ಜುಲೈ 31ಕ್ಕೆ ಧಾರವಾಡ ಐಐಟಿ ಲೋಕಾರ್ಪಣೆ?

Posted By:
Subscribe to Oneindia Kannada

ಧಾರವಾಡ, ಜುಲೈ 06 : ಧಾರವಾಡದಲ್ಲಿ ಸ್ಥಾಪನೆಯಾಗಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಜುಲೈ 31ಕ್ಕೆ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಐಐಟಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಕಟ್ಟಡದಲ್ಲಿ ಐಐಟಿ ತಾತ್ಕಾಲಿಕ ಕ್ಯಾಂಪಸ್ ನಿರ್ಮಾಣವಾಗಿದೆ. ಐಐಟಿ ಸ್ಥಾಪನೆಗೆ ಬೇಕಾದ ಅಗತ್ಯ ವ್ಯವಸ್ಥೆಗಳು ಆಗಿದ್ದು, ಕಾಮಗಾರಿಗಳೆಲ್ಲವೂ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. [ಧಾರವಾಡ ಐಐಟಿಯ ಸ್ಥಳ ಬದಲಾವಣೆ]

iit

ಕಂಪ್ಯೂಟರ್ ಸೈನ್ಸ್, ಮೆಕಾನಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಕೋರ್ಸ್‌ ತರಗತಿಗಳು ಈ ವರ್ಷ ಐಐಟಿಯಲ್ಲಿ ಆರಂಭವಾಗಲಿವೆ. ಐವರು ವಿದ್ಯಾರ್ಥಿನಿಯರು ಸೇರಿ 120 ವಿದ್ಯಾರ್ಥಿಗಳು ಐಐಟಿಗೆ ಪ್ರವೇಶ ಪಡೆದಿದ್ದಾರೆ. ಧಾರವಾಡದ ಐವರು ವಿದ್ಯಾರ್ಥಿಗಳಿಗೆ ತಮ್ಮ ಊರಿನಲ್ಲಿಯೇ ಐಐಟಿಯಲ್ಲಿ ವ್ಯಾಸಂಗ ಮಾಡುವ ಭಾಗ್ಯ ಸಿಕ್ಕಿದೆ. [ಐಐಟಿ ಕೋರ್ಸ್ ಶುಲ್ಕ 2 ಲಕ್ಷ ರು ತನಕ ಏರಿಕೆ!]

ಶಾಶ್ವತ ಕ್ಯಾಂಪಸ್ : ಧಾರವಾಡ ನಗರದ ಹೊರವಲಯದ ಮಮ್ಮಿಗಟ್ಟಿ ವ್ಯಾಪ್ತಿಯ ಸುಮಾರು 668 ಎಕರೆ ಪ್ರದೇಶದಲ್ಲಿ ಐಐಟಿಯ ಶಾಶ್ವತ ಕ್ಯಾಂಪಸ್ ನಿರ್ಮಾಣವಾಗಲಿದೆ. ಐಐಟಿ ಸ್ಥಾಪನೆಗೆ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡಿದ್ದ ನಿವೇಶನದ ಬದಲಾಗಿ, ಅದೇ ಸರ್ವೆ ನಂಬರಿನ ಜಾಗದಲ್ಲಿ ಸ್ಥಳ ಬದಲಾವಣೆ ಕೋರಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆ ಕೇಂದ್ರ ಒಪ್ಪಿಗೆ ನೀಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian Institute of Technology (IIT) Dharwad, Karnataka is all set to be dedicated to the nation. On July 31, 2016 PM Narendra Modi may inaugurate IIT.
Please Wait while comments are loading...