SSLC Results 2025: ಕ್ಯಾನ್ಸರ್‌ ಮೆಟ್ಟಿನಿಂತು ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿನಿ

SSLC Results 2025: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 21ರಿಂದ ಏಪ್ರಿಲ್ 4, 2025ರವರೆಗೆ ನಡೆದಿದ್ದವು. ಮೇ 2ರಂದು ಫಲಿತಾಂಶ ಪ್ರಕಟಿಸಿದ್ದು, ಸಮಸ್ಯೆ, ಕಷ್ಟಗಳಿದ್ದರೂ ಎಲ್ಲಾವರನ್ನು ಮೆಟ್ಟಿನಿಂತು ಉತ್ತಮ ಅಂಕಗಳನ್ನು ಪಡೆದು ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗಿರುವ ವಿದ್ಯಾರ್ಥಿಗಳಿದ್ದಾರೆ. ಈ ಸಾಲಿಗೆ ದಾವಣಗೆರೆ ಜಿಲ್ಲೆಯ ವಿದ್ಯಾರ್ಥಿನಿಯೊಬ್ಬಳು ಸೇರಿದ್ದಾಳೆ.

ಸಾಮಾನ್ಯವಾಗು ಬಹುತೇಕ ವಿದ್ಯಾರ್ಥಿಗಳು ಯಾವುದೋ ನೆಪದಲ್ಲಿ ವಿದ್ಯಾಭ್ಯಾಸದ ಕಡೆ ಗಮನಹರಿಸದೇ ಅನುತ್ತೀರ್ಣರಾಗಿರುವ ಘಟನೆಗಳು ನಡೆದಿವೆ. ಇಂತಹವರ ನಡುವೆಯೂ ಕೆಲವರು ಎಷ್ಟೇ ಸಮಸ್ಯೆಗಳಿದ್ದರೂ ಸಹ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದು ರಾಜ್ಯಕ್ಕೆ ಮಾದರಿಯಾಗಿರುವ ಉದಾಹರಣೆಗಳೂ ಇವೆ. ಹಾಗೆಯೇ ದಾವಣಗೆರೆ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಬ್ಲಡ್‌ ಕ್ಯಾನ್ಸರ್ ಇದ್ದರೂ ಸಹ ಎಸ್‌ಎಸ್‌ಎಲ್‌ಸಿಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದಾಳೆ.

SSLC Results 2025 Blood Cancer Survivor Student has great Achievement in Davanagere

ಬ್ಲಡ್‌ ಕ್ಯಾನ್ಸರ್‌ನಿಂದ ಬಳಲಿದ್ದ ದಾವಣಗೆರೆ ನಗರದ ನಿಟ್ಟುವಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯೊಬ್ಬಳು ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದು, ಇಡೀ ರಾಜ್ಯದ ಗಮನ ಸೆಳೆದಿದ್ದಾಳೆ. ವಿದ್ಯಾರ್ಥಿನಿ ಶಾಂತ ನಿಟ್ಟುವಳ್ಳಿಯ ನಿವಾಸಿಯಾಗಿದ್ದು, 9 ನೇ ತರಗತಿಯ ಅರ್ಧವಾರ್ಷಿಕ ಪರೀಕ್ಷೆ ಸಂದರ್ಭದಲ್ಲಿ ಆಕೆಗೆ ಬ್ಲಡ್ ಕ್ಯಾನ್ಸರ್ ಇದೆ ಎನ್ನುವುದು ಗೊತ್ತಾಗಿತ್ತು.

