ಧಾರವಾಡ: ದಿಂಗಾಲೇಶ್ವರ ಶ್ರೀಗಳ ಬೆನ್ನಿಗೆ ನಿಂತ 'ವೀರಶೈವ ಲಿಂಗಾಯತ ಮಹಾಸಭಾ'

ಧಾರವಾಡ, ಮಾರ್ಚ್ 28: ಧಾರವಾಡ ಲೋಕಸಭಾ ಕ್ಷೇತ್ರವನ್ನು ಬಹುಸಂಖ್ಯಾತ ಲಿಂಗಾಯತ ಸಮುದಾಯದ ನಾಯಕರಿಗೆ ನೀಡಬೇಕು ಎಂದು 'ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ' ಮನವಿ ಮಾಡಿದೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಧ್ವನಿ ಎತ್ತಿದ್ದ ಶ್ರೀ ಶಿರಹಟ್ಟಿ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಪರ ಮಹಾಸಭಾ ನಿಂತಿದೆ.

ಬಿಜೆಪಿ ಅಭ್ಯಥಿ ಪ್ರಹ್ಲಾದ್ ಜೋಶಿ ವಿರುದ್ಧ ಮಾತನಾಡಿದ್ದ ಶ್ರೀ ದಿಂಗಾಲೇಶ್ವರ ಸ್ವಾಮೀಜಿಗಳ ಪರ ನಿಂತ 'ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ' ಮುಖ್ಯಸ್ಥರು ಗುರುವಾರ ಧಾರವಾಡದಲ್ಲಿ ಸುದ್ದಿಗೋಷ್ಠಿ ನಡೆಸಿದರು.

All India Veerashaiva Lingayat Mahasabha Stand With sri Dingaleshwara Swamiji

ಈ ವೇಳೆ ಮಾತನಾಡಿದ ಮಹಾಸಭಾದ ಈಶ್ವರ ಚಂದ್ರ ಹೊಸಮನಿ ಮತ್ತು ವೀರಣ್ಣ ಎಳಲ್ಲಿ ಅವರು, ಕಳೆದ ಹತ್ತಾರು ವರ್ಷಗಳಿಂದ ಧಾರವಾಡ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಲಿಂಗಾಯತ ವ್ಯಕ್ತಿ ಗುರುತಿಸಿಲ್ಲ. ಸಮಾಜದ ಒಂದು ಕಳಕಳಿ ಏನೆಂದರೆ, ನಾವು ನಮ್ಮ ಲಿಂಗಾಯತ ಸಮುದಾಯದ ವ್ಯಕ್ತಿಗೆ ಕೊಡಿ ಎಂದು ಅವರು ಆಗ್ರಹಿಸಿದರು.

ಏನು ಅಭಿವೃದ್ಧಿ ಆಗಿಲ್ಲ ಎಂದು ಆರೋಪ

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಲ್ಲಿ 6 ಲಕ್ಷ ಜನಸಂಖ್ಯೆ ಇದೆ, 25 ವರ್ಷಗಳಿಂದ ಸಮಾಜಮುಖಿ‌ ಕೆಲಸ ಮಾಡಿದರೂ ಏನು ಅಭಿವೃದ್ಧಿ ಆಗಿಲ್ಲ ಎಂದು ಅವರು ದೂರಿದರು.

ನಾವು ಮಹಾಸಭೆಯನ್ನ ಹುಟ್ಟು ಹಾಕಿದ್ದೇವೆ. ನಾವು ರಾಜ್ಯದಲ್ಲಿ 45ರಷ್ಟು ಇದ್ದೇವೆ. ಧಾರವಾಡ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶ್ರೀ ದಿಂಗಾಲೇಶ್ವರ ಶ್ರೀಗಳು ಮಠಾಧೀಶರ ಜೊತೆ ಸಭೆ ನಡೆಸಿದ್ದಾರೆ. ಅದರ ಪೂರಕವಾಗಿ ನಾವು ಅವರ ಬೆಂಬಲಕ್ಕೆ ನಿಲ್ಲುತಿದ್ದೇವೆ. ಸ್ವಾಮೀಜಿ ಧ್ವನಿಗೆ ಧ್ವನಿ ಗೂಡಿಸುತಿದ್ದೇವೆ ಎಂದು ಮಹಾಸಭಾ ಸದಸ್ಯರು ಸ್ಪಷ್ಟಪಡಿಸಿದರು.

ದಿಂಗಾಲೇಶ್ವರ ಶ್ರೀಗಳ ತೀರ್ಮಾನಕ್ಕೆ ಬದ್ಧ

ನಮಗೆ ಲಿಂಗಾಯತ ಅಭ್ಯರ್ಥಿ ಬೇಕು. ನಾವು ಬಿಜೆಪಿ ಪಕ್ಷ ಎಂದು ಹೋಗುತ್ತಿಲ್ಲ. ಈ ಕುರಿತು ಬಿಜೆಪಿ ನಾಯಕರಿಗೂ ಒತ್ತಾಯ ಮಾಡಿದ್ದೇವೆ. ಪ್ರಹ್ಲಾದ್ ಜೋಶಿ ಅವರಿಗೆ ಟಿಕೆಟ್ಗೆ ಮಹಾಸಭಾ ಸಹ ವಿರೋಧ ಮಾಡುತ್ತದೆ. ಇದೇ ಮಾರ್ಚ್ 31 ರೊಳಗೆ ಅಭ್ಯರ್ಥಿ ಬದಲಾವಣೆ ಮಾಡದಿದ್ದಲ್ಲಿ ನಾವು ತಿರ್ಮಾನ ಮಾಡುತ್ತೇವೆ ಎಂದು ಶ್ರೀಗಳು ತೀರ್ಮಾನಿಸಿದ್ದಾರೆ. ಅವರ ತೀರ್ಮಾನಕ್ಕೆ ಮಹಾಸಭಾ ಬದ್ಧವಾಗಿರಲಿದೆ ಎಂದರು.

All India Veerashaiva Lingayat Mahasabha Stand With sri Dingaleshwara Swamiji

ಸಮಾಜದ ಅಭ್ಯರ್ಥಿಗೆ ಸ್ಥಾನ ಸಿಗಬೇಕು

ಇಡೀ ಲಿಂಗಾಯತ ಸಮುದಾಯ ದಿಂಗಾಲೇಶ್ವರರಿಗೆ ಬೆಂಬಲಕ್ಕೆ ನಿಲ್ಲಲಿದೆ. ನಮ್ಮ ಜಿಲ್ಲಾ ಹಾಗೂ ರಾಜ್ಯ ಪದಾಧಿಕಾರಿಗಳಿಂದ ಬೆಂಬೆಲ ನೀಡುತ್ತೇವೆ. ಇದು ನಮ್ಮ ಸಮಾಜದ ಧ್ವನಿ, ನಮ್ಮ ಸಮಾಜ ತುಳಿತಕ್ಕೆ ಒಳಗಾಗುತ್ತಿದೆ. ಪ್ರಮುಖ ಘಟ್ಟ ಎಂದರೆ ಕೆಲಸ, ಆ ಕೆಲಸ ಆಗಬೇಕಾದರೆ ಅಭಿವೃದ್ಧಿ ಆಗಬೇಕು. ಆದರೆ ಕ್ಷೇತ್ರದಲ್ಲಿ ಅಭಿವೃದ್ಧಿಗಳು ಆಗುತ್ತಿಲ್ಲ. ನಮ್ಮ ಅಭ್ಯರ್ಥಿಯು ಸಮಾಜವನ್ನು ಕಟ್ಟುವ ಜೊತೆಗೆ ಕ್ಷೇತ್ರ ಅಭಿವೃದ್ಧಿಗೊಳಿಸಬೇಕು ಎಂಬುದೇ ನಮ್ಮ ಆಶಯವಾಗಿದೆ ಎಂದು ಅವರು ತಿಳಿಸಿದರು.

ಧಾರವಾಡ ಕ್ಷೇತ್ರದಿಂದ ಈ ಬಾರಿ ತಾವು ಚುನಾವಣಾ ಕಣಕ್ಕೆ ಇಳಿಯುವುದಾಗಿ ಹೇಳುವ ಮೂಲಕ ಹಾಗೂ ಅಭ್ಯರ್ಥಿ ಬದಲಾವಣೆಗೆ ಧ್ವನಿ ಎತ್ತು ಮೂಲಕ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಅವರು ಕಣ್ಣು ತೆರೆಸುವ ಕೆಲಸ ಮಾಡಿದ್ದಾರೆ.

ಎಲ್ಲ‌ ಸ್ವಾಮೀಜಿಗಳು ಮಠ ಬಿಟ್ಟು ಹೊರ ಬಂದಿದ್ದಾರೆ. ಅವರು ತೊರಿಸಿದ ದಾರಿಯಲ್ಲಿ ನಾವು ಸಹ ಸಾಗುತ್ತೇವೆ. ನಮ್ಮ ಸಮುದಾಯಕ್ಕೆ ಎಲ್ಲಿ ರೀತಿಯ ಸೌಲಭ್ಯ ಸಿಗಲೆಂದು ನಾವು ಶ್ರೀಗಳ ಬೆಂಬಲಕ್ಕೆ ನಿಂತಿದ್ದೇವೆ. ಮಾರ್ಚ್ 31ರ ನಂತರ ಸ್ವಾಮೀಜಿ ತೆಗೆದುಕೊಳ್ಳುವ ನೀರ್ಣಯಕ್ಕೆ ನಾವು ಬದ್ಧ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+