Get Updates
Get notified of breaking news, exclusive insights, and must-see stories!

ಮೋದಿಗಿಂತ ದೊಡ್ಡ ಅಹಿಂದ ನಾಯಕರಿಲ್ಲ; ಕೆ. ಸುಧಾಕರ್

ದಾವಣಗೆರೆ, ನವೆಂಬರ್ 18; "ಪ್ರಧಾನಿ ನರೇಂದ್ರ ಮೋದಿಯವರಿಗಿಂತ ದೊಡ್ಡ ಅಹಿಂದ ನಾಯಕರು ಇಡೀ ದೇಶದಲ್ಲೇ ಇಲ್ಲ ಎಂಬುದನ್ನು ಕಾಂಗ್ರೆಸ್ ನಾಯಕರು ಮೊದಲು ಅರಿಯಬೇಕು" ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.

ಗುರುವಾರ ಬಿಜೆಪಿ ಕರ್ನಾಟಕ ವತಿಯಿಂದ ದಾವಣಗೆರೆಯಲ್ಲಿ ನಡೆದ 'ಜನಸ್ವರಾಜ್ ಯಾತ್ರೆ' ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, "ವಿರೋಧ ಪಕ್ಷದ ಇಬ್ಬರು ನಾಯಕರು, ದಲಿತರು ಹಾಗೂ ಅಲ್ಪಸಂಖ್ಯಾತರು ಸೇರಿದರೆ ಬಿಜೆಪಿಯನ್ನು ಸೋಲಿಸಬಹುದು ಎಂದು ಹೇಳಿದ್ದಾರೆ. ದೇಶ ವಿಭಜನೆ ಮಾಡಲು ಜಾತಿ ವಿಷಬೀಜ ಬಿತ್ತುವುದು, ಧರ್ಮಗಳ ನಡುವೆ ವಿವಾದ ತರುವುದು ಕಾಂಗ್ರೆಸ್ ಪಕ್ಷದ ಪ್ರತೀತಿ" ಎಂದರು.

"ಕೆಲ ನಾಯಕರು ಅಹಿಂದ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದು ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೂಲ ಆಶಯಗಳಿಗೆ ಚ್ಯುತಿ ತರುವ ಆಲೋಚನೆಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರಿಗಿಂತ ದೊಡ್ಡ ಅಹಿಂದ ನಾಯಕ ಇಡೀ ದೇಶದಲ್ಲೇ ಇಲ್ಲ ಎಂಬುದನ್ನು ಅಹಿಂದ ಪರ ಎಂದು ಹೇಳುವ ರಾಜ್ಯದ ನಾಯಕರು ತಿಳಿದುಕೊಳ್ಳಬೇಕು" ಎಂದು ಟೀಕಿಸಿದರು.

ನವೆಂಬರ್ 19ರಂದು ಕರ್ನಾಟಕ ಬಿಜೆಪಿ 'ಜನ ಸ್ವರಾಜ್ ಯಾತ್ರೆ'ಗೆ ಚಾಲನೆ ನೀಡಿದೆ. ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ. ಎಸ್.‌ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಮತ್ತು ಸಚಿವ ಕೆ. ಎಸ್. ಈಶ್ವರಪ್ಪ ನೇತೃತ್ವದ ತಂಡದಲ್ಲಿ ಸಂಸದರು, ಸಚಿವರು, ಶಾಸಕರು, ಬಿಜೆಪಿಯ ಪದಾಧಿಕಾರಿಗಳು ಇದ್ದಾರೆ. 4 ತಂಡ ನವೆಂಬರ್ 19 ರಿಂದ 23ರ ತನಕ ವಿವಿಧ ಜಿಲ್ಲೆಯಲ್ಲಿ ಪ್ರವಾಸ ಮಾಡಲಿದೆ.

20 ವರ್ಷಕ್ಕೂ ಅಧಿಕ ಕಾಲ ಆಡಳಿತ ನಡೆಸಿದ್ದಾರೆ

20 ವರ್ಷಕ್ಕೂ ಅಧಿಕ ಕಾಲ ಆಡಳಿತ ನಡೆಸಿದ್ದಾರೆ

"ಪ್ರಧಾನಿ ನರೇಂದ್ರ ಮೋದಿಯವರು 20 ವರ್ಷಕ್ಕೂ ಅಧಿಕ ಕಾಲ ಆಡಳಿತ ನಡೆಸಿದ್ದಾರೆ. ಆದರೂ ಅವರು ಜಾತೀಯತೆಯನ್ನು ಮಾಡಲಿಲ್ಲ. ಸಬ್ ಕಾ ವಿಶ್ವಾಸ್ ಎಂದು ಎಲ್ಲರ ವಿಶ್ವಾಸ ಗಳಿಸಿದರು. ಆದರೆ ಇಲ್ಲಿ ಕಾಂಗ್ರೆಸ್ ನವರು ಹಿಂದುಳಿದವರು, ದಲಿತರು, ವೀರಶೈವ ಲಿಂಗಾಯತರನ್ನು ಒಡೆಯುತ್ತಿದ್ದಾರೆ" ಎಂದು ಡಾ. ಕೆ. ಸುಧಾಕರ್ ವಾಗ್ದಾಳಿ ನಡೆಸಿದರು.

