Dharwad: ಅಭಿವೃದ್ಧಿ ಆಧಾರದಲ್ಲಿ ಮತಯಾಚಿಸಿದ ಬಿಜೆಪಿ ಅಭ್ಯರ್ಥಿ ಅಮೃತ್ ದೇಸಾಯಿ
ಧಾರವಾಡ, ಮೇ 04: ಯಾದವಾಡ ಗ್ರಾಮಕ್ಕೆ ಏಳು ಕೋಟಿ ಅನುದಾನ ನೀಡುವ ಮೂಲಕ ಸಿಸಿ ರಸ್ತೆ, ಕುಡಿಯುವ ನೀರಿನ ಸರಬರಾಜು ಯೋಜನೆ ಹಾಗೂ ಎಲ್ಲ ಧಾರ್ಮಿಕ ಕೇಂದ್ರಗಳ ಸಮಗ್ರ ಅಭಿವೃದ್ಧಿ ಮಾಡಲಾಗಿದೆ. ಮುಖ್ಯವಾಗಿ ಮಳೆಯಿಂದಾಗಿ ಹಾನಿಗೀಡಾದ ಮನೆ ಮಾಲೀಕರಿಗೆ ಪರಿಹಾರ ಕೊಡಿಸಲು ಪ್ರಮಾಣಿಕವಾಗಿ ಶ್ರಮಿಸಿದ್ದೇನೆ ಎಂದು ಧಾರವಾಡ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಅಮೃತ್ ದೇಸಾಯಿ ತಿಳಿಸಿದರು.
ಧಾರವಾಡ ತಾಲೂಕು ವ್ಯಾಪ್ತಿಯಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ಅಮೃತ್ ದೇಸಾಯಿಯವರು ಪ್ರಮುಖ ರಸ್ತೆಗಳಲ್ಲಿ ಮತ್ತು ಮನೆ ಮನೆ ತೆರಳು ಮತಯಾಚನೆ ಮಾಡಿದೆ. ಈ ವೇಳೆ ಸಾರ್ವಜನಿಕ ಸಭೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಳೆಯಿಂದ ಉಂಟಾದ ಅತಿವೃಷ್ಠಿಗೆ ತಾಲೂಕು ವ್ಯಾಪ್ತಿಯಲ್ಲಿ ಸುಮಾರು 3500 ಮನೆಗಳಿಗೆ ನಷ್ಟವಾಗಿತ್ತು. ಮನೆ ಮಾಲೀಕರಿಗೆಲ್ಲ ಸುಮಾರು 5 ಲಕ್ಷ ವರೆಗೆ ಪರಿಹಾರ ಕೊಡಿಸುವಲ್ಲಿ ಶ್ರಮಿಸಿದ್ದೇನೆ.

ಶೀಘ್ರವೇ ಕಾಮಗಾರಿ ಆರಂಭ: ಇನ್ನೂ ಧಾರವಾಡ ಭಾಗದ ರೈತರ ಬಹು ವರ್ಷಗಳ ಬೇಡಿಕೆಯಾದ ತುಪ್ಪರಿಹಳ್ಳ ಯೋಜನೆಗೆ ಅನುದಾನ ಸಹ ಬಿಡುಗಡೆ ಮಾಡಿಸಲಾಗಿದ್ದು. ಈ ಸಂಬಂಧ ಸರ್ಕಾರದೊಂದಿಗೆ ಸಾಕಷ್ಟು ಚರ್ಚಿಸಿ ಇಲ್ಲಿನ ರೈತರ ಸಮಸ್ಯೆ ಗಮನಕ್ಕೆ ತಂದು ಯೋಜನೆಗೆ ಒಪ್ಪಿಗೆ ಪಡೆಯಲಾಯಿತು. ಆದಷ್ಟು ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದು ಅವರು ಭರವಸೆ ನೀಡಿದರು.
ಅಲ್ಲದೇ ಇದುವರೆಗೆ ನನಗೆ ಸಿಕ್ಕ ಅಧಿಕಾರವನ್ನು ಕ್ಷೇತ್ರದ ಅಭಿವೃದ್ಧಿ ವ್ಯಯಿಸಿದ್ದೇನೆ. ಯಾದವಾಡ ಗ್ರಾಮಕ್ಕೆ ಏಳು ಕೋಟಿ ಅನುದಾನ ನೀಡುವ ಮೂಲಕ ಸಿಸಿ ರಸ್ತೆ, ಕುಡಿಯುವ ನೀರಿನ ಸರಬರಾಜು ಯೋಜನೆ ಹಾಗೂ ಎಲ್ಲ ಧಾರ್ಮಿಕ ಕೇಂದ್ರಗಳ ಸಮಗ್ರ ಅಭಿವೃದ್ಧಿಗೊಳಿಸಲಾಗಿದೆ ಎಂದು ಅವರು ವಿವರಿಸಿದರು.

