ಧಾರವಾಡ ಉಪ ವಿಭಾಗಾಧಿಕಾರಿಯಾಗಿ ಡಾ.ಗೋಪಾಲಕೃಷ್ಣ ಬಿ ಅಧಿಕಾರ ಸ್ವೀಕಾರ
ಧಾರವಾಡ, ಆಗಸ್ಟ್ 26: ಇಲ್ಲಿನ ಉಪವಿಭಾಗಾಧಿಕಾರಿ ಹಾಗೂ ಉಪ ವಿಭಾಗ ದಂಡಾಧಿಕಾರಿಯಾಗಿ ಡಾ.ಗೋಪಾಲಕೃಷ್ಣ ಬಿ. ಅವರು ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್ ಅವರು ವರ್ಗಾವಣೆಯಾಗಿದ್ದು ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ.
Recommended Video
ಕೊನೆಗೂ Africa , Polioದಿಂದ ಮುಕ್ತ | Oneindia Kannada
ಡಾ.ಗೋಪಾಲಕೃಷ್ಣ ಅವರು 2018ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದು, ಬೆಂಗಳೂರು ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಕೆಲಕಾಲ ವೈದ್ಯಕೀಯ ಸೇವೆ ಸಲ್ಲಿಸಿದ ಇವರು 2017ರ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಆಡಿಟ್ ಸರ್ವಿಸ್ ಗೆ ಆಯ್ಕೆಯಾಗಿದ್ದರು. 2018ರ ಪರೀಕ್ಷೆಗಳಲ್ಲಿ ಐಎಎಸ್ ಗೆ ಆಯ್ಕೆಯಾದರು. ಕಲಬುರಗಿಯಲ್ಲಿ ಜಿಲ್ಲಾ ತರಬೇತಿ ಪೂರೈಸಿ ಇದೀಗ ಧಾರವಾಡ ಉಪವಿಭಾಗಾಧಿಕಾರಿ ಹುದ್ದೆಗೆ ನಿಯುಕ್ತಿಯಾಗಿದ್ದಾರೆ.

ನೂತನ ಉಪವಿಭಾಗಾಧಿಕಾರಿಗಳನ್ನು ಜಿಲ್ಲೆಯ ತಹಶೀಲ್ದಾರ್ ಸಂತೋಷಕುಮಾರ ಬಿರಾದಾರ, ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ,ಅಶೋಕ ಶಿಗ್ಗಾಂವಿ, ಅಮರೇಶ ಪಮ್ಮಾರ ಮತ್ತಿತರರು ಸ್ವಾಗತಿಸಿ ಅಭಿನಂದಿಸಿದರು.












Click it and Unblock the Notifications