ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಚಾರ್ಲಿ 777' ವೀಕ್ಷಣೆಗೆ 'ಡಯನಾ''ಗೆ ಸಿಗ್ಲಿಲ್ಲ ಅನುಮತಿ, ಪ್ರತಿಭಟಸಿದ ಮಾಲೀಕ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜೂನ್ 12: ರಾಜ್ಯದಲ್ಲಿ ಈಗ ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಸಿನಿಮಾ ಎಲ್ಲರ ಮನ ಗೆದ್ದಿದೆ. ಹೊಡಿಬಡಿ ಆರ್ಭಟವಿಲ್ಲದೆ, ನಟನೆಯಿಂದಲೇ ದೇಶಾದ್ಯಂತ ಸಿನಿಮಾ ಗೆದ್ದಿದೆ. ಅದರಲ್ಲೂ ಈ ಸಿನಿಮಾದಲ್ಲಿರುವ ಶ್ವಾನ ಈಗ ಎಲ್ಲರ ಅಚ್ಚುಮೆಚ್ಚು. ಚಾರ್ಲಿಯ ನಟನೆಗೆ ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಇನ್ನು ಶ್ವಾನ ಸಾಕುವ, ಪ್ರೀತಿಸುವವರು ಥಿಯೇಟರ್ ನತ್ತ ಬರುತ್ತಿದ್ದಾರೆ. ಕೆಲವರಂತೂ ತಾವು ಸಾಕುತ್ತಿರುವ ಮುದ್ದಿನ ಶ್ವಾನದ ಜೊತೆ ಚಿತ್ರಮಂದಿರಗಳಿಗೆ ಬಂದು ಚಿತ್ರ ವೀಕ್ಷಣೆ ಮಾಡಲು ತುದಿಗಾಲ ಮೇಲೆ ನಿಂತಿದ್ದಾರೆ. ಆದರೆ, ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರಕ್ಕೆ ತನ್ನ ಮುದ್ದಿನ ನಾಯಿ "ಡಯಾನ'' ಜೊತೆ ಆಗಮಿಸಿದ್ದ ಮಾಲೀಕನಿಗೆ ಸಿನಿಮಾ ವೀಕ್ಷಣೆ ಅನುಮತಿ ಸಿಕ್ಕಿಲ್ಲ. ಇದು ಅವರಿಗೆ ನಿರಾಶೆ ಮತ್ತು ಬೇಸರ ತರಿಸಿದೆ.

ಸಿನಿಮಾ ಸ್ಫೂರ್ತಿ: ಮಂಗಳೂರು ಶ್ವಾನ ದಳದ ನಾಯಿಮರಿಗೆ ಚಾರ್ಲಿ ಹೆಸರುಸಿನಿಮಾ ಸ್ಫೂರ್ತಿ: ಮಂಗಳೂರು ಶ್ವಾನ ದಳದ ನಾಯಿಮರಿಗೆ ಚಾರ್ಲಿ ಹೆಸರು

ನಗರದ ಗೀತಾಂಜಲಿ ಚಿತ್ರಮಂದಿರದಲ್ಲಿ ಕೆಂಚ ಎಂಬುವವರು ಆನ್ ಲೈನ್ ನಲ್ಲಿ ಚಾರ್ಲಿ ಚಿತ್ರ ವೀಕ್ಷಿಸಲು ಮೂರು ಟಿಕೆಟ್ ಗಳನ್ನು ಬುಕ್ ಮಾಡಿದ್ದರು. ಅದರಂತೆ ಬೆಳಗಿನ ಶೋ ವೀಕ್ಷಿಸಲು ಬಂದಿದ್ದರು. ಹಸನ್ ಎಂಬುವವರೂ ಸಹ ತಾವು ಸಾಕುತ್ತಿರುವ ಶ್ವಾನದ ಜೊತೆ ಬಂದಾಗ ಪ್ರವೇಶ ನಿರಾಕರಿಸಲಾಗಿದೆ.

