ಧಾರವಾಡ; ಸೈಕಲ್ ಏರಿ ನಗದ ಪ್ರದಕ್ಷಿಣೆ ಮಾಡಿದ ಡಿಸಿ, ಆಯುಕ್ತರು
ಧಾರವಾಡ, ಜನವರಿ 25; ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಮಂಗಳವಾರ ಸೈಕಲ್ ಏರಿ ನಗರ ಪ್ರದಕ್ಷಿಣೆ ಮಾಡಿದರು. ನಗರದ ವಿವಿಧ ಭಾಗಗಳಿಗೆ ಭೇಟಿ ನೀಡಿದರು, ಪೌರ ಕಾರ್ಮಿಕರ ಜೊತೆ ಚರ್ಚೆ ನಡೆಸಿದರು.
ಸ್ವಚ್ಛ ಭಾರತ ಸ್ವಚ್ಛ ಸರ್ವೇಕ್ಷಣ ಅಭಿಯಾನ-2022ರ ಅಂಗವಾಗಿ ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆಯ ಆಯುಕ್ತರು ಸೈಕಲ್ ಏರಿ ಧಾರವಾಡ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದರು.
ಅಧಿಕಾರಿಗಳು ಸೈಕಲ್ ಮೂಲಕ ಧಾರವಾಡ ಸೂಪರ್ ಮಾರುಕಟ್ಟೆ, ಆಜಾದ್ ಪಾರ್ಕ್‌ಗೆ ಭೇಟಿ ನೀಡಿದರು. ಸಿಬಿಟಿ, ವಿವೇಕಾನಂದ ಸರ್ಕಲ್, ಟಿಕಾರೆ ರಸ್ತೆ ಮೂಲಕ ಲೈನ್ ಬಜಾರ್ ಪ್ರದೇಶಕ್ಕೆ ತೆರಳಿದರು. ಹನುಮಂತ ದೇವಸ್ಥಾನದ ಹತ್ತಿರದಲ್ಲಿ ಗುರುತಿಸಿದ್ದ ಬ್ಲಾಕ್‍ಸ್ಟಾಟ್ ಸ್ಥಳಕ್ಕೆ ಭೇಟಿ ನೀಡಿ, ಸ್ವಚ್ಛತೆ ಬಗ್ಗೆ ಪರಿಶೀಲಿಸಿದರು.
ನಗರದ ಖಾಲಿ ಸೈಟ್ ಮತ್ತು ಅನಗತ್ಯವಾಗಿ ಕಸ ಹಾಕುವ ಪ್ರದೇಶಗಳನ್ನು ಕಪ್ಪು ಪ್ರದೇಶಗಳೆಂದು ಗುರುತಿಸಿ ಸ್ವಚ್ಚಗೊಳಿಸಲು ಸೂಚಿಸಲಾಗಿದೆ ಮತ್ತು ಅಂತಹ ಸ್ಥಳಗಳಲ್ಲಿ ಕಸ ಚೆಲ್ಲುತ್ತಿದ್ದ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಿ 5,000 ರೂ. ದಂಡವನ್ನು ಸಹ ವಿಧಿಸಲಾಗಿದೆ. ಮಹಾನಗರ ಸ್ವಚ್ಛತೆಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಪಾಲಿಕೆ ಆಯುಕ್ತರು ಕರೆ ನೀಡಿದರು.

ಪೌರ ಕಾರ್ಮಿಕರೊಂದಿಗೆ ಚಹಾ ಸೇವನೆ
ಜಿಲ್ಲಾಧಿಕಾರಿಗಳು ಮತ್ತು ಪಾಲಿಕೆ ಆಯುಕ್ತರು ಸುಭಾಷ್ ರಸ್ತೆಯ ಕಾಮತ್ ಹೋಟೆಲ್ ವೃತ್ತದಲ್ಲಿ ಪೌರ ಕಾರ್ಮಿಕರೊಂದಿಗೆ ಚಹಾ ಸೇವಿಸಿ ಅವರ ಕುಂದು ಕೊರತೆ ಆಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, "ಸ್ವಚ್ಛ ಭಾರತ ಸ್ವಚ್ಛ ಸರ್ವೇಕ್ಷಣಾ ಅಭಿಯಾನದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯು ಅತ್ಯುತ್ತಮ ಸಾಧನೆ ಮಾಡಿ ಕಳೆದ ಸಾಲಿನಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದೆ. ಪ್ರಸಕ್ತ ಸಾಲಿಗೆ ಇನ್ನು ಹೆಚ್ಚಿನ ಸ್ವಚ್ಛತೆ, ಸಾಧನೆ ಮೂಲಕ ಪ್ರಶಸ್ತಿ ಗಳಿಸುವ ಹಾಗೂ ಮಹಾನಗರದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲು ಪೌರ ಕಾರ್ಮಿಕರು ಸೇರಿದಂತೆ, ಪಾಲಿಕೆಯ ಪ್ರತಿ ಸಿಬ್ಬಂದಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು" ಎಂದರು.

