ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆ: ಒಂದೇ ನಂಬರ್ ವುಳ್ಳ ಎರಡು ಬುಲೆಟ್ ಬೈಕ್ ಗಳ ಸಂಚಾರ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಅಕ್ಟೋಬರ್ 30: ಒಂದೇ ನಂಬರ್ ಪ್ಲೇಟ್ ವುಳ್ಳ ಎರಡು ಬುಲೆಟ್ ಬೈಕ್ ಗಳು ದಾವಣಗೆರೆ ನಗರದಲ್ಲಿ ರಸ್ತೆಗಿಳಿದಿರುವುದು ಪತ್ತೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ಅನುಮಾನ ಹುಟ್ಟಿಸಿದೆ.

ಕೆಎ-17/ಇಟಿ 2002 ಈ ದಾವಣಗೆರೆ ನೋಂದಣಿಯ ಒಂದೇ ಸಂಖ್ಯೆಯುಳ್ಳ ಎರಡು ಬುಲೆಟ್ ಬೈಕ್ ಗಳು ಹಲವು ದಿನಗಳಿಂದ ಪೊಲೀಸರು, ಸಿಸಿಟಿವಿ ಕ್ಯಾಮೆರಾ ಕಣ್ತಪ್ಪಿಸಿ ಓಡಾಡುತ್ತಿವೆ. ಆರ್‌ಟಿಒ ಸಂಖ್ಯೆಯ ನಿಜವಾದ ಮಾಲೀಕರು ಯಾರೆಂಬ ಅನುಮಾನ ಸಾರ್ವಜನಿಕರಲ್ಲಿ ಉದ್ಭವಿಸಿದೆ.

ದಾವಣಗೆರೆ; ಕೋವಿಡ್ ನಿಯಮ ಉಲ್ಲಂಘನೆ, 51. 67 ಲಕ್ಷ ದಂಡ ಸಂಗ್ರಹದಾವಣಗೆರೆ; ಕೋವಿಡ್ ನಿಯಮ ಉಲ್ಲಂಘನೆ, 51. 67 ಲಕ್ಷ ದಂಡ ಸಂಗ್ರಹ

ಈ ಎರಡು ಬೈಕ್ ಗಳ ಪೈಕಿ ಕಪ್ಪು ಬಣ್ಣದ ಹಳೆಯ ಬುಲೆಟ್ ಒಂದಾಗಿದ್ದು, ಮತ್ತೊಂದು ಗನ್ ಮೆಟಲ್ ಬಣ್ಣದ್ದಾಗಿದೆ. ಹೊಸ ಬೈಕಿನ ಹಿಂಬದಿಯಲ್ಲಿ ಪೊಲೀಸ್ ಎಂದು ಬರೆಸಲಾಗಿದೆ.

Davanagere: Two Royal Enfield Bikes With Same Registration Number Found

ಪೊಲೀಸ್ ಎಂದು ಹೆಸರಿರುವ ಈ ಬುಲೆಟ್ ನಿತ್ಯ ಬಡಾವಣೆ ಠಾಣೆ ಆವರಣದಲ್ಲಿ ನಿಲ್ಲುತ್ತಿದ್ದರೆ, ಮತ್ತೊಂದು ಹೋಟೆಲ್ ಶಾಂತಿ ಪಾರ್ಕ್ ಆವರಣದಲ್ಲಿ ನಿಲ್ಲುತ್ತದೆ ಎಂದು ಮೂಲಗಳು ತಿಳಿಸಿವೆ.

ಒಂದೇ ನಂಬರ್ ಇರುವ ಬೈಕ್ ಓಡಾಡುವಂತಿಲ್ಲ. ಪೊಲೀಸ್ ಆಗಲಿ, ಕಳ್ಳ ಆಗಲಿ ಎಲ್ಲರಿಗೂ ಕಾನೂನು ಒಂದೇ. ಪೊಲೀಸರೊಬ್ಬರು ಈ ರೀತಿ ನೋಂದಣಿ ಸಂಖ್ಯೆ ಬಳಸಿ ವಾಹನ ಓಡಿಸುತ್ತಿದ್ದರೆ ಅವರ ಮೇಲೆ ಎಫ್ಐಆರ್ ಹಾಕುತ್ತೇವೆ ಎಂದು ಆರ್‌ಟಿಒ ಅಧಿಕಾರಿಗಳು ಹೇಳುತ್ತಾರೆ.

Davanagere: Two Royal Enfield Bikes With Same Registration Number Found

ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾ ಇದ್ದು, ಸಂಚಾರಿ ಪೊಲೀಸರು ಎಲ್ಲ ಕಡೆ ಇರುತ್ತಾರೆ. ಆದರೂ ಒಂದೇ ನಂಬರ್ ಇರುವ ಬೈಕ್ ಪೊಲೀಸರ ಕಣ್ಣಿಗೆ ಬೀಳದೆ ಇರುವುದು ಅನುಮಾನಕ್ಕೆ ಕಾರಣವಾಗಿದೆ.

ಆರ್‌ಟಿಒದಲ್ಲಿ ನೋಂದಣಿಯಾಗಿರುವ ಅಸಲಿ ಬುಲೆಟ್ ಯಾವುದು ಎಂಬುದಕ್ಕೆ ಪೊಲೀಸ್ ಅಧಿಕಾರಿಗಳು, ಆರ್‌ಟಿಒ ಉತ್ತರ ನೀಡಿಲ್ಲ. ಈ ಬುಲೆಟ್ ಬೈಕ್ ನ್ನು ಮೊದಲು ಯಾರು ಬಳಸುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ.

Davanagere: Two Royal Enfield Bikes With Same Registration Number Found

ಅದು ಯಾರ ಹೆಸರಲ್ಲಿದೆ, ನಿಜವಾದ ಮಾಲೀಕ ಯಾರು ಎಂಬುದನ್ನು ತಿಳಿದುಕೊಂಡು, ನಂತರ ಫೇಕ್ ನಂಬರ್ ಹಾಕಿಕೊಂಡು ಓಡಿಸುತ್ತಿರುವವರ ಮೇಲೆ ಪ್ರಕರಣ ದಾಖಲಿಸುತ್ತೇವೆ. ಆರೋಪಿ ಪೊಲೀಸ್ ಆಗಿದ್ದರೂ, ಅವರ ಮೇಲೆಯೂ ಕ್ರಮ ಕೈಗೊಳ್ಳುತ್ತೇವೆ ಎಂದು ಆರ್‌ಟಿಒ ಅಧಿಕಾರಿ ಶ್ರೀಧರ್ ಮಲ್ನಾಡ್ ಹೇಳಿದ್ದಾರೆ.

English summary
Two Royal Enfield bikes with the same number have been found on the road in Davanagere city, creating suspicion in the public sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X