ಹುಬ್ಬಳ್ಳಿ ಪಾಲಿಕೆ ಸಭೆಯಲ್ಲಿ ಪ್ರತಿಧ್ವನಿಸಿದ ಆಸ್ತಿ ತೆರಿಗೆ

By: ಶಂಭು ಹುಬ್ಬಳ್ಳಿ
Subscribe to Oneindia Kannada

ಹುಬ್ಬಳ್ಳಿ, ಜೂನ್, 22- ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಶೇ.15 ರ ಬದಲಾಗಿ ಶೇ. 30 ರಿಂದ 40 ರಷ್ಟು ಹೆಚ್ಚುವರಿ ತೆರಿಗೆ ವಸೂಲಿ ಮಾಡುತ್ತಿದ್ದಾರೆಂದು ಪಾಲಿಕೆಯ ಕಾಂಗ್ರೆಸ್ ಸದಸ್ಯರು ಗಂಭೀರ ಆರೋಪ ಮಾಡಿದರು.

ಬುಧವಾರ ಮಹಾನಗರ ಪಾಲಿಕೆಯ ಸಭಾ ಭವನದಲ್ಲಿ ಜರುಗಿದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಈ ಕುರಿತು ಕಾಂಗ್ರೆಸ್ ಸದಸ್ಯ ಟಗರಗುಂಟಿ ಸಭೆ ಆರಂಭವಾಗುತ್ತಿದ್ದಂತೆಯೇ ಆಕ್ಷೇಪ ವ್ಯಕ್ತಪಡಿಸಿದರು. ಇವರ ಆಕ್ಷೇಪಣೆಯನ್ನು ಅನುಮೋದಿಸಿದ ಎಲ್ಲ ಸದಸ್ಯರು ಹೆಚ್ಚುವರಿ ತೆರಿಗೆ ವಸೂಲಿಯನ್ನು ವಿರೋಧಿಸಿದರು.[ಅಂತೂ-ಇಂತೂ ಉಣಕಲ್ ಕೆರೆ ಸ್ವಚ್ಛತೆ ಆರಂಭ]

hubballi

ಆಡಳಿತ ಪಕ್ಷ ಬಿಜೆಪಿಯ ಸದಸ್ಯರೇ ಆದ ಸವಡಿ ಮಾತನಾಡಿ, ಸಾರ್ವಜನಿಕರಿಗೆ ಹೊರೆಯಾಗುವ ತೆರಿಗೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಜನತೆಗೆ ಹೆಚ್ಚುವರಿ ತೆರಿಗೆ ಏರಿಸುವ ಬದಲು ನಗರದಲ್ಲಿ ಖಾಸಗಿ ಶಾಲೆ, ಕಾಲೇಜ್ ಗಳಿಗೆ, ಕಾಂಪ್ಲೆಕ್ಸ್ ಗಳು, ಸಂಘಟನೆಗಳಿಂದ ಹೆಚ್ಚುವರಿ ತೆರಿಗೆ ಹಾಕಿ ಎಂದು ಒತ್ತಾಯಿಸಿದರು.[ಹುಬ್ಬಳ್ಳಿ ಮೇಯರ್ ಮಂಜುಳಾರನ್ನೇ ಬಸ್ ಹತ್ತಿಸಿದ ಪಾಲಿಕೆ!]

ಮೇಯರ್ ಮಂಜುಳಾ ಅಕ್ಕೂರ, ಪಾಲಿಕೆ ಆಯುಕ್ತ ನೂರಮನ್ಸೂರ ಸದಸ್ಯರ ಆಕ್ಷೇಪಣೆಗಳಿಗೆ ಸಮಜಾಯಿಸಿ ನೀಡಿ ಸಮಾಧಾನಪಡಿಸಿದರು.

-
-
-
-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hubballi: Hubballi-Dharwad Corporation general meet held on 22 June, 2016. The congress party members opposed the tax system and they Insisted that Hubballi-Dharwad Corporation should decrease the property tax.
Please Wait while comments are loading...