ದೇಶದಲ್ಲಿ ಅತಿ ಹೆಚ್ಚು ಜನರಿಗೆ ಲಸಿಕೆ ನೀಡಿದೆ

ದೇಶದಲ್ಲಿ ಅತಿ ಹೆಚ್ಚು ಜನರಿಗೆ ಲಸಿಕೆ ನೀಡಿದೆ

"ಬಿಜೆಪಿ ಸರ್ಕಾರ ಇಡೀ ದೇಶದಲ್ಲಿ ಅತಿ ಹೆಚ್ಚು ಜನರಿಗೆ ಲಸಿಕೆ ನೀಡಿದೆ. ಹಿಂದಿನ ಸಿಎಂ ಬಿ. ಎಸ್. ಯಡಿಯೂರಪ್ಪ ಕೋವಿಡ್ ಸಮಯದಲ್ಲಿ ಜನರ ಆರೋಗ್ಯಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಈಗಿನ ಸಿಎಂ ಬಸವರಾಜ ಬೊಮ್ಮಾಯಿ 'ಕಾಮನ್ ಮ್ಯಾನ್' ಆಗಿ ಆಡಳಿತ ನಡೆಸುತ್ತಿದ್ದಾರೆ. ಬಾಯಿ ಮಾತಿನಲ್ಲಿ ರೈತರ ಬಗ್ಗೆ ಮಾತನಾಡುವವರು ಅವರೆಲ್ಲ ಜೀತದಾಳಾಗಿ ಇರಲಿ ಎಂದು ಬಯಸುತ್ತಾರೆ. ಅಲ್ಪಸಂಖ್ಯಾತರ ಬಗ್ಗೆ ಮಾತನಾಡುವವರು ಅವರ ಉದ್ಧಾರಕ್ಕಾಗಿ ಏನೂ ಮಾಡಿಲ್ಲ. ಆದರೆ ಪ್ರಧಾನಿಗಳು ಮುದ್ರಾ ಯೋಜನೆ ತಂದು ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರಿಗೆ ನೆರವಾಗಿದ್ದಾರೆ" ಎಂದು ಬಣ್ಣಿಸಿದರು.

ಮತದಾರರು ನೋಡಿ ಆಯ್ಕೆ ಮಾಡುತ್ತಾರೆ

ಮತದಾರರು ನೋಡಿ ಆಯ್ಕೆ ಮಾಡುತ್ತಾರೆ

"ಗ್ರಾಮ ಪಂಚಾಯಿತಿಗಳಲ್ಲಿ ಚುನಾಯಿತರಾಗುವುದು ಬಹಳ ಕಷ್ಟ. ಜನರಿಗೆ ಹೇಗೆ ಸ್ಪಂದಿಸುತ್ತಾರೆ, ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ಗ್ರಾಮದ ಮತದಾರರು ನೋಡುತ್ತಾರೆ. ಈ ಸವಾಲು ಎದುರಿಸಿದ ಆಯ್ಕೆಯಾದ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ವಿಧಾನಪರಿಷತ್ ಸದಸ್ಯರನ್ನು ಆಯ್ಕೆ ಮಾಡುವ ಚುನಾವಣೆ ಈಗ ನಡೆಯುತ್ತಿದೆ. ವಿಧಾನಸಭೆಯಲ್ಲಿ ಬಿಜೆಪಿಗೆ ಬಹುಮತ ಇದೆ. ಯಾವುದೇ ಕಾಯ್ದೆಯ ತಿದ್ದುಪಡಿ, ರಚನೆ ಆಗಬೇಕೆಂದರೆ ಎರಡೂ ಮನೆಗಳಲ್ಲಿ ಬೆಂಬಲ ಪಡೆಯಬೇಕು" ಎಂದು ಸುಧಾಕರ್ ಹೇಳಿದರು.

Recommended Video

    ಸೂರ್ಯಕುಮಾರ್ ಯಾದವ್ ಪಂದ್ಯ ಮುಗಿದಾದ ನಂತರ ಹೇಳಿದ್ದೇನು ? | Oneindia Kannada
    ಮತಾಂತರ ತಡೆಯಲು ಕಾಯ್ದೆ ತರಬೇಕಿದೆ

    ಮತಾಂತರ ತಡೆಯಲು ಕಾಯ್ದೆ ತರಬೇಕಿದೆ

    "ಬಿಜೆಪಿ ವಿಧಾನಪರಿಷತ್‌ನಲ್ಲಿ ಹೆಚ್ಚಿನ ಸಂಖ್ಯೆ ಪಡೆಯಲು ಅವಕಾಶ ಒದಗಿಬಂದಿದೆ. ಗ್ರಾಮ ಪಂಚಾಯಿತಿಗಳ ಪ್ರತಿನಿಧಿಗಳು ವಿಧಾನಪರಿಷತ್‌ಗೆ ಉತ್ತಮರನ್ನು ಆಯ್ಕೆ ಮಾಡಬೇಕು. ಆಮಿಷದ ಮತಾಂತರ ತಡೆಯಲು ಕಾಯ್ದೆ ತರಬೇಕಿದೆ. ಇಂತಹ ಕಾನೂನು ತರಲು ಮೇಲ್ಪನೆಯಲ್ಲಿ ಹೆಚ್ಚಿನ ಬಲ ಬೇಕಿದೆ" ಎಂದರು.

    "ವಿಧಾನಪರಿಷತ್ ಚುನಾವಣೆ ಸ್ವಾಭಿಮಾನದ ಪ್ರಶ್ನೆಯಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರು ಕೂಡ ಸ್ವಾಭಿಮಾನದಿಂದ ಗೆದ್ದಿರುತ್ತಾರೆ. ಯಾವುದೇ ಆಸೆ, ಆಮಿಷಕ್ಕೆ ಬಲಿಯಾಗದೆ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಇದರಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕೈ ಬಲಪಡಿಸಿದಂತಾಗುತ್ತದೆ" ಎಂದರು.

    More From
    Prev
    Next
    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+