ಧಾರವಾಡ: ದುಬಾರಿ ದೀಪಾವಳಿ: ಗಗನಕ್ಕೇರಿದ, ಹೂ, ಹಣ್ಣು, ಪಟಾಕಿ ದರ
ಧಾರವಾಡ ಅಕ್ಟೋಬರ್ 24 : ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಜೋರಾಗಿದೆ. ಮನೆ ಮನೆಗಳಲ್ಲಿ ತಯಾರಿ ಜೋರಾಗಿದೆ. ಎಲ್ಲರೂ ಹೂವು-ಹಣ್ಣು, ಪಟಾಕಿ ಖರೀದಿಗೆ ಮುಗಿಬಿದ್ದಿದ್ದಾರೆ. ಇನ್ನು ಹಬ್ಬದ ಖುಷಿಯಲ್ಲಿದ್ದ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ.
ದೀಪಾವಳಿ ಹಿನ್ನೆಲೆ ತರಕಾರಿ, ದಿನ ನಿತ್ಯ ಬಳಸುವ ಸಾಮಗ್ರಿಗಳು, ಪಟಾಕಿಗಳ ದರ ಹೆಚ್ಚಾಗಿದೆ. ಹೀಗಾಗಿ ಭರ್ಜರಿ ಹಬ್ಬ ಮಾಡಬೇಕು ಎಂದಿಕೊಂಡಿರುವವರ ಜೇಬಿಗೆ ಕತ್ತರಿ ಬೀಳುವುದು ಪಕ್ಕ. ಒಂದೇ ತಿಂಗಳಲ್ಲಿ ಎರಡು ದೊಡ್ಡ ಹಬ್ಬಗಳು ಬಂದಿವೆ.
ದಸರಾ ಹಬ್ಬದ ಬೆಲೆ ಏರಿಕೆ ಬಿಸಿ ದೀಪಾವಳಿ ಹಬ್ಬಕ್ಕೂ ಹಬ್ಬಿದ್ದು ಜನ ಸಾಮಾನ್ಯರು ಪರದಾಡುತ್ತಿದ್ದಾರೆ. ಹುಬ್ಬಳ್ಳಿ ಧಾರವಾಡ ಅವಳಿ ನಗರಗಳು ಸೇರಿದಂತೆ ಜಿಲ್ಲೆಯಲ್ಲಿ ಅಕ್ಕಪಕ್ಕದ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಿಂದ ಬೆಳೆ ಹಾನಿಯಾಗಿದ್ದು ಬೆಲೆ ಏರಿಕೆಯಾಗಿದೆ.

ಅವಳಿ ನಗರದ ಮಾರುಕಟ್ಟೆಯಲ್ಲಿ ಇಂದಿನ ಹೂವುಗಳ ದರ:
ಮಲ್ಲಿಗೆ ಒಂದ ಕೆಜಿಗೆ- 500-550ರೂಪಾಯಿ
ಕನಕಾಂಬರ ಕೆಜಿಗೆ -1200 ರೂಪಾಯಿ
ಸೇವಂತಿಗೆ ಕೆಜಿಗೆ- 200 -250 ರೂಪಾಯಿ
ಗುಲಾಬಿ ಕೆಜಿಗೆ - 410 ರೂಪಾಯಿ
ಸುಗಂಧರಾಜ ಕೆಜಿಗೆ- 400 ರೂಪಾಯಿ
ಚೆಂಡು ಹೂವು ಕೆಜಿಗೆ- 160-170ರೂಪಾಯಿ
ಅವಳಿ ನಗರದ ಮಾರುಕಟ್ಟೆಯಲ್ಲಿ ಇಂದಿನ ಹಣ್ಣುಗಳ ದರ:
ಸೇಬು ಕೆಜಿಗೆ- 150-200 ರೂಪಾಯಿ
ದಾಳಿಂಬೆ ಕೆಜಿಗೆ- 150 ರೂಪಾಯಿ
ಮೂಸಂಬಿ ಕೆಜಿಗೆ- 100 ರೂಪಾಯಿ
ಆರೆಂಜ್ ಕೆಜಿಗೆ- 100 ರೂಪಾಯಿ
ಸಪೋಟ ಕೆಜಿಗೆ- 90 ರೂಪಾಯಿ
ಸೀಬೆಹಣ್ಣು ಕೆಜಿಗೆ- 150 ರೂಪಾಯಿ
ಏಲಕ್ಕಿ ಬಾಳೆಹಣ್ಣುಕೆಜಿಗೆ- 70ರೂಪಾಯಿ

