Vinod Asuti: 'ಇವಿಎಂ' ಹ್ಯಾಕ್ ಮಾಡಬಹುದು?: ಮೊದಲ ಪ್ರತಿಕ್ರಿಯೆಯೆಲ್ಲೇ ಕೇಂದ್ರ ಸಚಿವರಿಗೆ ಟಾಂಗ್ ಕೊಟ್ಟ 'ಕೈ' ಅಭ್ಯರ್ಥಿ
ಧಾರವಾಡ, ಮಾರ್ಚ್ 24: ಧಾರವಾಡ ಲೋಕಸಭಾ ಕ್ಷೇತ್ರ ಮೊದಲು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ನಂತರ ಬಿಜೆಪಿ ಅಧಿಕಾರ ಹಿಡಿದಿದ್ದು, ಇದೀಗ ಜನರು ಬದಲಾವಣೆ ಬಯಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಹೇಳಿಕೆಗಳಿಗೆ ಕಾಂಗ್ರೆಸ್ ಯುವ ಅಭ್ಯರ್ಥಿ ವಿನೋದ್ ಅಸೂಟಿ ಅವರು ಮೊದಲ ಬಾರಿಗೆ ಸುದ್ದಿಗಾರರ ಜೊತೆ ಮಾತನಾಡಿದರು.
ಭಾನುವಾರ ಜಿಲ್ಲೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಕ್ಷೇತ್ರದಲ್ಲಿ ಗ್ಯಾರಂಟಿ ಯೋಜನೆಗಳ ಪರಿಣಾಮ ಆಗಲಿದೆ. ಎಲ್ಲ ಮುಖಂಡರ ಸಲಹೆ ಪಡೆದು ಪಕ್ಷವು ನನಗೆ ಟಿಕೆಟ್ ಕೊಟ್ಟಿದೆ. 03 ಲಕ್ಷ ಮತಗಳ ಅಂತರದಿಂದ ಜಯವಾಗಲಿದೆ ಎನ್ನುತ್ತಿದ್ದಾರೆ. ಇವರು ಇವಿಎಂ ಗದ್ದಲ ಏನಾದರು ಮಾಡಬಹುದು ಎಂದು ಹೇಳಿದರು.

ಗೆಲುವು-ಸೋಲು ಜನರ ಕೈಯಲ್ಲಿದೆ: ಅಸೂಟಿ
ಧಾರವಾಡ ಕ್ಷೇತ್ರದಲ್ಲಿ ಪ್ರಹ್ಲಾದ್ ಜೋಶಿಯವರು ಸತತ ನಾಲ್ಕು ಬಾರಿ ಗೆದ್ದಿದ್ದಾರೆ. ಐದನೇ ಭಾರಿ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅವರ ಎದುರು ಪ್ರಮೋದ್ ಅಸೂಟಿ ಇದ್ದಾರೆ. ಬಿಜೆಪಿ ಬರೋಬ್ಬರು ಮೂರು ಲಕ್ಷ ಮತಗಳ ಅಂತರದಿಂದ ಗೆಲ್ಲುವುದಾಗಿ ತಿಳಿಸಿದ್ದರು. ಅದಕ್ಕೆ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿಯವರು ಗೆಲುವು-ಸೋಲು ಜನರ ಕೈಯಲ್ಲಿದೆ. ಇಷ್ಟು ವಿಶ್ವಾಸದಿಂದ ಹೇಳುತ್ತಿದ್ದಾರೆ ಎಂದರೆ 'ಇವಿಎಂ' ಗದ್ದಲ ಏನಾದರೂ ಮಾಡಬಹುದು ಎಂದು ಅಸೂಟಿ ಟಾಂಗ್ ಕೊಟ್ಟರು.
ಕಾಂಗ್ರೆಸ್ ಪಕ್ಷವು ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕು ಎಂಬ ಕಾರಣದಿಂದಲೇ ನನಗೆ ಟಿಕೆಟ್ ಕೊಟ್ಟಿದ್ದು, ಇದರಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದರು.

ಪ್ರಧಾನಿ ಬಂದು ಹೋದರೆ ಕಾಂಗ್ರೆಸ್ ಗೆದ್ದಿದೆ
ಪ್ರಧಾನಿ ನರೇಂದ್ರ ಮೋದಿಯವರ ಅಲೆ ಇದೆ ಎಂದು ಕೇಳುತ್ತಾರೆ. ಹತ್ತು ತಿಂಗಳ ಹಿಂದೆ ವಿಧಾನಸಭೆ ಚುನಾವಣೆ ಆಗಿದೆ. ಪ್ರಧಾನಿ ಮೋದಿ ನಮ್ಮ ರಾಜ್ಯಕ್ಕೆ ಬಂದು ಹೋಗಿದ್ದರು. ಆದರೂ ಕಾಂಗ್ರೆಸ್ ರಾಜ್ಯದಲ್ಲಿ 135 ಸ್ಥಾನ ಗಳಿಸಿದೆ ಜನರ ಆರ್ಶೀವಾದದಿಂದ ಸರ್ಕಾರ ಅಡಳಿತ ನಡೆಸುತ್ತಿದೆ ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
ಧಾರವಾಡ ಕ್ಷೇತ್ರವು ಬಿಜೆಪಿಗೂ ಮೊದಲು ಕಾಂಗ್ರೆಸ್ಸ್ ಭದ್ರಕೋಟೆಯಾಗಿತ್ತು. ಜನ ಬದಲಾವಣೆ ಬಯಸುತ್ತಿದ್ದಾರೆ. ಕಾಂಗ್ರೆಸ್ ಕೊಟ್ಟ ಆಶ್ವಾಸನೆಗಳನ್ನು ನಡೆಸಿಕೊಟ್ಟಿದ್ದೇವೆ ಈಗ ಚುನಾವಣೆ ವೇಳೆ ಅನೇಕರು ಸುಳ್ಳು ಅಶ್ವಾಸನೆ ಕೊಟ್ಟಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.
ಕ್ಷೇತ್ರದಲ್ಲಿ ಜನ ಬದಲಾವಣೆ ಬಯಸಿದ್ದಾರೆ?
ಲೋಸಕಭಾ ಜನರು ಪ್ರಜ್ಞಾತರಿದ್ದಾರೆ. ಬದಲಾವಣೆ ಗಾಳಿಗೆ ಇಚ್ಛೆ ಪಟ್ಟಿದ್ದಾರೆ. ಮೊದಲು ನಾನು ಟಿಕೆಟ್ ಗೆ ಅರ್ಜಿ ಹಾಕಿರಲಿಲ್ಲ ಬಳಿಕ ಕೆಪಿಸಿಸಿ ಅಧ್ಯಕ್ಷರ ಮೂಲಕ ಅರ್ಜಿ ಹಾಕಿದೆ. ನಾಯಕರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್ ನೀಡಿದರು. ಇನ್ನೂ ಚುನಾವಣೆ ಮಾಡುವರು ಒಂದೇ ಸಮಾಜದಿಂದ ಗೆಲ್ಲಲು ಸಾಧ್ಯವಿಲ್ಲ. ಎಲ್ಲ ಸಮಾಜದವರ ಮತಗಳು ಮುಖ್ಯವಾಗಿರುತ್ತದೆ. ಕಾಂಗ್ರೆಸ್ ಎಲ್ಲ ಸಮುದಾಯದ ಪರ ನೋಡುತ್ತದೆ. ಹೀಗಾಗಿ ಎಲ್ಲಾ ಸಮುದಾಯದವರು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಕೈ ಹಿಡಿಯುತ್ತಾರೆಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಈ ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಹೇಳುವುದಾದರೆ, ವಿನೋದ್ ಅಸೂಟಿ ಇವರು ಈ ಹಿಂದೆ 2018ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಅವರು ಲೋಕಸಭೆಗೆ ಅರ್ಜಿ ಸಲ್ಲಿಸಿದ್ದರು. ಇವರು ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರಿಗೆ ಟಿಕೆಟ್ ನೀಡುವ ಮೂಲಕ ಎರಡು ಕ್ಷೇತ್ರಗಳಿಗೆ ಕುರುಬ ಸಮುದಾಯಕ್ಕೆ ಕಾಂಗ್ರೆಸ್‌ನಿಂದ ಟಿಕೆಟ್ ನೀಡಿದಂತಾಗಿದೆ.












Click it and Unblock the Notifications