ಧಾರವಾಡ: ಪಕ್ಷೇತರ ಅಭ್ಯರ್ಥಿ ದಿಂಗಾಲೇಶ್ವರ ಶ್ರೀ ವಿರುದ್ಧ ಭಕ್ತರು ಅಸಮಾಧಾನ
ಧಾರವಾಡ, ಏಪ್ರಿಲ್ 11: ಧಾರವಾಡ ಲೋಕಸಭಾ ಚುನಾವಣಾ ಕ್ಷೇತ್ರದಲ್ಲಿ ಬಿಜೆಪಿ ಪ್ರಹ್ಲಾದ್ ಜೋಶಿ ವಿರುದ್ಧ ಪಕ್ಷೇತರವಾಗಿ ಕಣಕ್ಕೆ ಇಳಿದಿರುವ ಶಿರಹಟ್ಟಿ ಮಠದ ಶ್ರಿ ಫಕೀರ ದಿಂಗಾಲೇಶ್ವರ ಸ್ವಾಮೀಜಿಗಳ ವಿರುದ್ಧ ಅವರ ಭಕ್ತರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿರಹಟ್ಟಿ ಮಠದ ಉತ್ತರಾಧಿಕಾರಿಯಾಗಿ ಎರಡು ವರ್ಷದ ಹಿಂದೆ ನಾವು (ಭಕ್ತರು) ಭಾವೈಕ್ಯತೆಯ ಮಠಕ್ಕೆ ಉತ್ತರಾಧಿಕಾರಿಯಾಗಿ ಮಾಡಿದ್ದೇವೆ. ಆದರೆ ಇವರು ರಾಜಕೀಯ ಮಾಡುತ್ತಿದ್ದಾರೆ. ಮಠದ ಉತ್ತರಾಧಿಕಾರಿಯಾಗಿ ಮಾಡಿದ್ದು, ರಾಜಕೀಯ ಮಾಡಲು ಅಲ್ಲ ಎಂದು ಭಕ್ತರು ಎಚ್ಚರಿಕೆ ನೀಡಿದ್ದಾರೆ.

ಒಂದು ವೇಳೆ ರಾಜಕೀಯ ಮಾಡುವುದೇ ಆದರೆ, ಶ್ರೀ ದಿಂಗಾಲೇಶ್ವರ ಸ್ವಾಮೀಜಿಯವರು ಮಠವನ್ನು ತೊರೆದು ಬೇಕಾದರೆ ರಾಜಕೀಯ ಮಾಡಲಿ ಎಂದು ಆಗ್ರಹಿಸಿದ್ದಾರೆ. ಭಾವೈಕ್ಯತೆಯ ಸಂಕೇತವಾಗಿ ಮಠ ಹೆಸರು ಮಾಡಿದೆ. ಇಲ್ಲಿದ್ದುಕೊಂಡು ರಾಜಕೀಯ ಮಾಡುವು ಸರಿಯಲ್ಲ ಎಂದು ಭಕ್ತ ಸಮೂಹ ಬೇಸರ ವ್ಯಕ್ತಪಡಿಸಿದೆ.
ನಿರೀಕ್ಷೆಯಷ್ಟು ಬಾರದ ಜನ
ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಂತೆ ಇತ್ತೀಚೆಗೆ ಶ್ರಿಗಳು ಚುನಾವಣಾ ಪ್ರಚಾರ ಸಭೆ ಆರಂಭಿಸಿದ್ದರು. ಆದರೆ ಅವರ ಬೆಂಬಲಕ್ಕೆ ನಿರೀಕ್ಷಿತ ಜನರು, ಭಕ್ತರು ಸೇರಿಲ್ಲ ಎನ್ನಲಾಗಿದೆ. ದಿಂಗಾಲೇಶ್ವರ ಸ್ವಾಮೀಜಿ ರಾಜಕೀಯಕ್ಕೆ ಬಂದಿರುವುದು ಭಕ್ತರಿಗೆ ಇಷ್ಟವಿಲ್ಲದ್ದಕ್ಕೆ ಬೆಂಬಲ ಅಷ್ಟಾಗಿ ಸಿಗುತ್ತಿಲ್ಲ ಎಂದು ತಿಳಿದು ಬಂದಿದೆ.












Click it and Unblock the Notifications