Bhadra Dam: ಭದ್ರಾ ಜಲಾಶಯದಿಂದ ಎಡ ಹಾಗೂ ಬಲದಂಡೆ ನಾಲೆಗಳಿಗೆ ನೀರು ಹರಿಸುವ ದಿನಾಂಕ ಪ್ರಕಟ
Bhadra Dam: ದಾವಣಗೆರೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಯಾವಾಗ ಕೃಷಿಗೆ ನೀರಿನ ಅಭಾವ ಎದುರಾಗುತ್ತದೆಯೋ ಆ ವೇಳೆ ಭದ್ರಾ ಜಲಾಶಯದಿಂದ ನೀರು ನಿಡುವಂತೆ ಒತ್ತಾಯಗಳು ಕೇಳಿಬರುತ್ತವೆ. ಹಾಗೆಯ, ಇದೀಗ ಡ್ಯಾನಿಂದ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀಡುವ ಹರಿಸುವ ದಿನಾಂಕವನ್ನು ಪ್ರಕಟ ಮಾಡಲಾಗಿದೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಭದ್ರಾ ಜಲಾಶಯದಿಂದ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು ಹರಿಸುವ ದಿನಾಂಕವನ್ನು ಪ್ರಕಟ ಮಾಡಲಾಗಿದೆ. ಎಡದಂಡೆ ನಾಲೆಗೆ ಇದೇ ಜನವರಿ 3ರಿಂದ ನೀರು ಬಿಡಲಾಗಿದೆ. ಇನ್ನೂ ಬಲದಂಡೆ ನಾಲೆಗೆ ಜನವರಿ 8ರಿಂದ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ಮಾಡಲಾಯಿತು.

ಮಲವಗೊಪ್ಪದ ಕಾಡಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಐಸಿಸಿ ಅಧ್ಯಕ್ಷ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಈ ದಿನಾಂಕ ಘೋಷಣೆ ಮಾಡಿದರು. ಕರ್ನಾಟಕ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಎನ್.ರವಿಕುಮಾರ್ ಮಾತನಾಡಿ, ದಾವಣಗೆರೆ ವಿಭಾಗ ಹಾಗೂ ಮಲೆಬೆನ್ನೂರು ಶಾಖಾ ಕಾಲುವೆಗಳಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಳ್ಳಲು ಇನ್ನೂ 15 ದಿನಗಳ ಕಾಲಾವಕಾಶ ಬೇಕಿದೆ. ಆದ್ದರಿಂದ ಬಲದಂಡೆ ನಾಲೆಗೆ ತುರ್ತಾಗಿ ನೀರು ಹರಿಸಲು ಸಾಧ್ಯ ಇಲ್ಲ ಎಂದು ಹೇಳಿದರು.
ಕೊನೆಯ ಭಾಗದ ರೈತರಿಗೆ ನೀರು ಹರಿಸಲು ನೀರಿನ ನಿರ್ವಹಣೆ ಸರಿಯಾಗಿ ಮಾಡುವಂತೆ ಅಧಿಕಾರಿಗಳಿಗೆ ಸಚಿವ ಮಧು ಬಂಗಾರಪ್ಪ ಸೂಚನೆ ನೀಡಿದರು. ಇನ್ನೂ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ಬಲದಂಡೆ ನಾಲೆಯ ಭಾಗದಲ್ಲಿ ನೀರು ಹರಿಸುವ ಅಚ್ಚುಕಟ್ಟು ವ್ಯಾಪ್ತಿಗಿಂತ ಹೆಚ್ಚು ಅಕ್ರಮ ಪಂಪ್ ಸೆಟ್‌ಗಳಿಗೆ ನೀರು ಬಳಕೆ ಆಗುತ್ತಿದೆ. ಇದನ್ನು ನಿಯಂತ್ರ ಮಾಡುವುದು ಕಷ್ಟವಿದೆ ಎಂದು ಹೇಳಿದರು. ಈಗಾಗಲೇ ಕೆಲವರು ಭಾಗಗಳಲ್ಲಿ ಅಕ್ರಮ ಪಂಪ್ ಸೆಟ್‌ಗಳ ಮೂಲಕ ನೀರು ಬಿಟ್ಟುಕೊಂಡ ಉದಾಹರಣೆಗಳಿವೆ. ಅವರಿಗೆ ಎಚ್ಚರಿಕೆಯನ್ನೂ ಸಹ ಮಾಡಲಾಗಿದೆ.