ಶ್ವಾನಪ್ರಿಯರ ಪ್ರತಿಭಟನೆ

ಶ್ವಾನಪ್ರಿಯರ ಪ್ರತಿಭಟನೆ

ತಮ್ಮ ಶ್ವಾನದೊಂದಿಗೆ ಸಿನಿಮಾ ವೀಕ್ಷಣೆಗೆ ಅವಕಾಶ ನೀಡದ ಕಾರಣ ಆಕ್ರೋಶಗೊಂಡ ಕೆಂಚ ಹಾಗೂ ಹಸನ್ ಅವರು ಚಿತ್ರಮಂದಿರದ ಮುಂದೆ ತಮ್ಮ ಶ್ವಾನಗಳ ಜೊತೆ ಪ್ರತಿಭಟನೆ ನಡೆಸಿದರು. ಫೇಸ್ ಬುಕ್ ನಲ್ಲಿ ಚಿತ್ರದ ಎರಡು ಸೀನ್‌ ನೋಡಿದಾಗ ತುಂಬಾ ಖುಷಿಯಾಯಿತು. ಚಾರ್ಲಿ ಸಿನಿಮಾ ತುಂಬಾ ಇಷ್ಟ ಆಗಿದೆ. ಆದ್ರೆ ಮುದ್ದಿನ ನಾಯಿ ಜೊತೆ ಹೋಗಿ ಸಿನಿಮಾ ವೀಕ್ಷಿಸಲಾಗಲಿಲ್ಲ ಎಂದು ಬೇಸರವಾಗಿದೆ. ಡಯಾನಾ ಜೊತೆ ನೋಡಬೇಕೆಂಬ ಆಸೆ ಇತ್ತು. ಶ್ವಾನಕ್ಕೂ ಮನರಂಜನೆ ಸಿಗುತಿತ್ತು. ಆದ್ರೆ ಇದಕ್ಕೆ ಅವಕಾಶ ಕೊಡದಿರುವುದು ಆಘಾತ ತಂದಿದೆ ಎಂದು ಕೆಂಚ ಎನ್ನುವವರು ಬೇಸರ ವ್ಯಕ್ತಪಡಿಸಿದ್ದಾರೆ.

ಡಯಾನ 777 ಹೆಸರಿಡಲು ನಿರ್ಧಾರ

ಡಯಾನ 777 ಹೆಸರಿಡಲು ನಿರ್ಧಾರ

'ಚಾರ್ಲಿ 777' ಪೆಟ್ ಲವರ್ಸ್ ಆಧಾರಿತ ಸಿನೆಮಾ ಆಗಿದೆ. ಆದ್ದರಿನ ನಾವು ನಮ್ಮ ಶ್ವಾನದೊಂದಿಗೆ ಸಿನಿಮಾ ನೋಡುವ ಉತ್ಸಾಹಕ್ಕೆ ಅಡಚಣೆ ಉಂಟಾಗಿದೆ. ‌ ಸಿನಿಮಾ ನೋಡಿದ ನಂತರ ಸಿನಿಮಾ ಪ್ರೇಕ್ಷಕರಿಗೆ ಸಿಹಿ ಹಂಚಿ ಬಳಿಕ ನಮ್ಮ ನಾಯಿಗೆ "ಡಯಾನಾ 777'' ಎಂದು ಹೆಸರಿಡಲು ನಿರ್ಧರಿಸಿದ್ದೆ. ಅವಕಾಶ ಸಿಗದಿರುವುದು ನಿರಾಶೆ ಉಂಟಾಗಿದೆ. ಜಿಲ್ಲಾಧಿಕಾರಿಯವರ ಅನುಮತಿ ತೆಗೆದುಕೊಂಡು ನಮ್ಮ ನಾಯಿಗೆ ಸಿನಿಮಾ ತೋರಿಸುತ್ತೇವೆ ಎಂದು ಕೆಂಚ ಹೇಳಿದ್ದಾರೆ.

