ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಾವಣಗೆರೆಯಲ್ಲಿ ಸಂಚಾರಿ ಪೊಲೀಸ್ ಪೇದೆಗೂ ಕೊರೊನಾ ಸೋಂಕು

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಮೇ 14: ಕೊರೊನಾ ವೈರಸ್ ಮಹಾಮಾರಿಯು ಕಳೆದ 15 ದಿನಗಳಿಂದ ದಾವಣಗೆರೆ ಜಿಲ್ಲೆಯನ್ನು ಬಿಟ್ಟು ಬಿಡದೇ ಕಾಡುತ್ತಿದ್ದು, ಇಂದು ಕೂಡಾ ಮೂರು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಇಂದು ದಾವಣಗೆರೆಯಲ್ಲಿ ಪತ್ತೆಯಾದ ಮೂವರು ಸೋಂಕಿತರ ಪೈಕಿ, ಪಿ-975, 34 ವರ್ಷದ ಸಂಚಾರಿ ಪೊಲೀಸ್ ಪೇದೆಗೆ ಸೋಂಕು ದೃಢಪಟ್ಟಿದೆ. ಕಂಟೈನ್ಮೆಂಟ್ ಏರಿಯಾದಲ್ಲಿ ಕೆಲಸ ನಿರ್ವಹಿಸಿದ್ದಕ್ಕೆ ಸೋಂಕು ಹರಡಿದೆ.

ಮೇ 17 ರವರೆಗೆ ಮದ್ಯ ಮಾರಾಟಕ್ಕೆ ಅವಕಾಶ: ಮಹಾಂತೇಶ ಬೀಳಗಿಮೇ 17 ರವರೆಗೆ ಮದ್ಯ ಮಾರಾಟಕ್ಕೆ ಅವಕಾಶ: ಮಹಾಂತೇಶ ಬೀಳಗಿ

ಕೇಸ್ ನಂಬರ್ 976, 32 ವರ್ಷದ ಬೆಳ್ಳುಳ್ಳಿ ವ್ಯಾಪಾರಿಗೂ ಕೊರೊನಾ ಸೋಂಕು ಪತ್ತೆಯಾಗಿದೆ. ಕಳೆದ ಒಂದು ವಾರದಿಂದ ವ್ಯಾಪಾರವನ್ನು ನಿಲ್ಲಿಸಿ, ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದನು. ಇಂದು ಕೊರೊನಾ ಪಾಸಿಟಿವ್ ಎಂದು ದೃಢಪಟ್ಟಿದೆ.

Coronavirus Infects Detect In Davanagere Traffic Police

ದಾಣಗೆರೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೊನಾ ಸೋಂಕುಗಳ ನಡುವೆಯೂ ದಾವಣಗೆರೆ ಜಿಲ್ಲಾಡಳಿತ ಆರ್ಥಿಕ ಚಟುವಟಿಕೆಗೆ ಅವಕಾಶ ಕಲ್ಪಿಸಿದೆ. ಇದರಿಂದ ಜನರಲ್ಲಿ ಇನ್ನಷ್ಟು ಆತಂಕ ಮೂಡಿಸಿದೆ.

ಕಳೆದ ತಿಂಗಳು ಏಪ್ರಿಲ್ 29 ರಂದು ಗ್ರೀನ್ ಜೋನ್ ನಲ್ಲಿದ್ದ ದಾವಣಗೆರೆಯಲ್ಲಿ ಭಾಷಾನಗರದ ನರ್ಸ್ ಗೆ ಸೋಂಕು ಪತ್ತೆಯಾಗಿತ್ತು. ಇದಾದ ನಂತರ ಜಾಲಿನಗರ ವೃದ್ಧನಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಈ ಎರಡು ಪ್ರಕರಣ ನಂತರ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಪ್ರಕರಣ ಹೆಚ್ಚುತ್ತಲೇ ಸಾಗಿದ್ದು, ಇದೀಗ ದಾವಣಗೆರೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 88 ಕ್ಕೆ ಏರಿಕೆಯಾಗಿದೆ.

ದಾವಣಗೆರೆಯಲ್ಲಿ ಷರತ್ತುಬದ್ಧ ವ್ಯಾಪಾರಕ್ಕೆ ಅನುಮತಿ; ವಹಿವಾಟು ಆರಂಭದಾವಣಗೆರೆಯಲ್ಲಿ ಷರತ್ತುಬದ್ಧ ವ್ಯಾಪಾರಕ್ಕೆ ಅನುಮತಿ; ವಹಿವಾಟು ಆರಂಭ

ಜಾಲಿನಗರ ಒಂದರಲ್ಲಿಯೇ 50 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು 88 ಕೊರೊನಾ ಪಾಸಿಟಿವ್ ಪತ್ತೆಯಾಗಿವೆ. 4 ಸೋಂಕಿತರು ಮೃತಪಟ್ಟಿದ್ದಾರೆ. ಇಬ್ಬರು ಗುಣಮುಖರಾಗಿದ್ದಾರೆ. ಇನ್ನು 82 ಸಕ್ರೀಯ ಕೇಸ್ ಗಳು ಜಿಲ್ಲೆಯಲ್ಲಿವೆ.

English summary
A 34 year old traffic policeman in Davanagere has been coronavirus infected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X