ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅವಳಿ ನಗರದ ರಸ್ತೆ ಗಿಳಿಯಲಿವೆ ಮೆಟ್ರೋ ಮಾದರಿ ಬಸ್ ಗಳು

|
Google Oneindia Kannada News

ಧಾರವಾಡ, ಫೆಬ್ರವರಿ 10 : ಬಿ.ಆರ್.ಟಿ.ಎಸ್ ಕಾಮಗಾರಿ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದ್ದು, ಅವಳಿ ನಗರದ ಬಹು ದಿನಗಳ ಕನಸಿನ ಯೋಜನೆಯಾಗಿರುವ ನನಸಾಗುವ ಸಮಯ ಬಂದಿದೆ. ಮೆಟ್ರೋ ಮಾದರಿಯಲ್ಲಿ ಧಾರವಾಡದಲ್ಲಿ ಬಸ್ ಗಳು ರಸ್ತೆಗಿಳಿಯಲಿವೆ.

ಕಳೆದ ಮೂರು ವರ್ಷಗಳಿಂದ ಅವಳಿ ನಗರಕ್ಕೆ ಸುಗಮ ಹಾಗೂ ಉತ್ತಮ ಸಂಚಾರಕ್ಕೆ ಕೇಂದ್ರ ಸರ್ಕಾರ ಬಿಆರ್ ಟಿ ಎಸ್ ಯೋಜನೆಯನ್ನು ಮೂರು ವರ್ಷಗಳ ಹಿಂದೆ ಪ್ರಾರಂಭಿಸಿತ್ತು. ಇದು ಪ್ರಾರಂಭದಲ್ಲಿ ಸುಮಾರು 750 ಕೋಟಿ ವೆಚ್ಚದ ಯೋಜನೆಯಾಗಿದ್ದು. ಮುಂದುವರೆದು ಇದೀಗ, ಕಾಮಗಾರಿಯ ಅಂತಿಮ ಹಂತವು 900 ಕೋಟಿಗೆ ತಲುಪಿದೆ.

ಜನವರಿ ಅಂತ್ಯದಲ್ಲಿ ಬಿಆರ್ ಟಿಎಸ್ ಕಾಮಗಾರಿ ಅಂತ್ಯ: ದರ್ಪಣ್ ಜೈನ್ಜನವರಿ ಅಂತ್ಯದಲ್ಲಿ ಬಿಆರ್ ಟಿಎಸ್ ಕಾಮಗಾರಿ ಅಂತ್ಯ: ದರ್ಪಣ್ ಜೈನ್

ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಮಧ್ಯದ 20 ಕಿ.ಮೀ ದೂರದ ರಸ್ತೆ ಕಾಮಗಾಗಿ ನಡೆಯುತ್ತಿದ್ದು, ಇದು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಅವಳಿ ನಗರದ ಮಧ್ಯದಲ್ಲಿ ಒಟ್ಟು 130 ಬಸ್​ಗಳು ಸಂಚಾರ ಮಾಡಲಿದ್ದು, ಇವುಗಳಲ್ಲಿ 85 ಲಕ್ಷ ದ ಸ್ಟ್ಯಾಂಡರ್ಡ್ ಬಸ್​ 100 ಹಾಗೂ 1 ಕೋಟಿ 25 ಲಕ್ಷ ವೆಚ್ಚದ ಆರ್ಟಿಕ್ಯೂಲೆಟೆಡ್​ ವಿಶೇಷ ಬಸ್​ಗಳು 30 ಇವೆ. ಇವುಗಳು ಈ ಬಸ್ ಗಳು ಹಲವು ವಿಶೇಷತೆಗಳನ್ನು ಹೊಂದಿವೆ.

BRTS will complete by March end

ಪ್ರತಿಯೊಂದು ಬಸ್​ನಲ್ಲಿ 2 ಸಿಸಿ ಕ್ಯಾಮರಾ, ಪ್ರತಿಯೊಂದು ಬಸ್ ನಿಲ್ದಾಣದಲ್ಲಿ 4 ಸಿಸಿಟಿವಿ ಅಳವಡಿಸಲಾಗಿದೆ. ಅಲ್ಲದೇ ಪ್ರಯಾಣಿಕರ ಹಿತದೃಷ್ಟಿಯಿಂದ ಆಂಬುಲೆನ್ಸ್ ಮಾದರಿಯ ಸೈರನ್​ ಕೂಡಿಸಲಾಗಿದೆ. ಪೊಲೀಸ್ ವೈಯರ್ಲೆಸ್​​ ಹಾಕಲಾಗಿದ್ದು, ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ. ಇಂತಹ ವಿಶೇಷ ಸೌಲ್ಯಭವುಳ್ಳ ಬಸ್​ ಇನ್ನು ಮುಂದೆ ಹುಬ್ಬಳ್ಳಿ- ಧಾರವಾಡದಲ್ಲಿ ಸಂಚಾರ ಮಾಡಲಿವೆ.

ಸುಮಾರು 900 ಕೋಟಿ ಮೌಲ್ಯದ ಯೋಜನೆ ಈಗಾಗಲೇ ಅಂತಿಮ ಹಂತಕ್ಕೆ ಬಂದಿದ್ದು, ಮಾರ್ಚ್ ಅಂತ್ಯದೊಳಗೆ ಹುಬ್ಬಳ್ಳಿ- ಧಾರವಾಡ ಮಹಾನಗರ ಮತ್ತಷ್ಟು ತನ್ನ ಹಿರಿಮೆಯನ್ನು ಹೆಚ್ಚಿಸಿಕೊಳ್ಳಲಿದೆ.

English summary
Most awaited Hubballi Bus Road Transit system will be completed by the end of march this year. Around 130 buses will run between twin cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X