ಗಾಂಧಿ ಕ್ಲಾಸ್‌ನಲ್ಲಿ ಟಿಕೆಟ್ ಬುಕ್ಕಿಂಗ್

ಗಾಂಧಿ ಕ್ಲಾಸ್‌ನಲ್ಲಿ ಟಿಕೆಟ್ ಬುಕ್ಕಿಂಗ್

ನಮಗೂ ಸಿನಿಮಾ ನೋಡುವ ಆಸೆ ಇದೆ. ಡಯಾನಗೂ ಅಷ್ಟೇ. ನಾಯಿ ಯಾರಿಗೂ ಕಡಿಯುವುದಿಲ್ಲ. ಎಸ್ ಎಸ್ ಮಾಲ್ ನಲ್ಲಿಯೂ ಸಿನಿಮಾದ ಟಿಕೆಟ್ ಬುಕ್ ಮಾಡಿದ್ದೇವೆ. ಅಲ್ಲಿಗೆ ಹೋಗುತ್ತೇವೆ. ಪ್ರಾಣಿ, ಪಕ್ಷಿಗಳನ್ನು ಒಳಗಡೆ ಬಿಡುವುದಿಲ್ಲ ಎಂಬ ಡಿಸಿ ಆದೇಶ ಹಿನ್ನೆಲೆಯಲ್ಲಿ ಬಿಡಲು ಆಗದು ಎಂದು ಚಿತ್ರಮಂದಿರದ ಮಾಲೀಕರು ಹೇಳಿದ್ದಾರೆ. ಡಯಾನಾ ಹೆಸರಿನಲ್ಲಿಯೂ ಟಿಕೆಟ್ ಬುಕ್ ಮಾಡಿದ್ದೇನೆ. ಬಾಲ್ಕನಿ ಬುಕ್ ಮಾಡಲಿಲ್ಲ. ಅಲ್ಲಿ ಪ್ರತಿಷ್ಠಿತರು ಕೂರುವುದರಿಂದ ಅವರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಮುಂಗಡವಾಗಿ ಟಿಕೆಟ್ ಕಾಯ್ದಿರಿಸಲಿಲ್ಲ. ಕೆಳಗಡೆ ಹೋದರೆ ಜನರು ಭಯಪಡುವುದಿಲ್ಲವೆಂದು ಬುಕ್ ಮಾಡಿದ್ದೇನೆ. ಗಾಂಧಿ ಕ್ಲಾಸ್ ನ ಮುಂಭಾಗದಲ್ಲಿ ಕುಳಿತು ನೋಡಬೇಕೆಂಬ ಆಸೆ ಇತ್ತು. ಈಡೇರದಿರುವುದು ತುಂಬಾನೇ ಬೇಸರ ತಂದಿದೆ ಎಂದು ಹೇಳಿದರು

ಚಾರ್ಲಿ 777 ಶ್ವಾನಪ್ರಿಯರಿಗೆ ಅಚ್ಚುಮೆಚ್ಚು

ಚಾರ್ಲಿ 777 ಶ್ವಾನಪ್ರಿಯರಿಗೆ ಅಚ್ಚುಮೆಚ್ಚು

ರಕ್ಷಿತ್ ಶೆಟ್ಟಿ ನಟಿಸಿರುವ '777 ಚಾರ್ಲಿ' ಸಿನಿಮಾ ನಾಯಿ ಮತ್ತು ಮನುಷ್ಯನ ನಡುವಿನ ಬಾಂಧವ್ಯವನ್ನು ತೋರಿಸಿದೆ. ದೇಶಾದ್ಯಂತ ಚಾರ್ಲಿಯ ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕುಟುಂಬ ಸಮೇತರಾಗಿ ಚಾರ್ಲಿ ನೋಡಲು ಥಿಯೇಟರ್‌ನತ್ತ ಆಗಮಿಸುತ್ತಿದ್ದಾರೆ. ಇನ್ನೂ ವಿಶೇಷವೆಂದರೆ ಈ ಸಿನಿಮಾ ನೋಡಿದ ನಂತರ ಹಲವಾರು ಮಂದಿ ತಮ್ಮ ನಾಯಿಗಳಿಗೆ ಚಾರ್ಲಿ ಎಂದು ನಾಮಕರಣ ಮಾಡುತ್ತಿದ್ದಾರೆ. ಇತ್ತೀಚಿಗೆ ಮಂಗಳೂರು ಶ್ವಾನದಳಕ್ಕೆ ಸೇರ್ಪಡೆಗೊಂಡ ನಾಯಿಮರಿಗೆ ಚಾರ್ಲಿ ಎಂದು ನಾಮಕರಣ ಮಾಡಲಾಗಿತ್ತು.

English summary
Two persons protested after theater personnel not allowed to watch a Charlie 777 cinema with his dog in Davangere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X