ಧಾರವಾಡ: ಈ ವರ್ಷ 2.70 ಲಕ್ಷ ಹೆ. ಭೂಮಿಯಲ್ಲಿ ಬಿತ್ತನೆ ಗುರಿ: ಬೀಜ-ರಸಗೊಬ್ಬರ ಮಾಹಿತಿ
ಹುಬ್ಬಳ್ಳಿ, ಮೇ 31: ಒಣಹವೆಯೇ ಹೆಚ್ಚಾಗಿದ್ದು ಉತ್ತರ ಒಳನಾಡಿನ ಹಲವೆಡೆ ಪೂರ್ವ ಮುಂಗಾರು ಭರ್ಜರಿಯಾಗಿ ಸುರಿದಿದ್ದು, ಇದೀಗ ಉತ್ತಮ ಮುಂಗಾರು ಮಳೆ ನಿರೀಕ್ಷೆ ಇದೆ. ಧಾರವಾಡ ಜಿಲ್ಲೆ ವ್ಯಾಪ್ತಿಯ ರೈತರು ಬಿತ್ತನೆಗೆ ಸಜ್ಜಾಗಿದ್ದಾರೆ. ಹಾಗಾದರೆ ಬೀಜ, ಗೊಬ್ಬರ ಖರೀದಿ, ಯಾವೆಲ್ಲ ಬೆಳೆ ಜಿಲ್ಲೆಯಲ್ಲಿ ಎಷ್ಟು ಹೆಕ್ಟರ್ ಬಿತ್ತನೆ ಆಗಲಿವೆ ಎಂಬ ಮಾಹಿತಿ, ಅಂಕಿ ಸಂಖ್ಯೆ ತಿಳಿಯಿರಿ.
ಧಾರವಾಡ ಜಿಲ್ಲೆಯಲ್ಲಿ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಮುಂಗಾರು ಹಂಗಾಮಿಗೂ ಮುನ್ನ ಬಿದ್ದ ಮಳೆಯಿಂದ ರೈತರ ಬಲು ಖುಷಿಯಾಗಿದ್ದಾರೆ. ಹೊಲ ಹದ ಮಾಡುವುದು ಸೇರಿದಂತೆ ಕೃಷಿ ಚಟುವಟಿಕೆ ಬಿರುಸಿನಿಂದ ಶುರುವಾಗಿದೆ.

ಜಿಲ್ಲೆಯಲ್ಲಿ ಏಪ್ರಿಲ್‌ನಿಂದ ಮೇವರೆಗೆ ಆಗಬೇಕಿದ್ದ ಪೂರ್ವ ಮುಂಗಾರು ಮಳೆಯು ವಾಡಿಕೆ (91.9 ಮಿ.ಮೀ)ಗಿಂತ ಅಧಿಕ ಪ್ರಮಾಣ (120.1 ಮಿ.ಮೀ) ದಲ್ಲಿ ಆಗಿದೆ. ಇದರಿಂದ ಈ ಬಾರಿ ಉತ್ತಮ ಮಳೆಯಾಗಿ ಒಳ್ಳೆ ಫಸಲು ಸಿಗಬಹುದು ಎಂದು ರೈತರ ಹರ್ಷದಲ್ಲಿದ್ದಾರೆ.
ಈ ವರ್ಷದ ಬಿತ್ತನೆ ಮಾಹಿತಿ
ಜಿಲ್ಲೆಯಲ್ಲಿ ಒಟ್ಟು 2,70,840 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಮೇ ಅಂತ್ಯದಲ್ಲಿ ಬಿತ್ತನೆ ಸಹ ಆರಂಭವಾಗಲಿದೆ. ಬಿತ್ತನೆಗೆ ಅಗತ್ಯವಿರುವಷ್ಟು ಬೀಜ, ರಸಗೊಬ್ಬರ ಮತ್ತು ಇತರ ಸಾಮಗ್ರಿಗಳನ್ನು ಖರೀದಿಸಲು ರೈತರು ಮುಂದಾಗುತ್ತಿದ್ದಾರೆ.
ಜೂನ್ ಮೊದಲ ವಾರದಲ್ಲಿ ಅಧಿಕೃತವಾಗಿ ಮುಂಗಾರು ಪ್ರವೇಶಿಸುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಪ್ರಮುಖ ಬೆಳೆಗಳಾದ ಹೆಸರು (67,150 ಹೆ), ಹತ್ತಿ (59,000), ಮುಸುಕಿನ ಜೋಳ (57,175), ಸೋಯಾ ಅವರೆ (33,100) ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯಲಾಗುತ್ತದೆ. ಈಗಾಗಲೇ ಉತ್ತಮ ಮಳೆ ಬಿದ್ದಿರುವ ಹಿನ್ನೆಲೆಯಲ್ಲಿ 5262 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಬಿತ್ತನೆಗೆ ಅಗತ್ಯವಿರುವ ಬೀಜಗಳ 'ದಾಸ್ತಾನು ಸಹ ಮಾಡಲಾಗಿದೆ.

