ಸೇನಾ ತರಬೇತಿ ಮುಗಿಸಿಬಂದ ಯುವತಿಯರಿಗೆ ಗ್ರಾಮಸ್ಥರಿಂದ ಹೂ ಮಳೆ ಸುರಿದು ಸ್ವಾಗತ..!
ಧಾರವಾಡ, ಮೇ.9: ಬಿಎಸ್‌ಎಫ್ ಸೈನಿಕ ತರಬೇತಿ ಸೇನೆಯಲ್ಲಿ ಕಠಿಣ ತರಬೇತಿ ಮುಗಿಸಿ ಗ್ರಾಮಕ್ಕೆ ವಾಪಸ್ಸಾದ ಯುವತಿಯರನ್ನ ಊರಿನ ಜನರೆಲ್ಲರೂ ಸೇರಿ ಹೂ ಮಳೆ ಸುರಿದು ಬರಮಾಡಿಕೊಂಡಂತಹ ಸಂತಸ ಕ್ಷಣಗಳು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ರೊಟ್ಟಿಗವಾಡ ಗ್ರಾಮದಲ್ಲಿ ನಡೆಯಿತು.
ಗ್ರಾಮದ ಯಶೋಧಾ ಮುತ್ತಣ್ಣಭೂತರೆಡ್ಡಿ ಹಾಗೂ ಸೈನಾಜಬೇಗಂ ಮಾಬುಸಾಬ್ ಮುಲ್ಲಾ ಸೈನ್ಯಕ್ಕೆ ಸೇರಿದ ಯುವತಿರನ್ನ ಗ್ರಾಮಸ್ಥರೆಲ್ಲರೂ ಒಟ್ಟಿಗೆ ಸೇರಿ ಸಂತಸದಿಂದ ಬರಮಾಡಿಕೊಂಡರು.
ಒಂದು ವರ್ಷದ ಬಿಎಸ್ಎಫ್ ಸೈನಿಕರ ತರಬೇತಿಯನ್ನು ಮುಗಿಸಿದ ಇವರುಗಳು, ಮಹಿಳೆಯರು ಯಾವ ಕ್ಷೇತ್ರದಲ್ಲೂ ಹಿಂದುಳಿದಿಲ್ಲ, ಎಲ್ಲಾ ಕ್ಷೇತ್ರಗಳಲ್ಲೂ ಮೇಲುಗೈ ಸಾಧಿಸಿದ್ದಾರೆ ಎಂಬುದಕ್ಕೆ ರೊಟ್ಟಿಗವಾಡ ಗ್ರಾಮದ ಯಶೋಧಾ ಮುತ್ತಣ್ಣಭೂತರೆಡ್ಡಿ ಹಾಗೂ ಸೈನಾಜಬೇಗಂ ಮಾಬುಸಾಬ್ ಮುಲ್ಲಾ ಸಾಕ್ಷಿಯಾದರು.

ಸನ್ಮಾನ ಕಾರ್ಯಕ್ರಮದ ವೇಳೆ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಯಶೋಧಾ ಮುತ್ತಣ್ಣ ಭೂತರೆಡ್ಡಿ ಹಾಗೂ ಸೈನಾಜಬೇಗಂ ಮಾಬುಸಾಬ್ ಮುಲ್ಲಾ ಅವರು ಮಹಿಳೆ ಕೇವಲ ಸೌಟು ಹಿಡಿದು ಮನೆ ನಿಭಾಯಿಸಲು ಮಾತ್ರವಲ್ಲ. ಬಂದೂಕು ಹಿಡಿದು ದೇಶ ಕಾಯಲು ಸಿದ್ಧರಿದ್ದಾರೆ ಎಂದು ಗ್ರಾಮದ ಯುವತಿರಿಗೆ ಸ್ಫೂರ್ತಿದಾಯಕ ಮಾತುಗಳನ್ನ ತುಂಬಿದರು. ಇನ್ನೂ ಇವರ ಸಾಧನೆಗೆ ಪಾಠಮಾಡಿದ ಶಿಕ್ಷಕರು, ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದರು.

ಕಠಿಣ ಸೈನಿಕ ತರಬೇತಿಯಲ್ಲಿ ಯಶಸ್ವಿ ತರಬೇತಿ ಮುಗಿಸಿ ಗ್ರಾಮಕ್ಕೆ ಮರಳಿದ ಯುವತಿಯರಿಗೆ ಊರಿನ ಜನರೆಲ್ಲರೂ ಸೇರಿ ಹೂ ಮಳೆ ಸುರಿದು ಸ್ವಾಗತ ಮಾಡಿದಂತ ಸಂತಸ ಕ್ಷಣಕ್ಕೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ರೊಟ್ಟಿಗವಾಡ ಗ್ರಾಮದಲ್ಲಿ ಸಾಕ್ಷಿಯಾಯಿತು.

ರೊಟ್ಟಿಗವಾಡ ಗ್ರಾಮದ ಯಶೋಧಾ ಮುತ್ತಣ್ಣಭೂತರೆಡ್ಡಿ ಹಾಗೂ ಸೈನಾಜಬೇಗಂ ಮಾಬುಸಾಬ್ ಮುಲ್ಲಾ ಭಾರತೀಯ ಸೈನ್ಯಕ್ಕೆ ಸೇರಿದ ಯುವತಿರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ 'ಮಹಿಳೆಯರು ಸೌಟು ಹಿಡಿದು ಅಡುಗೆ ಮಾಡುವುದಕ್ಕಷ್ಟೇ ಸೀಮಿತವಲ್ಲ ಬದೂಕು ಹಿಡಿದು ದೇಶ ಕಾಯುವುದಕ್ಕೂ ಸಿದ್ಧ' ಗ್ರಾಮದ ಹೆಣ್ಣುಮಕ್ಕಳಿಗೆ ಸ್ಫೂರ್ತಿ ತುಂಬಿದರು.












Click it and Unblock the Notifications