Dharwad Train: ಕ್ಷಮೆ ಕೋರಲು ರೈಲ್ವೆ ಅಧಿಕಾರಿಗೆ ಗ್ರಾಹಕರ ಆಯೋಗ ಆದೇಶ: ಏಕೆ? ಕಾರಣ ತಿಳಿಯಿರಿ
ಹುಬ್ಬಳ್ಳಿ, ಮಾರ್ಚ್ 11: ಜರ್ಮನಿ ದೇಶದಲ್ಲಿ ನೆಲೆಸಿರುವ ಧಾರವಾಡ ಮೂಲದ ವ್ಯಕ್ತಿಯೊಬ್ಬರು ನೀಡಿರುವ ದೂರಿನ ಮೇರೆಗೆ ಜಿಲ್ಲಾ ಗ್ರಾಹಕರ ಆಯೋಗ ರೈಲ್ವೆ ಅಧಿಕಾರಿಗೆ ಅವರ ಬಳಿ ಕ್ಷಮೆ ಕೋರುವಂತೆ ಸೂಚಿಸಿದೆ.
ಧಾರವಾಡ ನಗರದ ಮಾಳಮಡ್ಡಿ ನಿವಾಸಿ ಪ್ರಕಾಶ್ ಉಪ್ಪಾರ ಎಂಬುವವರು ಜರ್ಮನಿಯಲ್ಲಿ ನೆಲೆಸಿದ್ದರು. ಅವರು ಇತ್ತೀಚೆಗೆ ಭಾರತಕ್ಕೆ (ಧಾರವಾಡಕ್ಕೆ) ಬಂದಿದ್ದರು. ಈ ವೇಳೆ ಅವರು ಭಾರತೀಯ ರೈಲ್ವೆಯಲ್ಲಿ ಪ್ರಯಾಣ ಮಾಡಿದ ಬಳಿಕ ಕೆಲವು ಸಮಸ್ಯೆಗಳನ್ನು ಎದುರಿಸಿದ್ದರಿಂದ ಅವರು ಜಿಲ್ಲಾ ಗ್ರಾಹಕರ ಆಯೋಗದ ಮೊರೆ ಹೋಗಿದ್ದರು. ಪರಿಣಾಮ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಆಯೋಗ ಬೇಷರತ್ ಕ್ಷಮೆ ಕೇಳುವಂತೆ ಖಡಕ್ ಸೂಚನೆ ನೀಡಿದೆ. ಹಾಗಾದರೆ ಆಗಿದ್ದೇನು? ಘಟನೆ ಎಂಬ ಮಾಹಿತಿ ಇಲ್ಲಿದೆ.

ಧಾರವಾಡದಿಂದ ಮುಂಬೈಗೆ ಟಿಕೆಟ್ ಬುಕ್
ಸಂಬಂಧಿಕರ ಮದುವೆ ಪ್ರಯುಕ್ತ ಜರ್ಮನಿಯಿಂದ ಬಂದ ಪ್ರಕಾಶ್ ಉಪ್ಪಾರ ಅವರು ಎಲ್ಲ ಕಾರ್ಯಕ್ರಮ ಮುಗಿಸಿ ಧಾರವಾಡದಿಂದ ಮುಂಬೈಗೆ ತೆರಳಬೇಕಿತ್ತು. ಮುಂಬೈನಿಂದ ಅವರು ವಿಮಾನದ ಮುಖೇನ ಜರ್ಮನಿಗೆ ತೆರಳಬೇಕಿತ್ತು. ಹೀಗಾಗಿ ಧಾರವಾಡದಿಂದ ರೈಲು ಟಿಕೆಟ್ ಕಾಯ್ದರಿಸಿದ್ದರು.
