ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯಲ್ಲಿ ಮತ್ತೆ ಎರಡು ಕೊರೊನಾ ಸೋಂಕಿತರು ಪತ್ತೆ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಏಪ್ರಿಲ್ 30: ಹಸಿರು ವಲಯದಲ್ಲಿದ್ದ ದಾವಣಗೆರೆ ಜಿಲ್ಲೆಯಲ್ಲಿ ನಿನ್ನೆ ಹಾಗೂ ಇಂದು ಕೋವಿಡ್-19 ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ದಾವಣಗೆರೆ ಜಿಲ್ಲೆ ಕೆಂಪು ವಲಯದತ್ತ ಮುಖಮಾಡಿದೆ.

Recommended Video

ಕೊರೊನಾಸುರ ಯಾರು ಗೊತ್ತಾ? ಈ ಹಾಸ್ಯಮಯ ವಿಡಿಯೋ ನೋಡಿ | Corona | Oneindia Kannada

ಕಳೆದ 28 ದಿನಗಳಿಂದಲೂ ಯಾವುದೇ ಸೋಂಕಿತರು ಪತ್ತೆಯಾಗದ ಕಾರಣ ದಾವಣಗೆರೆ ಹಸಿರು ವಲಯಕ್ಕೆ ಸೇರಿತ್ತು. ಆದರೆ ನಿನ್ನೆ ಹಾಗೂ ಇಂದು ಎರಡು ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಹಳದಿ ವಲಯಕ್ಕೆ ಸೇರ್ಪಡೆಯಾಗಿದೆ. ನಿನ್ನೆ ದಾವಣಗೆರೆಯ ಭಾಷಾನಗರದಲ್ಲಿ ಓರ್ವ ಮಹಿಳೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿತ್ತು.

ದಾವಣಗೆರೆ ಮಂದಿಗೆ ಡೇಂಜರ್ ಆಗುತ್ತಾರಾ ಪೇಶೆಂಟ್ ನಂಬರ್-556?ದಾವಣಗೆರೆ ಮಂದಿಗೆ ಡೇಂಜರ್ ಆಗುತ್ತಾರಾ ಪೇಶೆಂಟ್ ನಂಬರ್-556?

ಈ ಮಹಿಳೆ ನಗರ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇವರನ್ನು ಈಗಾಗಲೇ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಆರಂಭಿಸಲಾಗಿದೆ. ಹಾಗೂ ಈ ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ 25 ಜನರನ್ನು ಹೋಟೆಲ್ ಒಂದರಲ್ಲಿ ಐಸೋಲೇಷನ್ ನಲ್ಲಿ ಇಡಲಾಗಿದೆ.

Two Coronavirus Infected In Davanagere

ಸೆಕೆಂಡರಿ ಹಂತದ ಸಂಪರ್ಕದಲ್ಲಿದ್ದ 45 ಜನರನ್ನು ಪತ್ತೆ ಹಚ್ಚಲಾಗಿದೆ. ಈಗಾಗಲೇ ಒಟ್ಟು 56 ಜನರ ಗಂಟಲು ದ್ರವ ಮಾದರಿಯನ್ನು ಇಂದು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಇವರು ಕೆಲಸ ಮಾಡುತ್ತಿದ್ದ ನಗರ ಆರೋಗ್ಯ ಕೇಂದ್ರವನ್ನು ಬಂದ್ ಮಾಡಲಾಗಿದೆ.

ಮತ್ತೊಂದು ಪ್ರಕರಣ
ಇಂದು ಬೆಳಿಗ್ಗೆ ದಾವಣಗೆರೆಯ ಜಾಲಿನಗರದ ನಿವಾಸಿಯೊಬ್ಬರಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. 68 ವರ್ಷದ ವ್ಯಕ್ತಿ ಅನಾರೋಗ್ಯದಿಂದ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಏ.27 ರಂದು ದಾಖಲಾಗಿದ್ದರು. ಕೋವಿಡ್ ವಾರ್ಡನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು.

ಗ್ರೀನ್ ಝೋನ್‌ಗೆ ಸೇರಿದ ಬೆನ್ನಲ್ಲೇ ದಾವಣಗೆರೆ ಬೆನ್ಹತ್ತಿದ ಕೊರೊನಾಗ್ರೀನ್ ಝೋನ್‌ಗೆ ಸೇರಿದ ಬೆನ್ನಲ್ಲೇ ದಾವಣಗೆರೆ ಬೆನ್ಹತ್ತಿದ ಕೊರೊನಾ

ಅವರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಶಿವಮೊಗ್ಗ ಲ್ಯಾಬ್ ಗೆ ರವಾನೆ ಮಾಡಲಾಗಿತ್ತು. ಇಂದು ವರದಿ ಲಭ್ಯವಾಗಿದ್ದು, ವೃದ್ಧನಿಗೆ ಸೋಂಕು ಇರುವುದು ಖಚಿತವಾಗಿದೆ. ವೃದ್ಧನ ಟ್ರಾವಲ್ ಹಿಸ್ಟರಿಗಾಗಿ ಜಿಲ್ಲಾಡಳಿತ ಶೋಧ ನಡೆಸಿದೆ. ವೃದ್ಧನ ಸಂಪರ್ಕದಲ್ಲಿದ್ದ ಕುಟುಂಬದ ಒಂದೂವರೆ ವರ್ಷದ ಮಗು ಹಾಗೂ ಮೂರು ವರ್ಷದ ಇನ್ನೊಂದು ಮಗು ಸೇರಿ ಒಂಬತ್ತು ಜನರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರ ಮಾದರಿ ಸಂಗ್ರಹಿಸಿ ಶಿವಮೊಗ್ಗ ಲ್ಯಾಬ್ ಗೆ ಕಳುಹಿಸಿ ಕೊಡಲಾಗಿದೆ.

ಸೋಂಕಿತರಿಬ್ಬರ ಮಾಹಿತಿ ಪಡೆಯಲಾಗಿದ್ದು, ಭಾಷಾನಗರ ಹಾಗೂ ಜಾಲಿನಗರ ಎರಡನ್ನು ಸೀಲ್ ಡೌನ್ ಮಾಡಲಾಗಿದೆ. ನಿನ್ನೆ ಸೋಂಕು ಪತ್ತೆಯಾದ ನರ್ಸ್ ಪ್ರಕರಣಕ್ಕೂ ಈಗ ಪತ್ತೆಯಾದ ವೃದ್ಧನ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಇಬ್ಬರ ಟ್ರಾವಲ್ ಹಿಸ್ಟರಿ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

English summary
Coronavirus was detected yesterday and today in Davanagere district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X