ಈಕೆ ತಂದೆ ಗಾರೆ ಕೆಲಸ ಮಾಡುತ್ತಿದ್ದರೆ, ತಾಯಿ ಕೂಲಿ‌ ಕೆಲಸ ಮಾಡಿ ಮಕ್ಕಳನ್ನು ಸಾಕುತ್ತಿದ್ದರು. ಮಗಳಿಗೆ ಆರೋಗ್ಯ ಸಮಸ್ಯೆ ಎದುರಾದಾಗ ಸಾರ್ವಜನಿಕರು ಹಾಗೂ ಶಿಕ್ಷಕರ ಸಹಕಾರದಿಂದ 13 ಲಕ್ಷ ರೂಪಾಯಿ ಖರ್ಚು ಮಾಡಿ ಗುಣಮಖ ಮಾಡಿದ್ದರು. ಹೀಗೆ ಆರೋಗ್ಯ ಸಮಸ್ಯೆಯಿದ್ದರೂ ಓದಿನ ಕಡೆಗೆ ಹೆಚ್ಚು ಗಮನಹರಿಸಿದ್ದ ವಿದ್ಯಾರ್ಥಿನಿ ಓದಿನಲ್ಲಿ ಮುಂದಿದ್ದಳು.

ಓದಿನಲ್ಲಿ ಏನಾದರೂ ಗೊಂದಲ ಇದ್ದರೆ ಶಿಕ್ಷಕರಿಗೆ ಕರೆ ಮಾಡಿ ಆ ಸಮಸ್ಯೆಯನ್ನು ಪರಿಹರಿಸಿಕೊಂಡು ಅಭ್ಯಾಸ ಮುಂದುವರೆಸುತ್ತದ್ದಳು. ಅಲ್ಲದೆ, ಈ ಬಾರಿ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತೆಗೆದುಕೊಳ್ಳಬೇಕೆಂದ ಹಠದಲ್ಲಿದ್ದ ಶಾಂತ ಆರೋಗ್ಯದ ಸಮಸ್ಯೆಯನ್ನು ಪಕ್ಕಕ್ಕಿಟ್ಟು ಉತ್ತಮವಾಗಿ ಓದಿ ಶೇಕಡ 94ರಷ್ಟು ಅಂಕಗಳನ್ನು ಪಡೆದು ಮಾದರಿಯಾಗಿದ್ದಾಳೆ.

ಒಂದು ವರ್ಷ ಶಾಲೆಗೆ ಗೈರಾಗಿ ಕಾಯಿಲೆಯಿಂದ ಗುಣಮುಖಳಾಗಿ ಈ ಸಾಧನೆ ಮಾಡಿದ್ದು, ಜಿಲ್ಲೆಯ ಜನ ಈ ವಿದ್ಯಾರ್ಥಿನಿಯ ಸಾಧನೆಗೆ ಮೆಚ್ಚುಗೆಗಳ ಸುರುಮಳೆಯನ್ನೇ ಹರಿಸುತ್ತಿದ್ದಾರೆ. ಇಂತಹ ವಿದ್ಯಾರ್ಥಿಗಳು ಸಿಗುವುದು ಅಪರೂಪ. ತುಂಬಾ ವಿದ್ಯಾರ್ಥಿಗಳು ಎಲ್ಲಾ ಸವಲತ್ತುಗಳು ಇದ್ದರೂ ಸಹ ಇಂತಹ ಸಾಧನೆ ಮಾಡಲು ಹಿಂದುಳಿದುಬಿಡುತ್ತಾರೆ. ಇಂತಹ ಸಾಧನೆಗೆ ಹೆಚ್ಚಾಗಿ ಕೈಹಾಕುವುದೇ ಬಡ ಕುಟುಂಬಗಳಿಂದ ಬಂದಂತಹ ಮಕ್ಕಳಾಗಿರುತ್ತಾರೆ. ಅಲ್ಲದೆ, ಅವರು ಬರೀ ಪುಸ್ತಕದ ಹುಳು ಅಷ್ಟೇ ಆಗಿರುವುದಿಲ್ಲ, ಬದಲಾಗಿ ಜೀವನದ ಪಾಠವನ್ನು ಸಹ ಚೆನ್ನಾಗಿ ಬಲ್ಲವರಾಗಿರುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+