ವಿದ್ಯಾಕಾಶಿಯ ಹಾಸ್ಟೆಲ್‌ನಲ್ಲಿ ಬಡ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ: ಸರ್ಕಾರಿ ಸೌಲಭ್ಯ ಮರಿಚಿಕೆ
ಧಾರವಾಡ, ಜೂನ್ 01: ರಾಜ್ಯದಲ್ಲಿ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಹೆಸರುವಾಸಿ ಧಾರವಾಡದಲ್ಲಿ ಮೂಲ ಸೌಕರ್ಯಗಳು ಸಿಗದೇ ಪರಡಾಡುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ಇವರಿಗೆ ಸಿಗುತ್ತಿರುವ ಸೌಲಭ್ಯಗಳು ಸಿಕ್ಕಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಹಲವು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಬಡವರ ಮಕ್ಕಳು ರಾಜ್ಯದ ಮೂಲೆ ಮೂಲೆಯಿಂದ ವಿದ್ಯಾಕಾಶಿ ಧಾರವಾಡಕ್ಕೆ ವಿದ್ಯೆ ಕಲಿಯಲು ಪ್ರತಿವರ್ಷ ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಬರುತ್ತಾರೆ. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ದೇವರಾಜ್ ಅರಸು ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಈ ಹಾಸ್ಟೆಲ್ ಗಳಲ್ಲಿ ಗುಣಮಟ್ಟದ ಆಹಾರ ನೀಡುತ್ತಿಲ್ಲ. ಸರಿಯಾಗಿ ಮೂಲ ಸೌಲಭ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಬಡವರ ಮಕ್ಕಳಿಗೆಂದೆ ವಸತಿ ಗೃಹ (ಹಾಸ್ಟೆಲ್) ಗಳಲ್ಲಿ ವಸತಿ ಸೌಲಭ್ಯ ನೀಡಿ ಅವರಿಗೆ ಸಹಾಯ ಮಾಡುತ್ತಿದೆ. ಆದರೆ ಎನ್ ಪ್ರಯೋಜನ ಹೇಳಿ ಹಾಸ್ಟೆಲ್ ನಲ್ಲಿ ಇರುವ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕೊಡುವ ಆಹಾರದಲ್ಲಿ ಕಳಪೆ ಮಟ್ಟದ ಆಹಾರವನ್ನು ನೀಡುತ್ತಿದ್ದಾರೆ.
ವಾರ್ಡನ್ ವಿರುದ್ಧ ಅಸಮಾಧಾನ, ಬದಲಾವಣೆಗೆ ಆಗ್ರಹ
ನಮ್ಮ ಹಾಸ್ಟೆಲ್ ಮೇಲ್ವಿಚಾರಕ ಪ್ರಸನ್ನ ಅಂಗಡಿ ಅವರನ್ನು ತೆಗೆದು ಬೇರೆ ಮೇಲ್ವಿಚಾರಕರನ್ನು ಹಾಕಬೇಕು ಎಂದು ವಿದ್ಯಾರ್ಥಿಗಳು ಶುಕ್ರವಾರ ರಾತ್ರಿ ಹಾಸ್ಟೆಲ್ ಎದುರಿಗೆ ವಾರ್ಡನ್ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟಿಸಿದರು. ಹಾಸ್ಟೆಲ್‌ನಲ್ಲಿನ ಅವ್ಯವಸ್ಥೆಗೆ ಅಸಮಾಧಾನ ವ್ಯಕ್ತಪಡಿಸಿದರು.
ಇಲ್ಲಿನ ಬಡಮಕ್ಕಳಿಗೆ ಎರಡು ವರ್ಷಗಳಿಂದ ರಾಜ್ಯ ಸರ್ಕಾರದಿಂದ ಕೊಡುವ ಮೂಲ ಸೌಲಭ್ಯಗಳನ್ನುನ್ನ ಹಾಸ್ಟೆಲ್ ಮೇಲ್ವಿಚಾರಕ ಪ್ರಸನ್ನ ಅಂಗಡಿ ನೀಡುತ್ತಿಲ್ಲ. ಈ ಬಗ್ಗೆ ತಾಲೂಕಾಧಿಕಾರಿಗಳಿಗೆ ದೂರು ನೀಡಲಾಗಿದೆ. ಆದರೆ ಇಲ್ಲಿಯವರೆಗೂ ಪ್ರಸನ್ನ ಅಂಗಡಿ ವಿರುದ್ಧ ಯಾವುದು ಕ್ರಮ ಕೈಗೊಂಡಿಲ್ಲ ಎಂದು ವಿದ್ಯಾರ್ಥಿಗಳು ದೂರಿದರು.
ಒಂದೇ ಕೊಠಡಿಯಲ್ಲಿ 6 ವಿದ್ಯಾರ್ಥಿಗಳು
ಹಾಸ್ಟೆಲ್ ನಲ್ಲಿ ಒಂದೂ ರೂಮಿನಲ್ಲಿ ಮೂವರು ವಿದ್ಯಾರ್ಥಿಗಳು ಅಧ್ಯಯನಕ್ಕೆ ಅನೂಕೂಲವಾಗುವಂತಹ ಕೊಠಡಿಗಳು ಇವೆ. ಆದರೆ ಒಂದೆ ರೂಮಿನಲ್ಲಿ 6 ಜನ ವಿದ್ಯಾರ್ಥಿಗಳನ್ನು ಹಾಕಿದ್ದಾರೆ. ಇನ್ನು ರೂಮಿನ ಮೆಲೆ ಮಲಗಿಕ್ಕೊಳ್ಳುವ ವಿದ್ಯಾರ್ಥಿಗಳು ಸ್ವಲ್ಪ ಯಾಮಾರಿದರೂ, ಅವರ ತಲೆಗೆ ಪ್ಯಾನ್ ತಾಗಿ ಅಪಾಯ ಎದುರಾಗುವ ಸ್ಥತಿ ಇಲ್ಲಿದೆ.