ಧಾರವಾಡದಲ್ಲಿ ಅಗತ್ಯ ವಸ್ತುಗಳ ಬೆಲೆ:
ಮಾವಿನ ಎಲೆ 20 - ಕಟ್ಟು
ಬಾಳೆ ಕಂಬ - 60-80 ರೂಪಾಯಿ
ಬೇವಿನ ಸೊಪ್ಪು ಕಟ್ಟು - 20 ರೂಪಾಯಿ
ತುಳಸಿ ತೋರಣ ಮಾರು -50 ರೂಪಾಯಿ
ಬೆಲ್ಲ (ಅಚ್ಚು / ಉಂಡೆ) - 70 ರಿಂದ 80 ರೂಪಾಯಿ
ಈ ವರ್ಷ ಪಟಾಕಿಗಳ ಬೆಲೆ ಬಲು ದುಬಾರಿ:
ಈ ವರ್ಷ 100 ರಿಂದ 150% ರಷ್ಟು ಪಟಾಕಿಗಳ ಬೆಲೆ ಏರಿಕೆ ಮಾಡಲಾಗಿದೆ. ಪಟಾಕಿ ತಯಾರಿಸುವ ಕಚ್ಚಾವಸ್ತುಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಪಟಾಕಿಗಳ ಉತ್ಬಾದನೆಯಾಗಿಲ್ಲ. ಜೊತೆಗೆ ಬೇರೆ ಕಡೆಯಿಂದ ಬೇಡಿಕೆಗೆ ತಕ್ಕಂತೆ ಪಟಾಕಿಗಳು ಸಿಗುತ್ತಿಲ್ಲ. ಈ ಮಧ್ಯೆ ಸರ್ಕಾರ ಹಸಿರು ಪಟಾಕಿಯನ್ನೆ ಹೊಡೆಯಬೇಕು ಅಂತ ಆದೇಶ ಮಾಡಿರುವ ಹಿನ್ನೆಲೆ ಹಸಿರು ಪಟಾಕಿ ತಯಾರಿಸಲು ಬೇಕಾಗುವ ಸ್ಟ್ರೋಟಿಯಂ ನೈಟ್ರೇಟ್ ಬೆಲೆ ದುಬಾರಿಯಾಗಿದೆ.
ಈ ಸ್ಟ್ರೋಟಿಯಂ ನೈಟ್ರೇಟ್ ಬಳಕೆ ಮಾಡಿಯೇ ಹಸಿರು ಪಟಾಕಿ ತಯಾರಿಸಬೇಕು. ಹೀಗಾಗಿ ಪಟಾಕಿಗಳ ಬೆಲೆ ಏರಿಕೆಯಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಕಳೆದ ಮೂರು ವರ್ಷಗಳಿಂದ ಕೋವಿಡ್ ಇದ್ದ ಹಿನ್ನೆಲೆ ನಷ್ಟದಿಂದಾಗಿ ಸಾಕಷ್ಟು ಪಟಾಕಿ ಕಾರ್ಖಾನೆಗಳು ಬಾಗಿಲು ಮುಚ್ಚಿವೆ. ಹೀಗಾಗಿ ಈ ಪಟಾಕಿಗಳ ಉತ್ಪಾದನಾ ಪ್ರಮಾಣ ಕಡಿಮೆ ಇದ್ದು, ಪಟಾಕಿಗಳ ಬೆಲೆ ಗಗನಕ್ಕೆ ಏರಿದೆ. ದೀಪಗಳ ಹಬ್ಬ ದೀಪಾವಳಿ ಮನೆ ಬೆಳಗಬೇಕು ಎಂದು ಬಯಸಿದರೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ.

ಇನ್ನು ರೇಷ್ಮೆ ನಗರಿ ರಾಮನಗರದಲ್ಲಿ ಕಳೆದ ಆಯುಧ ಪೂಜೆ ಹಾಗೂ ವಿಜಯ ದಶಮಿ ಹಬ್ವಕ್ಕೆ ಹೋಲಿಸಿದರೆ, ದೀಪಾವಳಿ ಹಬ್ಬದಲ್ಲಿ ಹೂ ಮತ್ತು ಹಣ್ಣಿನ ಧಾರಣೆ ಸ್ವಲ್ಪ ಕಡಿಮೆಯಾಗಿದೆ.
ರಾಮನಗರ ಮಾರುಕಟ್ಟೆಯ ಇಂದಿನ ಹೂ-ಹಣ್ಣುಗಳ ದರ
ಮಲ್ಲಿಗೆ ಹೂ -120 ರೂಪಾಯಿ
ಕನಕಾಂಭರ ಹೂ- 100 ರೂಪಾಯಿ
ಸೇವಂತಿಗೆ- 40 -60 ರೂಪಾಯಿ
ಬಾಳೆ ಹಣ್ಣು ಕೆಜಿಗೆ- 80 ರೂಪಾಯಿ
ಹಾರ -100-150 ರೂಪಾಯಿ
ಹಣ್ಣುಗಳು ಮಿಕ್ಸ್ ಕೆಜಿಗೆ -150-200 ರೂಪಾಯಿ












Click it and Unblock the Notifications