ಪ್ರಧಾನಿ ಮೋದಿಗೆ ತಾಯಿ ಪ್ರೀತಿ ನೆನಪಿಸುವ ಕಾಣಿಕೆ ನೀಡಿದ ಹುಬ್ಬಳ್ಳಿಯ ಯುವತಿ
ಧಾರವಾಡ, ಮಾರ್ಚ್, 12: ಧಾರವಾಡ ಜಿಲ್ಲೆಗೆ ಯಾರೇ ಗಣ್ಯ ವ್ಯಕ್ತಿಗಳು ಬಂದಾಗಲೂ ಹುಬ್ಬಳ್ಳಿಯ ಯುವತಿಯೊಬ್ಬಳು ತನ್ನ ಕಲೆಯನ್ನು ಪ್ರಸ್ತುತ ಪಡಿಸುವ ಮೂಲಕ ಪೋಟೋ ವಿತರಣೆ ಮಾಡುತ್ತಿದ್ದಾಳೆ. ಇದೀಗ ಹುಬ್ಬಳ್ಳಿಯ ಶ್ರೇಯಾ ನರೇಂದ್ರ ಮೋದಿ ಹಾಗೂ ಅವರ ತಾಯಿ ಹೀರಾಬೇನ ಅವರು ಇರುವ ಭಾವಚಿತ್ರವನ್ನು ಮೋದಿಯವರಿಗೆ ನೀಡಲು ಬಂದ ಕ್ಷಣವಂತೂ ನೋಡುಗರನ್ನು ಗಮನ ಸೆಳೆದಿದೆ.
ಹುಬ್ಬಳ್ಳಿಯ ಶ್ರೇಯಾ ಎಂಬುವವರು ಧಾರವಾಡದ ಐಐಟಿಗೆ ಆಗಮಿದ ಮೋದಿಯವರಿಗೆ ಮಾತೃತ್ವದ ಫೋಟೋ ವಿತರಣೆ ಮಾಡಲು ಬಂದ ಕ್ಷಣ ನೋಡುಗರನ್ನು ಆಶ್ಚರ್ಯಕ್ಕೊಳಗಾಗುವಂತೆ ಮಾಡಿದೆ. ಈಗಾಗಲೇ ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ತೇಜಸ್ವಿ ಸೂರ್ಯ ಸೇರಿದಂತೆ ಬಹುತೇಕ ನಾಯಕರಿಗೆ ಗೌರವ ಸಮರ್ಪಣೆ ಮಾಡಿದ್ದು, ಈಗ ಮೋದಿಯವರ ಭಾವಚಿತ್ರ ವಿತರಣೆ ಮಾಡಲು ಬಂದಿದ್ದಳು.

ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಉದ್ಘಾಟನೆ
ವಿಶ್ವದರ್ಜೆಯ ಪ್ಲಾಟ್ ಫಾರಂ ಆಗಿ ಹೊರ ಹೊಮ್ಮಿರುವ ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿಯ ರೈಲ್ವೆ ಪ್ಲಾಟ್ ಫಾರಂ ಅನ್ನು ಅಧಿಕೃತವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದರು. ಶ್ರೀ ಸಿದ್ದಾರೂಢ ಸ್ವಾಮಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಅಭಿವೃದ್ಧಿಪಡಿಸಿದ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌ನ ಉದ್ಘಾಟನೆಯನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಧಾರವಾಡದ ಐಐಟಿ ಲೋಕಾರ್ಪಣೆಗೆ ಆಗಮಿಸಿದ ಬೆನ್ನಲ್ಲೇ ವರ್ಚುವಲ್ ಮೂಲಕ ಹುಬ್ಬಳ್ಳಿಯಲ್ಲಿರುವ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌ನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದ್ದಾರೆ. ಶ್ರೀ ಸಿದ್ದಾರೂಢ ಸ್ವಾಮಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಇದಕ್ಕೂ ಮುನ್ನ 1ನೇ ಪ್ಲಾಟ್ಫಾರಂ 550 ಮೀಟರ್ ಉದ್ದ ಹೊಂದಿತ್ತು.
ಇದೀಗ ಈ ಪ್ಲಾಟ್ಫಾರಂ ಅನ್ನು ವಿಸ್ತರಿಸಿ 10 ಮೀಟರ್ ಅಗಲದೊಂದಿಗೆ 1,505 ಮೀಟರ್ಗೆ ವಿಸ್ತರಣೆ ಮಾಡಲಾಗಿದೆ. ಹುಬ್ಬಳ್ಳಿಯಲ್ಲಿ ಈ ಹೊಸ ರೈಲು ಪ್ಲಾಟ್ಫಾರಂ ಲೋಕಾರ್ಪಣೆ ಮಾಡಿದ ನಂತರ 1,366 ಮೀಟರ್ ಉದ್ದದ ಗೋರಖ್‌ಪುರ ರೈಲು ನಿಲ್ದಾಣವನ್ನು ಹಿಂದಿಕ್ಕಿದೆ.












Click it and Unblock the Notifications