ಬಿತ್ತನೆ ಬೀಜ ದಾಸ್ತಾನು: ರೈತರಿಗೆ ಚಿಂತೆ ಇಲ್ಲ
ಮುಂಗಾರು ಹಂಗಾಮಿನಲ್ಲಿ ಸಹಾಯಧನದಲ್ಲಿ 20,681 ಕ್ವಿಂಟಲ್ ಗಳಷ್ಟು ವಿವಿಧ ಬೆಳೆಗಳ ಬಿತ್ತನೆ ಬೀಜ ವಿತರಣೆ ಬೇಡಿಕೆ ಇದ್ದು, ಈಗಾಗಲೇ 23,779 ಕ್ವಿಂಟಲ್ ಬಿತ್ತನೆ ಬೀಜ ಲಭ್ಯವಿದೆ. ಪ್ರಮುಖ ಬೆಳೆಗಳಾದ ಸೋಯಾ ಅವರೆ -5,230 ಕ್ವಿಂಟಲ್, ಮೆಕ್ಕೆಜೋಳ- 1050 ಕ್ವಿಂಟಲ್, ಶೇಂಗಾ- 732 ಕ್ವಿಂಟಲ್, ಹೆಸರು- 662 ಕ್ವಿಂಟಲ್, ಉದ್ದು- 246 ಕ್ವಿಂಟಲ್ ಹಾಗೂ ಭತ್ತ- 140 ಕ್ವಿಂಟಲ್ ಸೇರಿ ಒಟ್ಟು 8086 ಕ್ವಿಂಟಲ್ ಬಿತ್ತನೆ ಬೀಜಗಳ ದಾಸ್ತಾನು ಮಾಡಲಾಗಿದೆ. ವಿತರಣಾ ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆ ಸಹ ಆರಂಭಿಸಲಾಗಿದೆ.
ಮುಂಗಾರು ಹಂಗಾಮಿನಲ್ಲಿ ಯೂರಿಯಾ 23,936 ಮೆ.ಟನ್, ಡಿಎಪಿ 18,613, 14,095 ಸೇರಿದಂತೆ ಸೇರಿದಂತೆ ಒಟ್ಟು 60,164 ಮೆ. ಟನ್ ರಸಗೊಬ್ಬರದ ಅಗತ್ಯವಿದೆ. ಬೇಡಿಕೆಗೆ ತಕ್ಕಂತೆ ಗೊಬ್ಬರ ಪೂರೈಸಲು ಈಗಾಗಲೇ ಅಗತ್ಯ ಕ್ರಮ ವಹಿಸಲಾಗಿದೆ.
ಅಗತ್ಯದಷ್ಟಿದೆ ರಸಗೊಬ್ಬರ ದಾಸ್ತಾನು
ಇನ್ನು ಇದರ ಜೊತೆಗೆ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 56,243 ಮೆಟ್ರಿಕ್ ಟನ್‌ನಷ್ಟು ವಿವಿಧ ಗ್ರೇಡ್‌ಗಳ ರಸಗೊಬ್ಬರಗಳ ಅವಶ್ಯಕತೆ ಇದ್ದು, ಮೇ ಅತ್ಯಂಕ್ಕೆ 16,749 ಮೆಟ್ರಿಕ್ ಟನ್ ದಾಸ್ತಾನು . - 6478.66 . ರಸಗೊಬ್ಬರದ ಬೇಡಿಕೆ ಇದೆ. ಈ ಪೈಕಿ ಈಗಾಗಲೇ ಮೇ 24ರವರೆಗೆ 8-7588 2, 207, ಕಾಂಪ್ಲೆಕ್ಸ್ -1632, ಎಸ್‌ಎಸ್‌ಪಿ -142 ಮೆ.ಟನ್ ಸೇರಿ ಒಟ್ಟು 14,321 ಮೆಟ್ರಿಕ್ ಟನ್ ರಸಗೊಬ್ಬರ ವಿತರಿಸಲಾಗಿದೆ.
ಅಲ್ಲದೆ ಚಿಲ್ಲರೆ ಮತ್ತು ಸಗಟು ಮಾರಾಟ ಮಳಿಗೆಗಳಲ್ಲಿ 10,444.37 ಮೆ.ಟನ್, ಕಾಪು ದಾಸ್ತಾನಾಗಿ 3744.50 ಮೆ.ಟನ್, ವೇರ್ ಹೌಸ್ ದಾಸ್ತಾನಾಗಿ 12,343.90 ಮೆ.ಟನ್ ಹಾಗೂ ಸಾಗಾಣಿಕೆ ಮತ್ತು ಮಿಶ್ರಣ ಘಟಕಗಳಲ್ಲಿರುವ ದಾಸ್ತಾನು ಸೇರಿ ಯೂರಿಯಾ- 10,272, ಡಿಎಪಿ- 4,118 ಸೇರಿದ0ತೆ ಒಟ್ಟು 29,507.39 ಮೆಟ್ರಿಕ್ ಟನ್ ದಷ್ಟು ರಸಗೊಬ್ಬರ ಜಿಲ್ಲೆಯಲ್ಲಿ ದಾಸ್ತಾನು ಮಾಡಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications