Dharwad Lok Sabha: ಪ್ರಹ್ಲಾದ್ ಜೋಶಿಗೆ ಟಿಕೆಟ್ ಘೋಷಣೆ, ಜಗದೀಶ್ ಶೆಟ್ಟರ್‌ಗೆ ಹಿನ್ನಡೆ

ಬೆಂಗಳೂರು, ಮಾರ್ಚ್ 13: ಕರ್ನಾಟಕ ಲೋಕಸಭಾ ಚುನಾವಣೆಯ ಎಲ್ಲ ಕ್ಷೇತ್ರಗಳ ಪೈಕಿ ಧಾರವಾಡ ಕ್ಷೇತ್ರವು ಹೆಚ್ಚು ಗಮನ ಸೆಳೆದಿತ್ತು. ಹಲವು ಸಭೆಗಳ ಬಳಿಕ ಬಿಜೆಪಿಯು ಬಿಡುಗಡೆಗೊಳಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಕರ್ನಾಟಕದ ವಿವಿಧ ಕ್ಷೇತ್ರಗಳಿಗೆ ಟಿಕೆಟ್ ಅಂತಿಮಗೊಳಿಸಿದ್ದಾರೆ. ಇದರಲ್ಲಿ ಧಾರವಾಡದ ಟಿಕೆಟ್ ಅನ್ನು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿಯವರಿಗೆ ಘೋಷಿಸಲಾಗಿದೆ.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಭಾರಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರಿಗೆ ಮತ್ತೆ ಟಿಕೆಟ್ ಸಿಕ್ಕಿದೆ. ಇದೇ ಕ್ಷೇತ್ರದಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಟಿಕೆಟ್ ಬಯಸಿದ್ದರು. ಆದರೆ ಅವರಿಗೆ ಬಿಜೆಪಿಯ ನಿರ್ಧಾರ ಆಘಾತ ನೀಡಿದೆ.

Dharwad Lok Sabha Election BJP Ticket Announced for Pralhad Joshi

ಧಾರವಾಡ ಜೊತೆಗೆ ಜಗದೀಶ್ ಶೆಟ್ಟರ್ ಹಾವೇರಿ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಸದರಿ ಪಟ್ಟಿಯಲ್ಲಿ ಹಾವೇರಿ ಕ್ಷೇತ್ರಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕಣಕ್ಕಿಳಿಸಲಾಗಿದೆ. ಹೀಗಾಗಿ ಜಗದೀಶ್ ಶೆಟ್ಟರ್ ಅವರಿಗೆ ಹಾವೇರಿ ಮತ್ತು ಧಾರವಾಡ ಎರಡು ಕ್ಷೇತ್ರಗಳು ಕನಸಾಗಿಯೇ ಉಳಿದಿವೆ.

ಶೆಟ್ಟರ್ ಹೆಸರು ಮುನ್ನೆಲೆಗೆ: ವಿಚಲಿತರಾಗದ ಜೋಶಿ

ಟಿಕೆಟ್ ವಿಚಾರ ಪ್ರಸ್ತಾಪ ಆದಾಗಿನಿಂದಲೂ ಶೆಟ್ಟರ್ ಹೆಸರು ಮುನ್ನೆಲೆಗೆ ಬರುತ್ತಿತ್ತು. ಧಾರವಾಡ ಈ ಬಾರಿ ಜೋಶಿಯವರಿಗೆ ಸಿಗುವುದಿಲ್ಲ. ಹಾಲಿ ಸಚಿವರಿಗೆ ಕೊಕ್ ಕೊಡುವ ಪಟ್ಟಿಯಲ್ಲಿ ನಿಮ್ಮ ಹೆಸರಿದೆ ಎಂಬೆಲ್ಲ ವದಂತಿಗಳು ಹರಡಿದರೂ ಸಹಿತ ಪ್ರಹ್ಲಾದ್ ಜೋಶಿಯವರು ವಿಚಲಿತರಾಗಲಿಲ್ಲ. ಬಹುಶಃ ಅವರಿಗೆ ಧಾರವಾಡ ಕ್ಷೇತ್ರ ಟಿಕೆಟ್ ತಮಗೇ ಸಿಗುವುದು ನೂರಕ್ಕೆ ನೂರರಷ್ಟು ಗೊತ್ತಿತ್ತು ಎಂಬುದಕ್ಕೆ ಇಂದಿನ ಬಿಜೆಪಿಯ ಟಿಕೆಟ್ ಫೈನಲ್ ಮಾಡಿರುವ ನಿರ್ಧಾರವೇ ಸಾಕ್ಷಿಯಾಗಿದೆ.