ಅಕ್ರಮ ಪಂಪ್‌ಸೆಟ್‌ಗಳ ಮೂಲಮ ಯಾರೆಲ್ಲ ನೀರು ಬಿಟ್ಟುಕೊಳ್ಳುತ್ತಾರೆಯೋ ಅಂತಹರವ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹಿಂದಿನಿಂದಲೂ ಅಧಿಕಾರಿಗಳು ಎಚ್ಚರಿಕೆ ನೀಡುತ್ತಲೇ ಬಂದಿದ್ದಾರೆ. ಆದರೂ ಇದಕ್ಕೆ ಕ್ಯಾರೆ ಅನ್ನದ ಕೆಲವರು ಆಡಿದ್ದೇ ಆಟ ಎಂಬಂತೆ ಅಕ್ರಮ ಪಂಪ್ ಸೆಟ್‌ಗಳನ್ನು ಅಳವಡಿಕೆ ಮಾಡಿಕೊಳ್ಳುವುದನ್ನು ಮುಂದುವರೆಸಿದ್ದಾರೆ. ಎಷ್ಟೇ ಕಡಿವಾಣ ಹಾಕಿದರೂ ಸಹ ಇದು ಮಾತ್ರ ನಿಲ್ಲುತ್ತಿಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ.
ಮತ್ತೊಂದೆಡೆ ಇದೀಗ ಮಳೆ ಸಂಪೂರ್ಣವಾಗಿ ತಗ್ಗಿದ್ದು, ಭಾರೀ ಚಳಿ ಮುಂದುವರೆದಿದೆ. ಕೆಲವೇ ದಿನಗಳಲ್ಲಿ ಚಳಿ ಕೂಡ ಮಾಯವಾಗಲಿದ್ದು, ಬೇಸಿಗೆ ಎಂಟ್ರಿ ಕೊಡಲಿದೆ. ಆಗ ಬೇಸಿಗೆ ಹಂಗಾಮಿನ ಬೆಳೆಗಳಿಗೆ ನೀರು ಬೇಕೇ ಬೇಕಾಗುತ್ತದೆ. ಆದ್ದರಿಂದ ಇದೀಗ ಭದ್ರಾ ಜಲಾಶಯದಿಂದ ಎಡದಂತೆ ಹಾಗೂ ಬಲದಂಡೆ ನಾಲೆಗಳಿಗೆ ನೀರು ಹರಿಸಲು ದಿನಾಂಕ ಪ್ರಕಟ ಮಾಡಲಾಗಿದೆ. ಇದರಿಂದ ದಾವಣಗೆರೆ ಭಾಗದ ರೈತರ ಬೇಡಿಕೆಗೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಾಂತಾಗಿದೆ. ಹಾಗಾದ್ರೆ ಇದೀಗ ಪ್ರಸ್ತುತ ಜಲಾಶಯದ ನೀರಿನ ಮಟ್ಟ ಎಷ್ಟಿದೆ ಎಂದು ಇಲ್ಲಿ ತಿಳಿಯಿರಿ.
1. ಭದ್ರಾ ಜಲಾಶಯ
* ಗರಿಷ್ಠ ನೀರಿನ ಮಟ್ಟ - 186 ಅಡಿ
* ಒಟ್ಟು ಸಾಮರ್ಥ್ಯ - 71.54 ಟಿಎಂಸಿ
* ಇಂದಿನ ನೀರಿನ ಮಟ್ಟ - 180.8 ಅಡಿ
* ಒಳಹರಿವು - 120 ಕ್ಯೂಸೆಕ್
* ಹೊರಹರಿವು - 699 ಕ್ಯೂಸೆಕ್
2. ಕೆಆರ್‌ಎಸ್ ಜಲಾಶಯ
* ಗರಿಷ್ಠ ನೀರಿನ ಮಟ್ಟ - 124.80 ಅಡಿ
* ಒಟ್ಟು ಸಾಮರ್ಥ್ಯ- 49.45 ಟಿಎಂಸಿ
* ಇಂದಿನ ನೀರಿನ ಮಟ್ಟ- 123.57 ಅಡಿ
* ಒಳಹರಿವು - 1,134 ಕ್ಯೂಸೆಕ್
* ಹೊರಹರಿವು - 2,353 ಕ್ಯೂಸೆಕ್
3. ಕಬಿನಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 65 ಅಡಿ
* ಇಂದಿನ ನೀರಿನ ಮಟ್ಟ - 57.01 ಅಡಿ
* ಒಳಹರಿವು - 504 ಕ್ಯೂಸೆಕ್
* ಹೊರಹರಿವು - 500 ಕ್ಯೂಸೆಕ್
4. ಹಾರಂಗಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 129 ಅಡಿ
* ಇಂದಿನ ನೀರಿನ ಮಟ್ಟ - 98.69 ಅಡಿ
* ಒಳಹರಿವು - 321 ಕ್ಯೂಸೆಕ್
* ಹೊರಹರಿವು - 300 ಕ್ಯೂಸೆಕ್
5. ಹೇಮಾವತಿ ಜಲಾಶಯ
* ಗರಿಷ್ಠ ನೀರಿನ ಮಟ್ಟ - 117 ಅಡಿ
* ಇಂದಿನ ನೀರಿನ ಮಟ್ಟ - 96.93 ಅಡಿ
* ಒಳಹರಿವು - 152 ಕ್ಯೂಸೆಕ್
* ಹೊರಹರಿವು - 250 ಕ್ಯೂಸೆಕ್












Click it and Unblock the Notifications