ಜನರಲ್ಲಿ ಭಯ ಉಂಟುಮಾಡುವ ಪ್ರಯತ್ನ ಮಾಡುತ್ತಿದೆ, ಹಾಗಾಗಿ ಮುಖ್ಯಮಂತ್ರಿಗಳು ಬಿಜೆಪಿ ಸದಸ್ಯರು ಉಗ್ರಗಾಮಿಗಳು ಎಂದು ಹೇಳಿದ್ದಾರೆ ಎಂದು ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.

'ಅನ್ನಭಾಗ್ಯ' ಬೇರೆ ರಾಜ್ಯದಲ್ಲಿಲ್ಲ

'ಅನ್ನಭಾಗ್ಯ' ಬೇರೆ ರಾಜ್ಯದಲ್ಲಿಲ್ಲ

ಅನ್ನಭಾಗ್ಯ ಯೋಜನೆ ದೇಶದ ಯಾವುದೇ ರಾಜ್ಯದಲ್ಲಿ ಇಲ್ಲ. ಕೇಂದ್ರ ಸರ್ಕಾರ ಅನ್ನಭಾಗ್ಯ ಯೋಜನೆಗೆ ಸಬ್ಸಿಡಿ ಕೊಡುತ್ತಿದ್ದೆವೆ ಎನ್ನುವುದು ಭಿಕ್ಷೆ ಅಲ್ಲ. ನಮ್ಮ ರಾಜ್ಯದ ಟ್ಯಾಕ್ಸ ನಿಂದ ಕೊಡುತ್ತಾರೆ. ಬಿಜೆಪಿ ಮಂದಿ ಅನ್ನಭಾಗ್ಯ ಯೋಜನೆ ಕನ್ನಭಾಗ್ಯ ಯೋಜನೆ ಅಂತಾರೆ. ಬಿಜೆಪಿ ಸರ್ಕಾರ ಇರುವ ಗುಜರಾತ್. ಛತ್ತೀಸಗಡ. ಮಹಾರಾಷ್ಟ್ರ ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಯ ಚಿಂತನೆ ನಡೆದಿದೆ.

English summary
Minister UT Khader said Iliyaz was not personally known to him. But congress will not encourage criminal background people. He also said Ilyaz murders should be arrest soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X