ಪ್ರತಿದಿನ ಗುಣಮಟ್ಟದ ಅಡುಗೆಯನ್ನು ವಿದ್ಯಾರ್ಥಿಗಳಿಗೆ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಸಾಕಷ್ಟು ಪತ್ರ ಬರೆದು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈವರೆಗೂ ಈ ಬಗ್ಗೆ ಯಾರೊಬ್ಬರು ಕ್ರಮ ಕೈಗೊಂಡಿಲ್ಲ. ವಿದ್ಯಾರ್ಥಿಗಳ ಮನವಿಗೆ ಯಾರು ಖ್ಯಾರೆ ಎಂದಿಲ್ಲ.
ಅನುಮತಿ ಇಲ್ಲದೇ ಹಾಸ್ಟೆಲ್‌ಗೆ ಅಂಗಡಿ ಗೈರು
ತಾಲೂಕು ಹಿಂದುಳಿದ ಕಲ್ಯಾಣಾಧಿಕಾರಿಗಳು ವಿದ್ಯಾರ್ಥಿಗಳ ಕರೆಯ ಮೇರೆಗೆ ಹಾಸ್ಟೆಲ್ ಗೆ ಭೇಟಿ ನೀಡಿದಾಗ ಮೇಲ್ವಿಚಾರಕ ಪ್ರಸನ್ನ ಅಂಗಡಿ ಅವರ ಮೆಲೆ ಸಾಕಷ್ಟು ದೂರುಗಳು ವ್ಯಕ್ತವಾದವು.
ಅಂಗಡಿಯವರು ಕಳೆದ 15 ದಿನಗಳಿಂದ ಹಾಸ್ಟೆಲ್ ಗೈರಾಗಿದ್ದಾರೆ. ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ ರಜೆಯಲ್ಲಿದ್ದಾರೆ. ತಿಂಗಳಿಗೆ ಒಮ್ಮೆ ಶೌಚಾಲಯವನ್ನು ಸ್ವಚ್ಚ ಮಾಡಿಸುತ್ತಿದ್ದಾರೆ, ವಿದ್ಯಾರ್ಥಿಗಳು ಕರೆ ಮಾಡಿದಾಗ ಸ್ಪಂದಿಸುವುದಿಲ್ಲ. ಊಟದಲ್ಲಿ ಹುಳಗಳು ಬರುತ್ತಿವೆ, ಮೇಲ್ವಿಚಾರಕರ ಚೇರನಲ್ಲೆ ಬೇರೆ ಖಾಸಗಿ ವ್ಯಕ್ತಿ ಬಂದು ಆಡಳಿತ ನಡಿಸುತ್ತಾರೆ.
ಗುಟ್ಕಾ ತಿಂದು ಅಡುಗೆ ಮಾಡುವ ಕಾರ್ಮಿಕರು
ಅಡುಗೆ ಮಾಡುವವರು ಗುಟ್ಕಾ ತಿನ್ನುತ್ತು ಅಡಿಗೆ ಮಾಡೋದು ಇದರಿಂದ ಅಡುಗೆಯಲ್ಲಿ ಕೂದಲು, ಹುಳಗಳು ಸಾಕಷ್ಟು ಸಾರಿ ಬಂದಿವೆ. ಈ ರೀತಿ ಮೇಲ್ವಿಚಾರಕರ ಮೆಲೆ ವಿದ್ಯಾರ್ಥಿಗಳು 10 ಕ್ಕೂ ಹೆಚ್ಚು ದೂರುಗಳನ್ನು ಕೊಟ್ಟಿರುವ ಹಿನ್ನಲೆ ಸದ್ಯ ತಾಲೂಕು ಅಧಿಕಾರಿಗಳು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಆದರೆ ಇದಕ್ಕೆ ಯಾವುದೆ ಪ್ರತಿಕ್ರಿಯೇ ನೀಡದೆ ಸರ್ವಾಧಿಕಾರಿಯಂತೆ ಅಧಿಕಾರವನ್ನು ದುರ್ಬಳಕೆ ಮಾಡಿಕ್ಕೊಳ್ಳುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ.
ಸರ್ಕಾರ ನಿಯೋಜಿಸಿರುವ ಇಂತಹ ಬೇಜವಾಬ್ದಾರಿ ಅಧಿಕಾರಿ, ಸಿಬ್ಬಂದಿಯಿಂದ ವಿದ್ಯಾಕಾಶಿ ಎಂಬ ಹೆಸರಿರುವ ಧಾರವಾಡಕ್ಕೆ, ಅನೇಕ ಬಡ ಮಕ್ಕಳಿಗೆ ಆಸರೆಯಾಗಿರುವ ಜಿಲ್ಲೆಗೆ, ಹಾಸ್ಟೆಲ್‌ಗಳಿಗೆ ಕೆಟ್ಟ ಹೆಸರು ಬರುತ್ತಿದೆ. ಮೊದಲ ಇಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.












Click it and Unblock the Notifications