ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತನ ಬಾಕಿ ಮೊತ್ತಕ್ಕೆ ವಿಳಂಬ: ಉಪವಿಭಾಗಾಧಿಕಾರಿ ಕಚೇರಿ ಜಪ್ತಿ

By Manjunatha
|
Google Oneindia Kannada News

ಧಾರವಾಡ, ಡಿಸೆಂಬರ್ 07 : ರೈತನ ಭೂಮಿ ಸ್ವಾದೀನ ಪಡಿಸಿಕೊಂಡು ಪರಿಹಾರ ನೀಡದ ಹಿನ್ನೆಲೆಯಲ್ಲಿ ಜಿಲ್ಲಾ ಸ್ಥಳೀಯ ನ್ಯಾಯಾಲಯವು ಉಪವಿಭಾಧಿಕಾರಿಗಳ ಕಚೇರಿ ಜಪ್ತಿ ಮಾಡುವಂತೆ ಮಹತ್ವದ ಆದೇಶ ನೀಡಿದೆ.

ತುಮಕೂರು ರೈತನಿಗೆ ಭಾರಿ ಅದೃಷ್ಟ ತಂದು ಕೊಟ್ಟ ಅಪ್ಪ ನೆಟ್ಟ ಹಲಸಿನ ಗಿಡತುಮಕೂರು ರೈತನಿಗೆ ಭಾರಿ ಅದೃಷ್ಟ ತಂದು ಕೊಟ್ಟ ಅಪ್ಪ ನೆಟ್ಟ ಹಲಸಿನ ಗಿಡ

ಧಾರವಾಡದ ರೈತ ಗುರುಪಾದಯ್ಯ ಯಡಳ್ಳಿಗೆ ಅವರ ಧಾರವಾಡ ತಾಲೂಕಿನ ಸುತಗಟ್ಟಿ ಗ್ರಾಮದಲ್ಲಿನ ಜಮೀನನ್ನು ಕರ್ನಾಟಕ ಗೃಹ ನಿರ್ಮಾಣ ಮಂಡಳಿಯು 1989-90ರಲ್ಲಿ ಸರ್ಕಾರಿ ನೌಕರರ ವಸತಿಗೃಹ ನಿರ್ಮಾಣಕ್ಕೆಂದು ವಶಪಡಿಸಿಕೊಂಡಿತ್ತು.

Court orders to seize sub division office for delaying compensation amount to farmer

ವಶಪಡಿಸಿಕೊಳ್ಳುವ ಸಮಯದಲ್ಲಿ ಗುಂಟೆಗೆ 9450 ಬೆಲೆ ನಿಗದಿ ಮಾಡಲಾಗಿತ್ತು, ಈ ಮೊತ್ತದಲ್ಲಿ ಸ್ವಲ್ಪ ಹಣ ನೀಡಿದ್ದ ಇಲಾಖೆ ಉಳಿದ ಹಣವನ್ನು ಬಾಕಿ ಉಳಿಸಿಕೊಂಡಿತ್ತು. ಅದು ಬಡ್ಡಿ ಸಹಿತ 12 ಲಕ್ಷ ಮೊತ್ತವಾಗಿತ್ತು.

ಸಾಲದ ಹೊರೆ ತಾಳಲಾರದೆ ಮೈಸೂರಿನಲ್ಲಿ ಇಬ್ಬರು ರೈತರು ಆತ್ಮಹತ್ಯೆಸಾಲದ ಹೊರೆ ತಾಳಲಾರದೆ ಮೈಸೂರಿನಲ್ಲಿ ಇಬ್ಬರು ರೈತರು ಆತ್ಮಹತ್ಯೆ

ಬಾಕಿ ಮೊತ್ತ ನೀಡುವಂತೆ ರೈತ ಗುರುಪಾದಯ್ಯ ಉಪವಿಭಾಗಾಧಿಕಾರಿ ಕಚೇರಿಗೆ ಅಲೆದು ಸುಸ್ತಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಕೂಡ ಗುರುಪಾದಯ್ಯ ಅವರ ಬಾಕಿ ಮೊತ್ತ ನೀಡುವಂತೆ ಆದೇಶ ನೀಡಿತ್ತು.

ಆದರೆ ಬಾಕಿ ನೀಡುವಿಕೆಯಲ್ಲಿ ತಡ ಮಾಡಿದ ಹಿನ್ನೆಲೆಯಲ್ಲಿ ಧಾರವಾಡದ ಎರಡನೇ ದಿವಾಣಿ ನ್ಯಾಯಾಲಯವು ಉಪವಿಭಾಗಾಧಿಕಾರಿ ಕಚೇರಿಯನ್ನು ಜಪ್ತಿ ಮಾಡುವಂತೆ ಆದೇಶ ಮಾಡಿದೆ.

ಈ ಹಿನ್ನೆಯಲ್ಲಿ ಉಪವಿಭಾಗಾಧಿಕಾರಿಗಳ ವಾಹನ, ಕಚೇರಿಯಲ್ಲಿನ ಕಂಪ್ಯೂಟರ್, ಪೀಠೋಪಕರಣಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ನ್ಯಾಯಾಲಯದ ಆದೇಶದಿಂದಾದರೂ ಎಚ್ಚೆತ್ತುಕೊಂಡು ರೈತನಿಗೆ ಬಾಕಿ ಪರಿಹಾರ ಮೊತ್ತ ನೀಡುತ್ತಾರೆನೋ ಕಾದು ನೋಡಬೇಕು.

English summary
Dharwad local Court orders to seize sub division office for delaying in giving compensation amount to farmer Gurupadayya Yadavalli whos land acquired by govt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X