ಬ್ಲಾಕ್ ಸ್ಪಾಟ್ ಸ್ವಚ್ಛಗೊಳಿಸಲಾಗಿದೆ
ಮಹಾನಗರ ಪಾಲಿಕೆಯ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಮಾತನಾಡಿ, "ಖಾಲಿ ಇರುವ ಸೈಟ್ ಹಾಗೂ ಸರ್ಕಾರಿ ಸ್ಥಳಗಳಲ್ಲಿ ಕಸ ಹಾಕುವ ರೂಢಿಯಾಗಿದೆ. ಇಂತಹ ಸುಮಾರು 250 ಕ್ಕೂ ಹೆಚ್ಚು ಬ್ಲಾಕ್ ಸ್ಪಾಟ್ ಗುರುತಿಸಲಾಗಿದ್ದು, ಈಗಾಗಲೇ 100 ಕ್ಕೂ ಹೆಚ್ಚು ಬ್ಲಾಕ್‍ಸ್ಪಾಟ್ ಸ್ವಚ್ಚಗೊಳಿಸಲಾಗಿದೆ. ಇಲ್ಲಿ ಕಸ ಹಾಕದಂತೆ ನಿರ್ಬಂಧಿಸಲಾಗಿದೆ. ಈ ಕುರಿತು ಬ್ಯಾನಕರ್ ಆವಳಡಿಕೆ ಮಾಡಲಾಗಿದೆ" ಎಂದರು.
ಪೌರಕಾರ್ಮಿಕರ ಬೇಡಿಕೆಯಂತೆ ಅವರಿಗೆ ಪ್ರತಿದಿನ ಸರಬರಾಜು ಆಗುವ ಬೆಳಗಿನ ಉಪಾಹಾರ ನೀಡುವ ವ್ಯವಸ್ಥೆಯನ್ನು ವಿಕೇಂದ್ರೀಕರಿಸಿ, ಪೌರಕಾರ್ಮಿಕರು ಕೆಲಸ ನಿರ್ವಹಿಸುವ ಸ್ಥಳದ ಹತ್ತಿರವಿರುವ ಕ್ಯಾಂಟೀನ್ ಅಥವಾ ಹೋಟೆಲ್ ಅಥವಾ ಉಪಾಹಾರ ಸರಬರಾಜು ಮಾಡುವವರಿಂದ ಪೂರೈಸುವ ಕುರಿತು ಪರಿಶೀಲಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಇಂದಿರಾ ಕ್ಯಾಂಟಿನ್‌ನಲ್ಲಿ ಉಪಾಹಾರ ಸೇವನೆ
ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರು, ಜಂಟಿ ಆಯುಕ್ತರು ನಗರ ಪ್ರದಕ್ಷಣೆ ನಂತರ ಕೋರ್ಟ್ ಸರ್ಕಲ್ ಮೂಲಕ ಮಿನಿವಿಧಾನಸೌಧ ಮುಂಭಾಗದಲ್ಲಿರುವ ಇಂದಿರಾ ಕ್ಯಾಂಟಿನ್‍ಗೆ ಆಗಮಿಸಿ ಕ್ಯಾಂಟಿನ್‍ನಿಂದ ಸಾರ್ವಜನಿಕರಿಗೆ ನೀಡುತ್ತಿರುವ ಆಹಾರದ ಗುಣಮಟ್ಟ, ಸರಬರಾಜು, ಕ್ಯಾಂಟಿನ್ ಸ್ವಚ್ಛತೆ ಕುರಿತು ಪರಿಶೀಲಿಸಿದರು. ಬಳಿಕ ಮೂವರು ಅಧಿಕಾರಿಗಳು ಇಂದಿರಾ ಕ್ಯಾಂಟಿನ್‍ದಲ್ಲಿ ಇಡ್ಲಿ, ಪಲಾವ್ ಸೇವಿಸಿದರು.

ಸೂಪರ್ ಮಾರುಕಟ್ಟೆಗೆ ಭೇಟಿ
ಜಿಲ್ಲಾಧಿಕಾರಿ ಮತ್ತು ಪಾಲಿಕೆಯ ಆಯುಕ್ತರು ಧಾರವಾಡ ಸೂಪರ್ ಮಾರುಕಟ್ಟೆಗೆ ಭೇಟಿ ನೀಡಿ, ಪರಿಶೀಲಿಸಿದರು. ಮಾರುಕಟ್ಟೆ ಪ್ರದೇಶದಲ್ಲಿ ರಸ್ತೆ ಅತಿಕ್ರಮಿಸಿ ನಿರ್ಮಿಸಿರುವ ಅನಧಿಕೃತ ಕಟ್ಟಡ, ಗೂಡಂಗಡಿ ತೆರವುಗೊಳಿಸುವ ಕುರಿತು ಪರಿಶೀಲಿಸಿದರು. ಹಣ್ಣು, ಹೂವು ಮುಂತಾದ ವ್ಯಾಪಾರ ಮಾಡುವ ಬೀದಿ ಬದಿ ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವುದು, ಅವರಿಗೆ ಸುಸಜ್ಜಿತ ಸ್ಥಳಾವಕಾಶ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ನಿರ್ಮಿಸುವ ಕುರಿತು ಕ್ರಮ ಕೈಗೊಳ್ಳಲು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications