ತನ್ವೀರ್ ಸೇಠ್ ಮೇಲೆ ಹಲ್ಲೆ; ಧಾರವಾಡದಲ್ಲಿ ಜನ ಪ್ರತಿನಿಧಿಗಳ ಮನೆಗೆ ಭದ್ರತೆ
ಧಾರವಾಡ, ನವೆಂಬರ್ 19: ಮಾಜಿ ಸಚಿವ ಹಾಗೂ ಶಾಸಕ ತನ್ವೀರ್ ಸೇಠ್ ಮೇಲಿನ ಹಲ್ಲೆ ಪ್ರಕರಣದಿಂದ ಹುಬ್ಬಳ್ಳಿ ಧಾರವಾಡ ಪೊಲೀಸರು ಎಚ್ಚತ್ತುಕೊಂಡಿದ್ದಾರೆ. ಇದೀಗ ಅವಳಿ ನಗರದ ಎಲ್ಲಾ ಜನ ಪ್ರತಿನಿಧಿಗಳ ಮನೆಗಳಿಗೆ ಗುಪ್ತಚರ ಇಲಾಖೆ ಮಾಹಿತಿ ಆಧಾರದ ಮೇಲೆ ಹೆಚ್ಚಿನ ಭದ್ರತೆ ನೀಡಲಾಗುತ್ತಿದೆ.
ಮದುರಾ ಕಾಲೋನಿ ನಿವಾಸಿಯಾದ ಜಗದೀಶ್ ಶೆಟ್ಟರ್, ಮಯೂರ್ ಪಾರ್ಕ್ ನಿವಾಸಿಯಾದ ಸಂಸದ ಪ್ರಹ್ಲಾದ ಜೋಶಿ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಹಾಗೂ ಶಾಸಕರಾದ ಅರವಿಂದ ಬೆಲ್ಲದ ನಿವಾಸ, ಶಂಕರ ಪಾಟೀಲ್ ಮುನೇನಕೊಪ್ಪ ಹಾಗೂ ಕಾಂಗ್ರೆಸ್ ಶಾಸಕರಾದ ಪ್ರಸಾದ ಅಬ್ಬಯ್ಯ, ಕುಸುಮಾ ಶಿವಳ್ಳಿ ಅವರ ಮನೆಗೆ ಪೊಲೀಸ್ ಭದ್ರತೆ ನೀಡಲಾಗಿದೆ. ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಜನ ಪ್ರತಿನಿಧಿಗಳ ಮನೆಗಳಿಗೆ ಹೆಚ್ಚಿನ ಭದ್ರತೆ ನೀಡುವಂತೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆರ್.ದಿಲೀಪ್ ಸೂಚಿಸಿದ್ದಾರೆ.

ಹೀಗಾಗಿ ಅವಳಿ ನಗರದ ಎಲ್ಲಾ ಜನ ಪ್ರತಿನಿಧಿಗಳ ಮನೆಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.












Click it and Unblock the Notifications