ರೈಲು ಗಾಡಿ ಸಂಖ್ಯೆ 17317 ರಲ್ಲಿ 3ನೇ ಎಸಿ ಬುಕ್ ಮಾಡಿಸಿದ್ದರು. ಆದರೆ ರೈಲು ನಿಗದಿತ ವೇಳೆಗಿಂತ 4 ಗಂಟೆ ತಡವಾಗಿ ಮುಂಬೈನ ದಾದರ್ ರೇಲು ನಿಲ್ದಾಣ ತಲುಪಿತ್ತು. ನಾಲ್ಕು ಗಂಟೆಗಳ ಕಾಲ ರೈಲು ವಿಳಂಬದಿಂದ ಉಂಟಾಗಿದ್ದರಿಂದ ಪ್ರಯಾಣಿಕರು ಹಲವು ಸಮಸ್ಯೆಗಳನ್ನು ಎದುರಿಸಬೇಕಾಯಿತು.
ಮಾನಸಿಕ ಕಿರಿಕರಿ ಅನುಭವಿಸದ್ದ ಪ್ರಯಾಣಿಕ
ತಡವಾಗಿ ಬಂದ ಪ್ರಯಾಣಿಕರಿಗೆ ಅಲ್ಲಿ ವಿಮಾನ ನಿಲ್ದಾಣದ ಒಳಗಡೆ ಹೋಗಲು ಅನಾನುಕೂಲವಾಯಿತು. ಇದರಿಂದ ಅವರು ಮಾನಸಿಕ ಕಿರಿಕಿರಿ ಉಂಟಾಗಿತ್ತು. ಕೊನೆಗೆ ವಿಮಾನ ಹೊರಡುವ ಕೆಲವೇ ಕ್ಷಣಗಳಲ್ಲಿ ವಿಮಾನ ನಿಲ್ದಾಣದ ಸಿಬ್ಬಂದಿಗಳನ್ನು ವಿನಂತಿಸಿದ ದೂರುದಾರ ಜರ್ಮನಿಗೆ ತನ್ನ ಪ್ರಯಾಣ ಬೆಳೆಸಿದ್ದರು.
ಅಲ್ಲದೇ ದೂರುದಾರನಿಗೆ ಲಗೇಜುಗಳನ್ನು ಆತ ಜರ್ಮನಿ ತಲುಪಿದ 2 ದಿನಗಳ ನಂತರ ತಡವಾಗಿ ಬೇರೆ ವಿಮಾನ ಮೂಲಕ ಕಳುಹಿಸಿ ಕೊಟ್ಟಿದ್ದರು. ಇದೆಲ್ಲ ಆಗಿದ್ದು ರೈಲ್ವೆ ತಡವಾಗಿ ಮುಂಬೈ ತಲುಪಿದ್ದೆ ಕಾರಣವಾಗಿತ್ತು.

2023 ಏಪ್ರಿಲ್ ನಲ್ಲಿ ದೂರು ದಾಖಲು
ಗೂಗಾಗಿ ಪ್ರಯಾಣಿಕ ಪ್ರಕಾಶ್, ರೈಲ್ವೆ ಇಲಾಖೆಯವರ ಈ ರೀತಿಯ ವಿಳಂಬ ಧೋರಣೆಯಿಂದ ತಾನು ಮಾನಸಿಕ ಕಿರಿಕಿರಿ ಅನುಭವಿಸುವಂತಾಯಿತು. ಕಾರಣ ರೇಲ್ವೆ ಇಲಾಖೆಯವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೇವಾ ನ್ಯೂನತೆ ಆಗುತ್ತದೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ 2023 ಏಪ್ರಿಲ್ ರ 26 ರಂದು ಈ ದೂರನ್ನು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಸಲ್ಲಿಸಲಾಗಿತ್ತು.
ರೈಲ್ವೆ ಇಲಾಖೆ ವಾದವೇನು?
