150ನೇ ದಿನ ತಲುಪಿದ ಕಳಸಾ ಬಂಡೂರಿ, ಹೋರಾಟಗಾರರ ಬಂಧನ

ಹುಬ್ಬಳ್ಳಿ, ಡಿಸೆಂಬರ್, 12: ಕಳಸಾ ಬಂಡೂರಿ ಹೋರಾಟ ಬೆಂಬಲಿಸಿ ವಿಧಾನ ಪರಿಷತ್ ಚುನಾವಣೆ ಬಹಿಷ್ಕರಿಸದ ಅಭ್ಯರ್ಥಿಗಳ ಮನೆಗೆ ಮುತ್ತಿಗೆ ಹಾಕಲು ಉದ್ದೇಶಿಸಿದ 25 ಕ್ಕೂ ಹೆಚ್ಚು ರೈತ ಮುಖಂಡರನ್ನು ಪೊಲೀಸರು ಶುಕ್ರವಾರ ಬಂಧಿಸಿ ಬಿಡುಗಡೆಗೊಳಿಸಿದರು.

ನವಲಗುಂದ ಪಕ್ಷಾತೀತ ಹೋರಾಟ ಸಮಿತಿಯ ಮುಖಂಡ ಮನ್ಸೂರಿನ ಬಸವರಾಜ ದೇವರ ಅವರ ನೇತೃತ್ವದಲ್ಲಿ ನಗರದ ಕೆಸಿ ಸರ್ಕಲ್ ನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗಿಗಳಾದ ರೈತ ಮುಖಂಡ ಹೇಮನಗೌಡ ಪಾಟೀಲ, ಲೋಕನಾಥ ಹೆಬಸೂರ, ಸುಭಾಷಚಂದ್ರಗೌಡ ಪಾಟೀಲ, ವೀರಣ್ಣ ನೀರಲಗಿ ಬಂಧಿತರಾದ ಪ್ರತಿಭಟನಾಕಾರರು

ನವಲಗುಂದ ಪಕ್ಷಾತೀತ ಹೋರಾಟ ಸಮಿತಿಯ ಮುಖಂಡ ಮನ್ಸೂರಿನ ಬಸವರಾಜ ದೇವರ ಅವರ ನೇತೃತ್ವದಲ್ಲಿ ನಗರದ ಕೆಸಿ ಸರ್ಕಲ್ ನಲ್ಲಿ ಪ್ರತಿಭಟನಾ ಸಭೆ ನಡೆಸಿದರು. ಬಳಿಕ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳ ಮನೆಗೆ ಮುತ್ತಿಗೆ ಹಾಕಲು ಹೊರಟರು. ಆಗ ರಸ್ತೆ ತಡೆ ನಡೆಸಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದರು.[ಏನಿದು ಕಳಸಾ-ಬಂಡೂರಿ ಯೋಜನೆ?]

Get protest Navalagunda Pakshatitha Horata samiti leaders about of kalasa banduri at Hubballi

150 ನೇ ದಿನಕ್ಕೆ ತಲುಪಿದ ಕಳಸಾ ಬಂಡೂರಿ ಹೋರಾಟ:

ಕಳಸಾ-ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ನರಗುಂದದಲ್ಲಿ ನಡೆಯುತ್ತಿರುವ ಹೋರಾಟ ಇಂದು 150 ನೇ ದಿನಕ್ಕೆ ಕಾಲಿಟ್ಟಿದೆ. ಆದ್ದರಿಂದ ಶನಿವಾರ ನರಗುಂದ ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಮೂರು ಗಂಟೆ ಧರಣಿ ನಡೆಸಲಾಗುವುದು ಎಂದು ಸಮನ್ವಯ ಸಮಿತಿ ಅಧ್ಯಕ್ಷ ವೀರಬಸಪ್ಪ ಹೂಗಾರ ಹೇಳಿದ್ದಾರೆ.

ವಿಧಾನ ಪರಿಷತ್ ಚುನಾವಣೆಗೆ ನಿಧಿ ಸಂಗ್ರಹ :

ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಂಡು ರಾಜ್ಯ ಸರಕಾರ ಡಿಸೆಂಬರ್ 27ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಗೆ ನಿಧಿ ಸಂಗ್ರಹಿಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಗದಗದಲ್ಲಿ ಆರೋಪಿಸಿದ್ದಾರೆ.[ಡಿಸೆಂಬರ್ 27ರ ವಿಧಾನಪರಿಷತ್ ಚುನಾವಣೆ ಬಗ್ಗೆ ತಿಳಿಯಿರಿ]

ಗದಗದಲ್ಲಿ ಶುಕ್ರವಾರ ಮಾತನಾಡಿದ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ ಅವರು, ಕಾಂಗ್ರೆಸ್ ಪಕ್ಷವು ಚುನಾವಣಾ ಅಭ್ಯರ್ಥಿಗಳಿಗೆ 30 ಕೋಟಿ ರೂ. ಸಹಾಯ ಮಾಡಲು ಅಬಕಾರಿ ಇಲಾಖೆಯನ್ನು ಬಳಸಿಕೊಳ್ಳುತ್ತಿದೆ.[ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲುವು ನಮ್ಮದೇ: ಸಿಎಂ]

ಇದಕ್ಕಾಗಿಯೇ ಮೈಸೂರು ಹೊರವಲಯದಲ್ಲಿರುವ ರುಚಿ ದಿ ಪ್ರಿನ್ಸ್ ಹೊಟೆಲ್ ನಲ್ಲಿ ಜಿಲ್ಲಾ ಅಬಕಾರಿ ಅಧೀಕ್ಷಕರ ಸಭೆಯನ್ನು ಕರೆಯಲಾಗಿದೆ ಎಂದು ದೂರಿದರು. ಸರ್ಕಾರ ಅಬಕಾರಿ ಆಯುಕ್ತರ ಮೂಲಕ ಈ ಸಭೆಯನ್ನು ಕರೆದಿರುವುದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+