ಅರೇ... ಹೆಂಡತಿ, ಗಂಡನನ್ನೇ ಯಾಕೆ ಕಿಡ್ನಾಪ್ ಮಾಡಿಸುತಿ?
ದಾವಣಗೆರೆ, ನವೆಂಬರ್ 29: ಮಹಿಳೆಯೊಬ್ಬಳು ಆರು ಮಂದಿ ಯುವಕರ ಜೊತೆ ಸೇರಿ ತನ್ನ ಗಂಡನನ್ನೇ ಕಿಡ್ನಾಪ್ ಮಾಡಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ದಾವಣಗೆರೆ ತಾಲೂಕು ಲೋಕಿಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಂಗೀತಾ ಎಂಬಾಕೆ ಈಗ ಹದಡಿ ಪೊಲೀಸರ ಅತಿಥಿಯಾಗಿದ್ದಾಳೆ. ಕಳೆದ ಎರಡು ವರ್ಷಗಳಿಂದ ಪತಿ-ಪತ್ನಿ ದೂರ ಇದ್ದು, ಹಣದ ಆಸೆಗೆ ಈಕೆ ಗಂಡನನ್ನು ಯುವಕರ ಜೊತೆ ಸೇರಿ ಕಿಡ್ನಾಪ್ ಮಾಡಿಸಿದ್ದಾಳೆ.
ಶ್ರೀನಿವಾಸ್ ಅಪಹರಣಕ್ಕೊಳಗಾಗಿದ್ದ ಪತಿ. ಪತ್ನಿ ಸಂಗೀತಾಳ ನಡವಳಿಕೆ ಸರಿ ಇಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಶ್ರೀನಿವಾಸ್ ಸಂಗೀತಾಳಿಂದ ದೂರವಿದ್ದು, ಜಮೀನು ಹಾಗೂ ಪೆಟ್ರೋಲ್ ಬಂಕ್ ಕೆಲಸ ನೋಡಿಕೊಂಡಿದ್ದರು. ಗಂಡನಿಂದ ದೂರವಿದ್ದ ಸಂಗೀತ ಕೆಲ ದಿನಗಳ ಹಿಂದೆ ಪಿಎಸ್ಐ ಒಬ್ಬರ ಜೊತೆ ಗಲಾಟೆ ಮಾಡಿಕೊಂಡು ವಿಷವನ್ನು ಕುಡಿಸಿದ್ದರು ಎಂದು ಹೇಳಿ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲನ್ನು ಕೂಡ ಏರಿದ್ದರು.

ಆದರೆ ಈಗ ಹಣದ ಅವಶ್ಯಕತೆ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಸಂಗೀತಾ ಹಾಗೂ 6 ಜನ ಸಹಚರರು ಸೇರಿ ಶ್ರೀನಿವಾಸ್ನನ್ನು ಕಿಡ್ನಾಪ್ ಮಾಡಿದ್ದರು. ಮಾಮೂಲಿಯಂತೆ ಶ್ರೀನಿವಾಸ್ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮುಗಿಸಿ ಮನೆಗೆ ವಾಪಸ್ ಬರುವಾಗ ಶ್ರೀನಿವಾಸ್ ನನ್ನು ಕಿಡ್ನಾಪ್ ಮಾಡಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಹದಡಿ ಪೊಲೀಸರು, ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂಗೀತಾ ಹಾಗೂ ಇಬ್ಬರನ್ನು ಬಂಧಿಸಿದ್ದು, ಉಳಿದ ನಾಲ್ವರು ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.












Click it and Unblock the Notifications