ದೂರಿಗೆ ಆಕ್ಷೇಪಣೆ ಸಲ್ಲಿಸಿದ ರೆಲ್ವೆ ಇಲಾಖೆ, ದೇಶದಲ್ಲಿ ಸಂಚರಿಸುವ ಯಾವುದೇ ರೈಲುಗಳ ಆಗಮನ-ನಿರ್ಗಮನದ ಗ್ಯಾರಂಟಿ ಕೊಡಲ್ಲ. ಇದಲ್ಲದೇ ರೇಲ್ವೆ ಇಲಾಖೆ ಮತ್ತು ವಿಮಾನ ನಿಲ್ದಾಣದ ಪ್ರಾಧಿಕಾರದ ಮಧ್ಯೆ ಯಾವುದೇ ಒಪ್ಪಂದ ಇರುವುದಿಲ್ಲ. ಅಷ್ಟಕ್ಕೂ ದೂರುದಾರ ಸಂಚರಿಸುತ್ತಿದ್ದ ರೈಲು ನಂಬರ್ 17317 ತಾಂತ್ರಿಕ ಕಾರಣಗಳಿಂದ 4 ಗಂಟೆ ವಿಳಂಬವಾಗಿ ಮುಂಬೈ ತಲುಪಿತ್ತು ಎಂದು ತಿಳಿಸಿದ್ದರು.
ಅದರಲ್ಲಿ ರೇಲ್ವೆ ಇಲಾಖೆ ಯಾವುದೇ ಸೇವಾ ನ್ಯೂನತೆ ಎಸಗಿರುವುದಿಲ್ಲ ಎಂದು ವಾದ ಮಂಡಿಸಿತ್ತು. ಈ ದೂರು- ಆಕ್ಷೇಪಣೆ ವಿಚಾರಣೆ ಕೈಗೊಂಡ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ, ಪ್ರಭು ಹಿರೇಮಠ ಒಳಗೊಂಡ ಆಯೋಗ, ರೈಲು ನಿಗದಿತ ವೇಳೆಗೆ ಮುಂಬೈ ತಲುಪದೇ ಇದ್ದರೂ ಸಹ ದೂರುದಾರ ತಾನು ಪ್ರಯಾಣಿಸುವ ವಿಮಾನ ಮೂಲಕ ವಿದೇಶ ಪ್ರಯಾಣ ಬೆಳೆಸುವಲ್ಲಿ ಸಫಲನಾಗಿದ್ದಾನೆ.
ದೂರು ವಜಾ, ಕ್ಷಮೆಗೆ ಸೂಚನೆ
ಆದರೆ ರೈಲು ವಿಳಂಬದಿಂದ ಆತ ವಿಮಾನ ನಿಲ್ದಾಣ ತಲುಪಲು ಅನಾನುಕೂಲ, ಮಾನಸಿಕ ಯಾತನೆ ಅನುಭವಿಸಿದ್ದರೂ ಸಹ ಎದುರುದಾರರು ಸೇವಾ ನ್ಯೂನತೆ ಎಸಗಿದ್ದಾರೆ ಅನ್ನುವುದನ್ನು ಒಪ್ಪಲಾಗಲ್ಲ ಎಂದು ಹೇಳಿದೆ. ಈ ಅಭಿಪ್ರಾಯಪಟ್ಟು ದೂರುದಾರನ ದೂರನ್ನು ವಜಾಗೊಳಿಸಿ ಆದೇಶ ನೀಡಿರುವುದರ ಜತೆಗೆ ರೈಲು ವಿಳಂಬಕ್ಕಾಗಿ ಸಂಬಂಧಿಸಿದ ರೇಲ್ವೆ ಅಧಿಕಾರಿಗೆ ದೂರುದಾರನಿಗೆ ಕ್ಷಮೆಯಾಚಿಸಲು ಗ್ರಾಹಕನ ಬಳಿ ಕ್ಷಮೆ ಕೋರುವಂತೆ ಜಿಲ್ಲಾ ಗ್ರಾಹಕರ ಆಯೋಗ ರೈಲ್ವೆ ಅಧಿಕಾರಿಗೆ ನಿರ್ದೇಶನ ನೀಡಿತು.












Click it and Unblock the Notifications