ರೋಡ್ ವೇಳೆ ಅಮೃತ್ ದೇಸಾಯಿಗೆ ಸಾಥ್
ಅಮೃತ ದೇಸಾಯಿ ಅವರ ರೋಡ್ ಶೋ ಗುರುವಾರ ಬೆಳಗ್ಗೆ ಧಾರವಾಡ ತಾಲೂಕಿನ ಲಕಮಾಪುರ, ಯಾದವಾಡ, ಕಲ್ಲೂರು, ಕೊಟಬಾಗಿ ಗ್ರಾಮದ ಮಾರ್ಗವಾಗಿ ಸಂಚರಿಸಿತು. ಈ ಭಾಗದಲ್ಲೆಲ್ಲಾ ಬಿಜೆಪಿ ಸ್ಥಳಿಯ ಕಾರ್ಯಕರ್ತರು ಹಾಗೂ ಬಿಜೆಪಿ ಅಭಿಮಾನಿಗಳು ಹೂವಿನ ಸುರಿಮಳೆಗೈಯ್ಯುವ ಮೂಲಕ ಕಣಕ್ಕಿಳಿದಿರುವ ತಮ್ಮ ನಾಯಕನನ್ನು ಬರಮಾಡಿಕೊಂಡರು.
ಅಮೃತ್ ದೇಸಾಯಿ ಅವರಿಗೆ ಮಾಜಿ ಶಾಸಕಿ ಸೀಮಾ ಮಸೂತಿ, ಸವಿತಾ ಅಮರಶೆಟ್ಟಿ, ಗುರುನಾಥಗೌಡ ಗೌಡರ, ಗಂಗಾಧರ ಪಾಟೀಲ ಕುಲಕರ್ಣಿ, ಶಶಿಮೌಳಿ ಕುಲಕರ್ಣಿ, ಪರಮೇಶ್ವರ ಕೊಯಪ್ಪನವರ, ಶಿವಾನಂದ ಬೆಂಡಿಗೇರಿ, ಮಹಾಂತೇಶ ಗಳಗಿ, ಮುತ್ತು ಹಿರೇಮಠ ಸೇರಿದಂತೆ ಅನೇಕರು ಸಾಥ್ ನೀಡಿದರು.
ಇನ್ನು ಇದೇ ವೇಳೆ ವಿಜಯಮಾನೆ ಹಾಗೂ ಈರಣ್ಣ ಕಲಾಲ್ ಸೇರಿದಂತೆ ಅನೇಕರು ಬಿಜೆಪಿಗೆ ಸೇರ್ಪಡೆಯಾದರು. ವಾರ್ಡ್ ನಂಬರ್ 3ರಲ್ಲಿ ಸ್ಥಳೀಯ ಮುಖಂಡರು ಕಾರ್ಯಕರ್ತರ ಸಭೆ ನಡೆಸುವ ಮೂಲಕ ಮತಯಾಚನೆ ಮಾಡಿದರು. ಪ್ರಿಯಾ ಅಮೃತ್ ದೇಸಾಯಿಯವರು ಗುರುವಾರ ಹೆಬ್ಬಳ್ಳಿ ಗ್ರಾಮದಲ್ಲಿ ಪ್ರಚಾರ ಕೈಗೊಂಡರು. ಅವರಿಗೆ ಶೃತಿ ಬೆಳ್ಳಕ್ಕಿ, ನಿರ್ಮಲಾ ಹಾವೇರಿ, ಸಾವಿತ್ರಿ ಹುಬ್ಬಳ್ಳಿ, ಮಹಾದೇವಿ ಸುರೇಬಾನ್, ರತ್ನವ್ವ ಸುಣಗಾರ, ಬಸವ್ವ ಹೆಬ್ಬಳ್ಳಿ, ರತ್ನಾ ಶಿರೂರ, ರೇಣುಕಾ ಅಸುಂಡಿ, ನಿರ್ಮಲಾ ಸಾಥ್ ನೀಡಿದರು.












Click it and Unblock the Notifications