ಶೆಟ್ಟರ್ ಹೆಸರು ಮುನ್ನೆಲೆಗೆ: ವಿಚಲಿತರಾಗದ ಜೋಶಿ

ಟಿಕೆಟ್ ವಿಚಾರ ಪ್ರಸ್ತಾಪ ಆದಾಗಿನಿಂದಲೂ ಶೆಟ್ಟರ್ ಹೆಸರು ಮುನ್ನೆಲೆಗೆ ಬರುತ್ತಿತ್ತು. ಧಾರವಾಡ ಈ ಬಾರಿ ಜೋಶಿಯವರಿಗೆ ಸಿಗುವುದಿಲ್ಲ. ಹಾಲಿ ಸಚಿವರಿಗೆ ಕೊಕ್ ಕೊಡುವ ಪಟ್ಟಿಯಲ್ಲಿ ನಿಮ್ಮ ಹೆಸರಿದೆ ಎಂಬೆಲ್ಲ ವದಂತಿಗಳು ಹರಡಿದರೂ ಸಹಿತ ಪ್ರಹ್ಲಾದ್ ಜೋಶಿಯವರು ವಿಚಲಿತರಾಗಲಿಲ್ಲ. ಬಹುಶಃ ಅವರಿಗೆ ಧಾರವಾಡ ಕ್ಷೇತ್ರ ಟಿಕೆಟ್ ತಮಗೇ ಸಿಗುವುದು ನೂರಕ್ಕೆ ನೂರರಷ್ಟು ಗೊತ್ತಿತ್ತು ಎಂಬುದಕ್ಕೆ ಇಂದಿನ ಬಿಜೆಪಿಯ ಟಿಕೆಟ್ ಫೈನಲ್ ಮಾಡಿರುವ ನಿರ್ಧಾರವೇ ಸಾಕ್ಷಿಯಾಗಿದೆ.

ಬಿಜೆಪಿ ವಿಧಾನಸಭಾ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಮರಳಿದ್ದರು. ಅಲ್ಲಿಂದ ಅವರಿಗೆ ಧಾರವಾಡದ ಟಿಕೆಟ್ ಸಿಗಲಿದೆ ಎಂಬ ಗುಸುಗುಸು ಶುರುವಾಗಿತ್ತು. ಅವರ ಸಹೋದರ ಪ್ರದೀಪ್ ಶೆಟ್ಟರ್ ಸಹ ಧಾರವಾಡ ಟಿಕೆಟ್ ನೀಡಿದರೆ ಸೂಕ್ತ ಎಂದು ತಿಳಿಸಿದ್ದರು. ಇದೀಗ ಶೆಟ್ಟರ್ ಸಹೋದರರ ಲೆಕ್ಕಾಚಾರ ಎಲ್ಲ ತಲೆಕೆಳಗಾಗಿದೆ.

ಗೆಲ್ಲುವ ಅಭ್ಯರ್ಥಿಗೆ ಬಿಜೆಪಿ ಮಣೆ

ಪ್ರಹ್ಲಾದ್ ಜೋಶಿಯವರು ಕ್ಷೇತ್ರದಲ್ಲಿ 2009ರಿಂದಲೂ ಭರ್ಜರಿ ಗೆಲುವು ಸಾಧಿಸಿಕೊಂಡು ಬಂದವರು. ಕೇಂದ್ರ ಸಚಿವರು ಆಗಿರುವ ಇರುವ ತಮ್ಮ ಕ್ಷೇತ್ರದಲ್ಲಿ ಅಪಾರ ವರ್ಚಸ್ಸು ಹೊಂದಿದವರು. ಬಿಜೆಪಿ ವರಿಷ್ಠರ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದರು. ಇತ್ತ ಜಗದೀಶ್ ಶೆಟ್ಟರ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿ.

ರಾಜ್ಯದಲ್ಲಿ ಅತ್ಯಧಿಕ ಕ್ಷೇತ್ರ ಗೆಲ್ಲಬೇಕು ಎಂದು ತಂತ್ರ ರೂಪಿಸಿರುವ ಬಿಜೆಪಿಗೆ ಪ್ರತಿ ಕ್ಷೇತ್ರವು ಬಹಳ ಮಹತ್ವದ್ದಾಗಿದೆ. ಹೀಗಾಗೆ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಭಾಗವಾಗಿ ಪ್ರಹ್ಲಾದ್ ಜೋಶಿಯವರಿಗೆ ಧಾರವಾಡದ ಟಿಕೆಟ್ ಫೈನಲ್ ಆಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+