ಅಕ್ರಮ ಬಡ್ಡಿ ದಂಧೆಕೋರರ ಬಂಧನ: ವೇಶ್ಯಾವಾಟಿಕೆ ಮಾಡಿಸುವವರಿಂದಲೂ ಪೊಲೀಸರು ಹಣ ವಸೂಲಿ: ಅರವಿಂದ್ ಬೆಲ್ಲದ್
ಧಾರವಾಡ, ಆಗಸ್ಟ್ 22: ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮ ಬಡ್ಡಿ ವ್ಯವಹಾರದಲ್ಲಿ ತೊಡಗಿದವರನ್ನು ಪೊಲೀಸರು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಿದ್ದಾರೆ. ಮೀಟರ್ ಬಡ್ಡಿ ವ್ಯವಹಾರದಲ್ಲಿ ತೊಡಗಿದ್ದ ಒಟ್ಟು 25 ದಂಧೆಕೋರರನ್ನು ಬಂಧಿಸಲಾಗಿದೆ. ಈ ಕುರಿತು ಬಿಜೆಪಿ ಶಾಸಕರಾದ ಅರವಿಂದ್ ಬೆಲ್ಲದ್ ಸುದ್ದಿಗಾರರ ಮುಂದೆ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದಲ್ಲಿ ಎರಡು ರೀತಿಯ ಕ್ರೈಂಗಳನ್ನು ನಾವು ಕಾಣಬಹುದು. ಒಂದು ಹುಟ್ಟುತ್ತಲೇ ಅಪರಾಧ ಚಟುವಟಿಕೆಯಲ್ಲಿ ತೊಡಗಿಕೊಂಡು ಬಂದವರು. ಮತ್ತೊಂದು ಬಡ್ಡಿ ದಂಧೆ. ಈ ಬಡ್ಡಿ ದಂಧೆ ಮಾಡುವವರು ಪೈನಾನ್ಸ್ ಕಂಪನಿ ರಿಜಿಸ್ಟರ ಮಾಡಿಕ್ಕೊಳ್ಳಬೇಕಾಗುತ್ತದೆ. ಫೈನಾನ್ಸ್ ಕಂಪನಿಗಳಿಗೆ ಸರ್ಕಾರದಿಂದ ಇಂತಿಷ್ಟೆ ಬಡ್ಡಿ ವಸೂಲಿ ಮಾಡಬೇಕು ಎಂದು ನೀತಿ ನಿಯಮ ಇದೆ.

ಸಾಲ ಪಡೆದ ಕೆಲವರು ಕಾನೂನು ಬಾಹಿರ ಕೃತ್ಯ
ಆದರೆ ಅವಳಿ ನಗರದಲ್ಲಿ ಕಾನೂನು ಬಾಹೀರವಾಗಿ ಬಡ್ಡಿ ದಂಧೆ ಮಾಡುತ್ತಿದ್ದಾರೆ. ಅಲ್ಲದೇ ಕೆಲವು ಪೊಲೀಸರು ಈ ಬಡ್ಡಿ ದಂಧೇಕೋರರ ಜೊತೆಗೆ ಶಾಮೀಲಾಗಿದ್ದಾರೆ. ಧಂದೆಕೋರರು ಬಡ್ಡಿ, ಚಕ್ರ ಬಡ್ಡಿಯನ್ನು ಸುಲಿಗೆ ಮಾಡುತ್ತಿದ್ದಾರೆ. ಇವರ ಹಾವಳಿಯಿಂದಾಗಿ ಅನಿವಾರ್ಯ ಸಾಲ ಪಡೆದವರು ಕಳ್ಳತನಕ್ಕೆ ಇಳಿತ್ತಾರೆ.
ಇನ್ನು ಮುಂದೆ ಹೋಗಿ ಕೆಲವುರ ಜನರ ಮೇಲೆ ದಾಳಿ ಮಾಡುವ ಕೆಲಸ ಮಾಡುತ್ತಾರೆ. ಡ್ರಗ್ಸ್ ನಂತರ ಮಾಧಕ ವಸ್ತು ಸೇವಿಸಿ ಕೊಲೆ, ಸುಲುಗೆ ಮಾಡಲು ಯುವಕರು ಇಳಿಯುತ್ತಿದ್ದಾರೆ. ಆದ್ದರಿಂದ ಪೋಲಿಸ್ ಇಲಾಖೆ ಸಮರ್ಪಕವಾಗಿ ಕೆಲಸ ಮಾಡಬೇಕು.
ಇನ್ನೂ ಸರ್ಕಾರ ಪೋಲಿಸ್ ಇಲಾಖೆಯ ಅಧಿಕಾರಿಗಳಿಂದ ದುಡ್ಡು ತಗೆದುಕೊಂಡು ವರ್ಗಾವಣೆ ಮಾಡಿದರೆ. ಅಂತಹ ಪೊಲೀಸರು ಕಳ್ಳರು, ದಂಧೆಕೋರರ ಹಣ ಪಡೆದು ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುತ್ತಾರೆ. ಕಾನೂನು ವಿರುದ್ಧ ನಡೆಯುವವರು, ವೇಶ್ಯೆವಾಟಿಕೆ ಮಾಡುವವರಿಂದ ಕಡೆಯಿಂದ ಹಣ ವಸೂಲಿಗೆ ಇಳಿಯುತ್ತಾರೆ ಎಂದು ಅವರು ಆರೋಪಿಸಿದರು.

ಪೋಲಿಸ್ ಠಾಣೆಗಳಲ್ಲಿ ಜನ ವಿರೋಧಿ ಕೆಲಸಗಳು ಹೆಚ್ಷಾಗುತ್ತವೆ. ಇದಕ್ಕೆ ಕಾರಣ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆಯಲ್ಲಿ ದಂಧೆ ಮಾಡುತ್ತಿರುವುದೇ ಇದಕ್ಕೆಲ್ಲ ಪ್ರಮುಖ ಕಾರಣ ಎಂದು ಅವರು ರಾಜ್ಯ ಸರ್ಕಾರದ ವಿರುದ್ಧ ದೂರಿದರು.
ವರ್ಗಾವಣೆ ದಂಧೆ ಆರೋಪ ಎದುರಿಸಿದ್ದ ಸರ್ಕಾರ
ರಾಜ್ಯ ಸರ್ಕಾರ ಆಡಳಿತಕ್ಕೆ ಬಂದ ಹೊಸದರಲ್ಲಿ ವರ್ಗಾವಣೆಗೆ ಪೊಲೀಸರಿಂದ ಲಕ್ಷ ಲಕ್ಷ ಹಣ ಪಡೆಯಲಾಗುತ್ತಿದೆ. ಇದರಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಪುತ್ರ ಯತಿಂದ್ರ ಸಿದ್ದರಾಮಯ್ಯ ಅವರು ಶಾಮೀಲಾಗಿದ್ದಾರೆ ಎಂದು ವಿಪಕ್ಷಗಳು ಆರೋಪಿಸಿದ್ದವು. ಪೊಲೀಸ್ ವರ್ಗಾವಣೆ ದಂಧೆ ಕುರಿತು ಯತೀಂದ್ರ ಅವರು ಹಣಕ್ಕಾಗಿ ಮಾತನಾಡಿದ್ದಾರೆ ಎಂಬ ಆಡಿಯೋ ಮತ್ತು ವಿಡಿಯೋ ವೈರಲ್ ಆಗಿತ್ತು.
ಈ ವರ್ಗಾವಣೆ ದಂಧೆ ವಿರುದ್ಧ ಬಿಜೆಪಿ ಪಕ್ಷದ ನಾಯಕರು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದರು. ಇದೀಗ ಮುಡಾ ಹಗರಣ, ವಾಲ್ಮೀಕಿ ಹಗಣರಗಳ ಆರೋಪವನ್ನು ರಾಜ್ಯ ಸರ್ಕಾರ ಎದುರಿಸುತ್ತಿದೆ.












Click it and Unblock the Notifications