ಬ್ಯಾಡಗಿ: ಮರಕ್ಕೆ ಟಂಟಂ ಡಿಕ್ಕಿ, 7 ಮಹಿಳೆಯರ ದುರ್ಮರಣ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಹುಬ್ಬಳ್ಳಿ, ಜೂನ್ 1: ಹಾವೇರಿ ಜಿಲ್ಲೆ ಬ್ಯಾಡಗಿ ಬಳಿ ನಿಯಂತ್ರಣ ತಪ್ಪಿದ ಟಂಟಂ ವಾಹನ ಮಂಗಳವಾರ ರಾತ್ರಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಏಳು ಮಹಿಳೆಯರು ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಗಂಗವ್ವ ದೊಡ್ಡ ನೀಲಪ್ಪಾರ್(52), ಗಿರಿಜವ್ವ ಗುಳೇದರ(42), ಫಾತಿಮವ್ವ ದಾಸರ(26), ಜೋಗವ್ವ ದಾಸರ(30), ರೇಣುಕಾ ದಾಸರ(30), ಕವಿತಾ ಬಾರ್ಕಿ(26) ಎಂದು ಗುರುತಿಸಲಾಗಿದ್ದು, ಮೃತ ಮಹಿಳೆಯರು ಬ್ಯಾಡಗಿ ತಾಲೂಕಿನ ಚಿನ್ನಮುಳಗುಂದ ಗ್ರಾಮದ ಕಾರ್ಮಿಕರು ಎನ್ನಲಾಗಿದೆ. [ಪಿಯು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು ಹಾವೇರಿಯಿಂದ]

accident

ಬ್ಯಾಡಗಿ-ಶಿಡೇನೂರ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಮೃತರು ಬ್ಯಾಡಗಿ ಪಟ್ಟಣಕ್ಕೆ ಮೆಣಸಿನಕಾಯಿ ತುಂಬು ಬಿಡಿಸಲು ಬಂದಿದ್ದರು. ಪ್ರತಿನಿತ್ಯವು ಕೂಲಿ ಕೆಲಸಕ್ಕೆ ಬ್ಯಾಡಗಿಗೆ ತೆರಳಿ . ಮತ್ತು ಅದೇ ವಾಹನದಲ್ಲಿ ಊರಿಗೆ ಮರಳುತ್ತಿದ್ದರು. ಮಂಗಳವಾರ ರಾತ್ರಿ ತಮ್ಮೂರಿಗೆ ವಾಪಸು ತೆರಳುವಾಗ ಅಪಘಾತ ಸಂಭವಿಸಿದೆ.[ಹಾವು ರಕ್ಷಿಸಲು ಹೋಗಿ ಅಪಘಾತ, ವೃದ್ಧ ದಂಪತಿ ಸಾವು]

ಅಪಘಾತ ಆಗಿದ್ದು ಹೀಗೆ:
ಟಂಟಂ ಚಲಾಯಿಸುತ್ತಿದ್ದ ಚಾಲಕನು ಹೊಸಬ. ಅಲ್ಲದೇ ಬ್ಯಾಡಗಿ-ಹಂಸಭಾವಿ ರಸ್ತೆ ಮಧ್ಯದಲ್ಲಿ ಬರುವ ಶಿಡೇನೂರ ಹತ್ತಿರ 3 ಕೀ.ಮಿ ನಷ್ಟು ಘಟ್ಟ ಇದೆ ನಂತರ ಇಳಿಜಾರು ರಸ್ತೆಯಿದ್ದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Haveri: Seven women lost their lives in an accident which occurred at Hirenandihalli Cross near Shidenur in Byadgi taluk in the district on the evening of Tuesday May 31. The accident occurred when a Tumtum vehicle in which they were travelling went out of the control of its driver and hit a roadside tree.
Please Wait while comments are loading...